Asianet Suvarna News Asianet Suvarna News

Jammu and Kashmir Delimitation : ಗಡಿನಿರ್ಣಯ ಆರಂಭವಾಗಿದೆ, ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರಕ್ಕೆ ಚುನಾವಣೆ!

ಜಮ್ಮು ಕಾಶ್ಮೀರದಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆ ಆರಂಭ
ಶೀಘ್ರದಲ್ಲೇ ಕಣಿವೆ ರಾಜ್ಯಕ್ಕೆ ಚುನಾವಣೆ ಎಂದ ಗೃಹ ಸಚಿವ ಅಮಿತ್ ಷಾ
ಡಿಲಿಮಿಟೇಶನ್ ಗೆ ವಿರೋಧ ವ್ಯಕ್ತಪಡಿಸಿದ್ದ ಗುಪ್ಕರ್ ಮೈತ್ರಿಕೂಟ 

Union Home Minister Amit Shah says delimitation process in Jammu and Kashmir has started and soon elections will be held san
Author
Bengaluru, First Published Jan 22, 2022, 5:02 PM IST

ನವದೆಹಲಿ (ಜ. 22): ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir)  ಡಿಲಿಮಿಟೇಶನ್ (delimitation) ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಶೀಘ್ರದಲ್ಲಿಯೇ ಈ ರಾಜ್ಯಕ್ಕೆ ಚುನಾವಣೆ ನಡೆಯಲಿದ್ದು ಆ ಮೂಲಕ ರಾಜ್ಯಾಧಿಕಾರವನ್ನು ಮರಳಿ ಪಡೆಯಲಿದೆ ಎಂದು ಕೇಂದ್ರ ಗೃಹ ಸಚಿವ (Union Home Minister ) ಅಮಿತ್ ಷಾ (Amit Shah) ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಉತ್ತಮ ಆಡಳಿತ ಸೂಚ್ಯಂಕ ಬಿಡುಗಡೆ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದ ಕೇಂದ್ರ ಸಚಿವ ಈ ವೇಳೆ ಜಮ್ಮು ಕಾಶ್ಮೀರದಲ್ಲಿ ಮುಂದಿನ ದಿನಗಲ್ಲಾಗುವ ಬದಲಾವಣೆಯ ಬಗ್ಗೆ ಮಾತನಾಡಿದರು.

“ರಾಜ್ಯದಲ್ಲಿ ಈಗಾಗಲೇ ಕರಡು ಸಮಿತಿಯ ಶಿಫಾರಸಿನ ಅನ್ವಯ ಡಿಲಿಮಿಟೇಶನ್ ಪ್ರಾರಂಭವಾಗಿದೆ ಮತ್ತು ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಈಗಾಗಲೇ ಲೋಕಸಭೆಯಲ್ಲಿ ಹೇಳಿರುವಂತೆ, ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸಹಜವಾದ ಬಳಿಕ, ಇಲ್ಲಿ ರಾಜ್ಯತ್ವವನ್ನು ಮರಳಿ ನೀಡಲಾಗುವುದು. ಕೇಂದ್ರ ಸರ್ಕಾರದ ವಿರುದ್ಧ ಈ ವಿಚಾರವಾಗಿ ಟೀಕೆ ಮಾಡುತ್ತಿರುವ ಪಕ್ಷಗಳು, ತಮ್ಮ ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿದೆ' ಎಂದು ಕಿಡಿಕಾರಿದರು.

“ಹಲವು ನಾಯಕರು ಸುಳ್ಳು ಮಾತನಾಡುತ್ತಿದ್ದಾರೆ ಮತ್ತು ಅಪಪ್ರಚಾರ ಮಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿಗಳಬಂಡವಾಳ ಈ ರಾಜಯಕ್ಕೆ ಬರುತ್ತಿದೆ. ಪ್ರವಾಸಿಗರು ಮುಕ್ತವಾಗಿ ಬರುತ್ತಿದ್ದಾರೆ ಎನ್ನುವುದನ್ನು ಇಲ್ಲಿನ ಯುವಕರಿಗೆ ತಿಳಿಸಲು ಬಯಸುತ್ತೇನೆ. ಆದರೆ, ರಾಜಕೀಯಪಕ್ಷಗಳು ತಮ್ಮ ಉದ್ದೇಶದ ಈಡೇರಿಕೆಗಾಗಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅವರ ಪ್ರಜಾಪ್ರಭುತ್ವವವು ಕೆಳಮಟ್ಟಕ್ಕೆ ತಲುಪಿದೆ ಹಾಗಾಗಿಯೇ ಇಂಥ ಮಾತುಗಳನ್ನು ಹೇಳುತ್ತಿದ್ದಾರೆ. ಆದ್ದರಿಂದ ಇಲ್ಲಿನ ಜನತೆ ಅವರ ಮಾತಿಗೆ ಕಿವಿಗೊಡಬಾರದು" ಎಂದು ಹೇಳಿದರು.
 


2019ರ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿದೆ. ಅಂದು ಈ ಕೇಂದ್ರಾಡಳಿತ ಪ್ರದೇಶದಲ್ಲಿ 87 ಶಾಸಕರಿದ್ದರು ಆದರೆ, ಕೇವಲ ಮೂರು ಕುಟುಂಬಗಳು ಅಧಿಕಾರ ನಡೆಸುತ್ತಿದ್ದವು. ಇಂದು 30 ಸಾವಿರಕ್ಕೂ ಅಧಿಕ ಜನಪ್ರತಿನಿಧಿಗಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯಿಂದ ಪರಿಸ್ಥಿತಿ ಹದಗೆಟ್ಟಿದೆ ಎಂದು ಈ ಕುಟುಂಬಗಳು ಪ್ರಚಾರ ಮಾಡುತ್ತಿವೆ. ಆದರೆ, 2019ರ ಬಳಿಕ ರಾಜ್ಯದಲ್ಲಿ ಭಯೋತ್ಪಾದನಾ ವಿಚಾರಗಳಲ್ಲಿ ಶೇ 40ರಷ್ಟು ಕಡಿಮೆಯಾಗಿದ್ದರೆ, ಹತ್ಯೆಗಳ ವಿಚಾರದಲ್ಲಿ ಶೇ. 87ರಷ್ಟು ಇಳಿಕೆಯಾಗದೆ ಎಂದು ಅಮಿತ್ ಷಾ ಹೇಳಿದ್ದಾರೆ.

 Jammu and Kashmir Delimitation : ಕರಡು ಸಮಿತಿ ಶಿಫಾರಸಿಗೆ ಗುಪ್ಕರ್ ಮೈತ್ರಿಕೂಟ ವಿರೋಧ, ಪ್ರತಿಭಟನೆಗೆ ರೆಡಿ!
ಡಿಲಿಮಿಟೇಶನ್ ಸಂಪೂರ್ಣವಾಗಿ ಜಾರಿಯಾದಲ್ಲಿ ಜಮ್ಮು ಕಾಶ್ಮೀರದಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 83 ರಿಂದ 90ಕ್ಕೇರಲಿದೆ. ಜಮ್ಮು ಪ್ರದೇಶದಲ್ಲಿ 43 ಹಾಗೂ ಕಾಶ್ಮೀರ ಭಾಗದಲ್ಲಿ 47 ವಿಧಾನಸಭಾ ಕ್ಷೇತ್ರಗಳು ಇದ್ದಂತಾಗಲಿದೆ. ಪ್ರಸ್ತುತ ಜಮ್ಮುವಿನಲ್ಲಿ 37 ಹಾಗೂ ಕಾಶ್ಮೀರದಲ್ಲಿ 46 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಇನ್ನು ಆರ್ಟಿಕಲ್ 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರುಸ್ಥಾಪನೆ ಮಾಡಲು ಹೋರಾಟ ನಡೆಸುತ್ತಿರುವ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಶನ್ (ಪಿಎಜಿಡಿ) ( Peoples Alliance for Gupkar Declaration) ಡಿಲಿಮಿಟೇಶನ್ ಶಿಫಾರಸಿಗೆ ವಿರೋಧ ಹೊಂದಿದ್ದು,ಇದರ ವಿರುದ್ಧ ಪ್ರತಿಭಟನೆಯನ್ನೂ ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir ) ಹೊಸ ಚುನಾವಣಾ ಪ್ರದೇಶಗಳನ್ನು ರೂಪಿಸುವ ಗುರಿಯನ್ನು ಹೊಂದಿರುವ ಡಿಲಿಮಿಟೇಶನ್ ಆಯೋಗವನ್ನು 2020ರ ಮಾರ್ಚ್ ನಲ್ಲಿ ಆರಂಭಿಸಲಾಗಿತ್ತು. ಮೂರು ವರ್ಷಗಳಿಂದ ಕೇಂದ್ರದ ಆಡಳಿತದಲ್ಲಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಚುನಾವಣೆಗಳನ್ನು ನಡೆಸುವ ಮೊದಲ ಹೆಜ್ಜೆಯಾಗಿ ಡಿಮಿಲಿಟೇಶನ್ ಆಯೋಗ ತನ್ನ ಶಿಫಾರಸುಗಳನ್ನು ನೀಡಿತ್ತು.

 

Follow Us:
Download App:
  • android
  • ios