Asianet Suvarna News Asianet Suvarna News

Maharashtraದಲ್ಲಿ ಭೀಕರ ಎನ್‌ಕೌಂಟರ್ : 26 ಮಾವೋವಾದಿಗಳು ಹತ!

*ಮಾವೋವಾದಿಗಳು ಬೀಡು ಬಿಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ!
*ಕಾರ್ಯಾಚರಣೆಯಲ್ಲಿ ಕನಿಷ್ಟ 26 ಮಾವೋವಾದಿಗಳು ಹತ : ಪೊಲೀಸ್ ಅಧೀಕ್ಷಕ
*ಹತ್ಯೆಯಾದವರಲ್ಲಿ ಮಾವೋವಾದಿ ಕೇಂದ್ರ ಸಮಿತಿ ಸದಸ್ಯ ಮಿಲಿಂದ್ ತೇಲ್ತುಂಬ್ಡೆ?
*ಭಾನುವಾರ ಬೆಳಿಗ್ಗೆ ಮೃತ ಮಾವೋವಾದಿಗಳ ಗುರುತು ಪತ್ತೆ ಕಾರ್ಯ!

At least 26 Maoists were killed in encounter in Gadchiroli Maharshtra say police mnj
Author
Bengaluru, First Published Nov 13, 2021, 10:53 PM IST
  • Facebook
  • Twitter
  • Whatsapp

ಮಹಾರಾಷ್ಟ್ರ(ನ.13): ಮಹಾರಾಷ್ಟ್ರದ ಗಡ್‌ಚಿರೋಲಿ (Gadchiroli ) ಜಿಲ್ಲೆಯ ದಟ್ಟ ಅರಣ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಭೀಕರ ಎನ್‌ಕೌಂಟರ್‌ನಲ್ಲಿ (Encounter) ಕನಿಷ್ಠ 26 ಮಾವೋವಾದಿಗಳು  (Maoist) ಹತರಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ನಾಲ್ವರು ಪೊಲೀಸರೂ (Police) ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ನಾಗ್ಪುರಕ್ಕೆ ಕರೆದೊಯ್ಯಲಾಗಿದೆ. ಗಾಯಗೊಂಡ ಪೊಲೀಸರನ್ನು ರವೀಂದ್ರ ನೈತಮ್ (42) ಸರ್ವೇಶ್ವರ ಅತ್ರಮ್ (34) ಮಹಾರು ಕುಡ್ಮೆಥೆ (34) ಮತ್ತು ಟಿಕಾರಾಂ ಕಟಾಂಗೆ (41) ಎಂದು ಗುರುತಿಸಲಾಗಿದೆ.

"ನಾವು ಇಲ್ಲಿಯವರೆಗೆ 26 ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಮೃತ ಮಾವೋವಾದಿಗಳನ್ನು ಭಾನುವಾರ ಬೆಳಿಗ್ಗೆ ಗುರುತಿಸಲಾಗುವುದು" ಎಂದು ಪೊಲೀಸ್ ಅಧೀಕ್ಷಕ (Superintendent of Police) ಅಂಕಿತ್ ಗೋಯಲ್ ಹೇಳಿದ್ದಾರೆ. ಈ ಎನ್‌ಕೌಂಟರ್ ಗಡ್‌ಚಿರೋಲಿಯ ಇತಿಹಾಸದಲ್ಲಿ ಅತ್ಯಂತ ಸುದೀರ್ಘ ಕಾರ್ಯಾಚರಣೆ. ಇದು ಬೆಳಿಗ್ಗೆ ಸುಮಾರು 6 ಗಂಟೆಗೆ ಪ್ರಾರಂಭವಾಗಿ  ಸಂಜೆ 4 ಗಂಟೆಗೆ ಕೊನೆಗೊಂಡಿತು.ಗಡ್ಚಿರೋಲಿ ಪೊಲೀಸರ ಸುಮಾರು 100 ಎಲೈಟ್ C-60 ಕಮಾಂಡೋಗಳು (Commando) ಕಾರ್ಯಾಚರಣೆಯನ್ನು ನಡೆಸಿದರು ಎಂದು ಪೊಲೀಸರು ಹೇಳಿದರೆ, C-60 ಕಮಾಂಡೋಗಳ 16 ತಂಡಗಳು ಒಟ್ಟು 500 ಕ್ಕೂ ಹೆಚ್ಚು ಪೋಲಿಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು ಎಂದು ಮೂಲಗಳು ತಿಳಿಸಿವೆ.

ಮಾವೋವಾದಿಗಳು ಬೀಡು ಬಿಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ!

ಮಾವೋವಾದಿಗಳು ಕಾಡಿನಲ್ಲಿ (Forest) ಬೀಡು ಬಿಟ್ಟಿರುವ ಬಗ್ಗೆ ಪೊಲೀಸರಿಗೆ ಮೊದಲೇ ಮಾಹಿತಿ ಇದ್ದ ಕಾರಣ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. "ಗುಂಪು ಮುಖ್ಯವಾಗಿ ಸಿಪಿಐ (ಮಾವೋವಾದಿ) ನ ಗಡ್ಚಿರೋಲಿ ವಿಭಾಗೀಯ ಸಮಿತಿಯ ಸದಸ್ಯ ಸುಖಲಾಲ್ (Sukhlal) ನೇತೃತ್ವದ ಕೊರ್ಚಿ ದಲಂ ಸದಸ್ಯರನ್ನು ಒಳಗೊಂಡಿತ್ತು. ಆದರೆ ಇತರ ಕೆಲವು ಗುಂಪಿನ ಸದಸ್ಯರು ಇದ್ದಿರಬೇಕು ಮತ್ತು ಎನ್‌ಕೌಂಟರ್ ಸುದೀರ್ಘವಾಗಿ ನಡೆದಿದೆ, ಹಾಗಾಗಿ ಮಾವೋವಾದಿಗಳು ಕೂಡ ತೀವ್ರ ಪ್ರತಿರೋಧ ನೀಡಿದ್ದಾರೆ ಎಂದು ಸೂಚಿಸುತ್ತದೆ" ಎಂದು ಮೂಲಗಳು ತಿಳಿಸಿವೆ.

Crime News; 8 ಮರ್ಡರ್ ಮಾಡಿದ್ದೇವೆ, ಬಾಯಿಬಿಟ್ರೆ ನಿಂದು 9ನೇದು'

26 ಮಾವೋವಾದಿ ಸಾವುನೋವುಗಳೊಂದಿಗೆ, ಶನಿವಾರದ ಎನ್‌ಕೌಂಟರ್ ಗಡ್ಚಿರೋಲಿ ಇತಿಹಾಸದಲ್ಲಿ ಎರಡನೇ ಅತಿದೊಡ್ಡ ಎನ್‌ಕೌಂಟರ್ ಆಗಿದೆ. ಏಪ್ರಿಲ್ 23, 2018 ರಂದು, ಗಡ್ಚಿರೋಲಿ ಪೊಲೀಸರು ಎರಡು ವಿಭಿನ್ನ ಚಕಮಕಿಗಳಲ್ಲಿ 40 ಮಾವೋವಾದಿಗಳನ್ನು ಹೊಡೆದುರುಳಿಸಿದ್ದರು. ಎಟಪಲ್ಲಿ ತಹಸಿಲ್‌ನ ಬೋರಿಯಾ-ಕಸ್ನಾಸೂರ್ ಪ್ರದೇಶದಲ್ಲಿ 34 ಮಂದಿ ಸಾವನ್ನಪ್ಪಿದ್ದರೆ, ಅಹೇರಿ ತಹಸಿಲ್‌ನಲ್ಲಿ ಅದೇ ಗುಂಪಿನ ಆರು ಮಂದಿ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿತ್ತು.

ಹತ್ಯೆಯಾದವರಲ್ಲಿ ಮಾವೋವಾದಿ ಕೇಂದ್ರ ಸಮಿತಿ ಸದಸ್ಯ ಮಿಲಿಂದ್ ತೇಲ್ತುಂಬ್ಡೆ?

ಶನಿವಾರದ ಎನ್‌ಕೌಂಟರ್ ನಂತರ, ಹತ್ಯೆಯಾದವರಲ್ಲಿ ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯ ಮಿಲಿಂದ್ ತೇಲ್ತುಂಬ್ಡೆ (Teltumbde) ಇದ್ದಾರೆ ಎಂಬ ವದಂತಿಗಳಿವೆ. ಸದ್ಯಕ್ಕೆ ಇದು ಕೇವಲ ವದಂತಿ ಎಂದು ಗೋಯಲ್ ಹೇಳಿದ್ದಾರೆ. ಎಲ್ಲಾ ದೇಹಗಳನ್ನು ಗುರುತಿಸಿದ ನಂತರ ನಾವು ಭಾನುವಾರ ಬೆಳಿಗ್ಗೆ ಖಚಿತವಾಗಿ ಹೇಳಲು ಸಾಧ್ಯವಾಗುತ್ತದೆ.

Bitcoin scam; ಎಲ್ಲ ಪ್ರಶ್ನೆಗೆ ಉತ್ತರ ಕೊಟ್ಟ ಪೊಲೀಸ್ ಇಲಾಖೆ,  ಒಂದು ವರ್ಷದಲ್ಲಿ ಆಗಿದ್ದಿಷ್ಟು!

ಕೆಲವು ದಿನಗಳ ಹಿಂದೆ ಶರಣಾಗಿದ್ದ ತೇಲ್ತುಂಬ್ಡೆ ಅವರ ಮಾಜಿ ಅಂಗರಕ್ಷಕ ರಾಕೇಶ್ ಅವರನ್ನು ಸಿಪಿಐ(ಮಾವೋವಾದಿ) ಮುಖಂಡರೂ ಸತ್ತವರಲ್ಲಿ ಇದ್ದಾರೆಯೇ ಎಂದು ಪರಿಶೀಲಿಸಲು ಪೊಲೀಸರು ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.ತೇಲ್ತುಂಬ್ಡೆ ಭೀಮಾ-ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ದಲಿತ ವಿಚಾರವಾದಿ ಆನಂದ್ ತೇಲ್ತುಂಬ್ಡೆ ಅವರ ಕಿರಿಯ ಸಹೋದರ. ಅವರು ಸಿಪಿಐ(ಮಾವೋವಾದಿ)ನ ಮಹಾರಾಷ್ಟ್ರ-ಮಧ್ಯಪ್ರದೇಶ-ಛತ್ತೀಸ್‌ಗಢ ವಲಯದ ಉಸ್ತುವಾರಿಯೂ ಆಗಿದ್ದಾರೆ.

Follow Us:
Download App:
  • android
  • ios