Asianet Suvarna News Asianet Suvarna News

Jammu and Kashmir Delimitation : ಕರಡು ಸಮಿತಿ ಶಿಫಾರಸಿಗೆ ಗುಪ್ಕರ್ ಮೈತ್ರಿಕೂಟ ವಿರೋಧ, ಪ್ರತಿಭಟನೆಗೆ ರೆಡಿ!

ಡಿಲಿಮಿಟೇಶನ್ ಆಯೋಗದ ಶಿಫಾರಸಿಗೆ ಗುಪ್ಕರ್ ಮೈತ್ರಿಕೂಟ ವಿರೋಧ
ಜನವರಿ 1 ರಂದು ಶ್ರೀನಗರದಲ್ಲಿ ಶಾಂತಿಯುತ ಪ್ರತಿಭಟನೆ
ಎನ್ ಸಿ ಅಧ್ಯಕ್ಷ ಫಾರುಕ್ ಅಬ್ದುಲ್ಲಾ ನೇತೃತ್ವದಲ್ಲಿ ನಡೆದ ಸಭೆ
 

Political parties in Kashmir opposed Delimitation Commissions draft paper san
Author
Bengaluru, First Published Dec 22, 2021, 12:03 AM IST
  • Facebook
  • Twitter
  • Whatsapp

ಶ್ರೀನಗರ (ಡಿ. 21): ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನದ (Jammu and Kashmir’s special status)ಮರುಸ್ಥಾಪನೆಗಾಗಿ ಒತ್ತಾಯಿಸುತ್ತಿರುವ ಆರು ಪಕ್ಷಗಳ ಗುಪ್ಕರ್ ಮೈತ್ರಿಕೂಟ (Gupkar alliance), ಮಂಗಳವಾರ ಜಮ್ಮು ಮತ್ತು ಕಾಶ್ಮೀರ ಡಿಲಿಮಿಟೇಷನ್ ಆಯೋಗದ (Delimitation Commission )ಕರಡು ಶಿಫಾರಸನ್ನು ತಿರಸ್ಕರಿಸಿದೆ. ಇದು ತಮಗೆ ಸ್ವೀಕಾರವಲ್ಲ ಎಂದಿರುವ ಮೈತ್ರಿಕೂಟ ರಾಜ್ಯವನ್ನು ವಿಭಜಿಸುವ ಪ್ರಸ್ತಾಪ ಇದಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಇವೆಲ್ಲವುಗಳ ವಿರುದ್ಧ ಜನವರಿ 1 ರಂದು ಶ್ರೀನಗರದಲ್ಲಿ(Srinagar )ಮೈತ್ರಿಕೂಟ ಪ್ರತಿಭಟನೆಯನ್ನು ನಡೆಸಲಿದೆ ಎಂದು ತಿಳಿಸಿದೆ.

ಸೋಮವಾರ ನಡೆದ ಸಭೆಯಲ್ಲಿ ಜಮ್ಮು ಭಾಗದಲ್ಲಿ ಆರು ವಿಧಾನಸಭಾ ಕ್ಷೇತ್ರಗಳು ಹಾಗೂ ಕಾಶ್ಮೀರದಲ್ಲಿ ಒಂದು ವಿಧಾನಸಭಾ ಕ್ಷೇತ್ರವನ್ನು ಸೇರಿಸುವ ಮೂವರು ಸದಸ್ಯರ ಡಿಲಿಮಿಟೇಶನ್ (ಗಡಿ ನಿರ್ಣಯ) ಆಯೋಗದ ಕರಡು ಶಿಫಾರಸನ್ನು ಕಾಶ್ಮೀರದ ಐವರು ಸದಸ್ಯರಿಗೆ ವಿತರಣೆ ಮಾಡಲಾಗಿತ್ತು. ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಒಬ್ಬ ಸದಸ್ಯ, ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ) ಪಕ್ಷದ ಇಬ್ಬರು ಸದಸ್ಯರಿರುವ ಡಿಲಿಮಿಟೇಶನ್ ಆಯೋಗ, ಒಂಬತ್ತು ಸ್ಥಾನಗಳನ್ನು ಪರಿಶಿಷ್ಠ ಪಂಗಡಗಳು ಮತ್ತು ಏಳು ಸ್ಥಾನಗಳನ್ನು ಪರಿಶಿಷ್ಟ ಜಾತಿಗಳಿಗೆ ನೀಡಲು ತೀರ್ಮಾನ ಮಾಡಿದೆ. ಇದು ಕೇಂದ್ರಾಡಳಿತ ಪ್ರದೇಶದ ಇತಿಹಾಸದಲ್ಲಿ ಮೊದಲ ಬಾರಿಯಾಗಿದೆ. 

ಈ ಶಿಫಾರಸಿಗೆ ಅಂಗೀಕಾರ ಸಿಕ್ಕಲ್ಲಿ, ಜಮ್ಮು ಕಾಶ್ಮೀರದಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 83 ರಿಂದ 90ಕ್ಕೇರಲಿದೆ. ಜಮ್ಮು ಪ್ರದೇಶದಲ್ಲಿ 43 ಹಾಗೂ ಕಾಶ್ಮೀರ ಭಾಗದಲ್ಲಿ 47 ವಿಧಾನಸಭಾ ಕ್ಷೇತ್ರಗಳು ಇದ್ದಂತಾಗಲಿದೆ. ಪ್ರಸ್ತುತ ಜಮ್ಮುವಿನಲ್ಲಿ 37 ಹಾಗೂ ಕಾಶ್ಮೀರದಲ್ಲಿ 46 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.

ಆರ್ಟಿಕಲ್ 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರುಸ್ಥಾಪನೆ ಮಾಡಲು ಹೋರಾಟ ನಡೆಸುತ್ತಿರುವ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಶನ್ (ಪಿಎಜಿಡಿ) ( Peoples Alliance for Gupkar Declaration) 2020ರ ಅಕ್ಟೋಬರ್ 20 ರಂದು ಸ್ಥಾಪನೆ ಮಾಡಲಾಗಿತ್ತು. ಕರುಡು ಶಿಫಾರಸಿನ ವಿಚಾರವಾಗಿ ಮಂಗಳವಾರ ಎನ್ ಸಿ ಅಧ್ಯಕ್ಷ ಫಾರುಖ್ ಅಬ್ದುಲ್ಲಾ (NC president Farooq Abdullah)ನೇತೃತ್ವದಲ್ಲಿ ಸಭೆ ಸೇರಿದ ಪಿಎಜಿಡಿ, ಎಲ್ಲಾ ಶಿಫಾರಸುಗಳನ್ನು ತಿರಸ್ಕಾರ ಮಾಡುವುದರೊಂದಿಗೆ ಇದರ ವಿರುದ್ಧ ಪ್ರತಿಭಟನೆಗೆ ಇಳಿಯುವುದಾಗಿ ಹೇಳಿದೆ. ಅಬ್ದುಲ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ( Peoples Democratic Party president Mehbooba Mufti), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಯೂಸುಫ್ ತರಿಗಾಮಿ, ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ, ಮುಜುಫರ್ ಷಾ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.

Article 370 Abrogation: 1,678 ವಲಸಿಗರು ಜಮ್ಮು ಕಾಶ್ಮೀರಕ್ಕೆ ವಾಪಸ್!
ಮೈತ್ರಿಕೂಟದ ನಾಯಕತ್ವವು ಶಾಂತಿಯನ್ನು ಬಯಸುತ್ತದೆ ಹೊಡೆದಾಟವನ್ನಲ್ಲ. ಜನರ ನ್ಯಾಯಸಮ್ಮತ ಹಕ್ಕಿಗಾಗಿ ನಾವು ಶಾಂತಿಯುತವಾಗಿ ಧ್ವನಿ ಎತ್ತುತ್ತೇವೆ. ನಾವು ಹಾಗೂ ನಮ್ಮ ಜನರು ಎಂದಿಗೂ ಒಪ್ಪಲಾಗದ ಡಿಲಿಮಿಟೇಶನ್ ಆಯೋಗದ ಶಿಫಾರಸಿನ ವಿರುದ್ಧ ಜನವರಿ 1 ರಂದು ಶ್ರೀನಗರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ ಎಂದು ತಾರಿಗಾಮಿ ಹೇಳಿದ್ದಾರೆ. ಡಿಲಿಮಿಟೇಶನ್ ಆಯೋಗದ ಪ್ರಸ್ತಾವನೆಗಳು...ವಿಭಜಕ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರ ಹಿತಾಸಕ್ತಿಗಳಲ್ಲಿಲ್ಲ" ಎಂದು ಅವರು ಹೇಳಿದರು.

ಕಾಶ್ಮೀರ ಯುವಕರ ಜೊತೆ ಮಾತನಾಡುತ್ತೇನೆ, ಪಾಕ್ ಜೊತೆಗಲ್ಲ; ಕುಟುಕಿದ ನಾಯಕರಿಗೆ ಶಾ ತಿರುಗೇಟು!
ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir ) ಹೊಸ ಚುನಾವಣಾ ಪ್ರದೇಶಗಳನ್ನು ರೂಪಿಸುವ ಗುರಿಯನ್ನು ಹೊಂದಿರುವ ಡಿಲಿಮಿಟೇಶನ್ ಆಯೋಗವನ್ನು 2020ರ ಮಾರ್ಚ್ ನಲ್ಲಿ ಆರಂಭಿಸಲಾಗಿತ್ತು. ಮೂರು ವರ್ಷಗಳಿಂದ ಕೇಂದ್ರದ ಆಡಳಿತದಲ್ಲಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಚುನಾವಣೆಗಳನ್ನು ನಡೆಸುವ ಮೊದಲ ಹೆಜ್ಜೆಯಾಗಿ ಡಿಮಿಲಿಟೇಶನ್ ಆಯೋಗದ ಶಿಫಾರಸುಗಳನ್ನು ನೋಡಲಾಗುತ್ತಿದೆ. 2019ರ ಆಗಸ್ಟ್ 5 ರಂದು ಕೇಂದ್ರ ಸರ್ಕಾರವು ತನ್ನ ಐತಿಹಾಸಿಕ ನಿರ್ಣಯದಲ್ಲಿ ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ಅನೂರ್ಜಿತ ಮಾಡಿತ್ತು. ಆ ಬಳಿಕ ಕಳೆದ ಜೂನ್ ನಲ್ಲಿ ನಡೆದ ಸರ್ವಪಕ್ಷಗಳ ಮಹತ್ವದ ಸಭೆಯಲ್ಲಿ ಡಿಲಿಮಿಟೇಶನ್ ಆಯೋಗದ ಶಿಫಾರಸು ಹಾಗೂ ಅದರ ಜಾರಿಯ ಬಳಿಕ ನಡೆಯಲಾಗುವ ಚುನಾವಣೆಯೊಂದಿಗೆ ಜಮ್ಮು-ಕಾಶ್ಮೀರದಲ್ಲಿ ರಾಜ್ಯತ್ವವನ್ನು ಪುನಃ ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

Follow Us:
Download App:
  • android
  • ios