Assembly Elections 2022 Result ಕರ್ನಾಟಕ ಕಾಂಗ್ರೆಸ್‌ಗೆ ಪಂಜಾಬ್ ಸ್ಥಿತಿ ದೂರವಿಲ್ಲ, ರಾಜ್ಯ ಕೈ ಶಾಸಕರ ಆತಂಕ!
- ಅಧಿಕಾರದಲ್ಲಿದ್ದ ಒಂದೊಂದೆ ರಾಜ್ಯ ಕಳೆದುಕೊಳ್ಳುತ್ತಿದೆ ಕಾಂಗ್ರೆಸ್
- ನಾಯಕರ ಕಚ್ಚಾಟ,ಗುಂಪುಗಾರಿಕೆಯಿಂದ ಪಂಜಾಬ್‌ನಲ್ಲಿ ಹಿನ್ನಡೆ
- ಈ ಪರಿಸ್ಥಿತಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಸೃಷ್ಟಿ
ಬೆಂಗಳೂರು(ಮಾ.10): ಪಂಜಾಬ್ ವಿಧಾನಸಭಾ ಚುನಾವಣಾ ಫಲಿತಾಂಶ ಅಚ್ಚರಿಯಲ್ಲ. ಇದು ಚುನಾವಣೆಗೂ ಮೊದಲೇ ರಾಜಕೀಯ ಪಂಡಿತರಿಗೆ ತಿಳಿದಿರುವ ವಿಚಾರವಾಗಿತ್ತು. ಇನ್ನು ಸಮೀಕ್ಷೆಗಳು ಕೂಡ ಆಮ್ ಆದ್ಮಿ ಪಾರ್ಟಿ ಅತೀ ದೊಡ್ಡ ಪಕ್ಷವಾಗಿ ಸರ್ಕಾರ ರಚಿಸಲಿದೆ ಎಂದಿದೆ. ಇದೆಲ್ಲವೂ ನಿಜವಾಗಿದೆ. ಪಂಜಾಬ್‌ನಲ್ಲಿ ಆಪ್ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 18 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಪಂಜಾಬ್ ಚುನಾವಣಾ ಫಲಿತಾಂಶ ಗಮನಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬರವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇದೇ ಪರಿಸ್ಥಿತಿ ಎದುರಿಸುವ ಸಾಧ್ಯತೆ ದಟ್ಟವಾಗಿದೆ ಎಂದಿದ್ದಾರೆ.
ಪಂಜಾಬ್, ಗೋವಾ, ಉತ್ತರಖಂಡ್ ಸೋಲಿಗೆ ಕರ್ನಾಟಕ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ. ಕಾಂಗ್ರೆಸ್ ದಯನೀಯ ಪರಿಸ್ಥಿತಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲೂ ಎದುರಾಗಲಿದೆ. ಪಂಜಾಬ್ ಕಾಂಗ್ರೆಸ್‌ನಲ್ಲಿರುವ ಒಳಜಗಳ, ಬಣರಾಜಕೀಯ ಸೇರಿದಂತೆ ಹಲವು ಸಮಸ್ಯೆಗಳು ಕರ್ನಾಟಕ ಕಾಂಗ್ರೆಸ್‌ನಲ್ಲಿವೆ ಎಂದು ರಾಜ್ಯದ ಕೈ ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ.
Assembly Elections 2022 Result: 4 ರಾಜ್ಯಗಳಲ್ಲಿ ಮತ್ತೆ ಬಿಜೆಪಿ, ಪಂಜಾಬ್‌ನಲ್ಲಿ ಆಮ್ ಆದ್ಮಿ
ವಿಧಾನಸಭೆಯ ಮೊಗಸಾಲೆಯಲ್ಲಿ ಕೈ ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಪಕ್ಷದಲ್ಲಿ ಸೃಷ್ಟಿಸಿದ ಬಣರಾಜಕೀಯ, ಕಚ್ಚಾಟ ನೇರವಾಗಿ ಸೋಲಿಗೆ ಗುರಿಯಾಗಿದೆ. ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಸಿಧು ಹಲವು ಕಸರತ್ತು ನಡೆಸಿರುವುದು ಗೌಪ್ಯವಾಗಿ ಉಳಿದುಕೊಂಡಿಲ್ಲ. ಈ ಕಚ್ಚಾಟ ಸೇರಿದಂತೆ ಎಲ್ಲಾ ಸವಾಲುಗಳು ಕರ್ನಾಟಕ ಕಾಂಗ್ರೆಸ್‌ನಲ್ಲೂ ಇದೇ. ಹೀಗಾಗಿ ಮುಂಬರವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟವಾಗು ದಿನ ದೂರವಿಲ್ಲ ಎಂದು ಸ್ವತಃ ಕಾಂಗ್ರೆಸ್ ನಾಯಕರೇ ಆತಂಕ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಫಲಿತಾಂಶ ಚುನಾವಣೆ
ಆಮ್ ಆದ್ಮಿ ಪಾರ್ಟಿ 90 ಸ್ಥಾನಗಳಲ್ಲಿ ಮುನ್ನಡೆ
ಬಿಜೆಪಿ 2 ಸ್ಥಾನಗಳಲ್ಲಿ ಮುನ್ನಡೆ
ಕಾಂಗ್ರೆಸ್ 18 ಸ್ಥಾನಗಲ್ಲಿ ಮುನ್ನಡೆ
ಶಿರೋಮಣಿ ಅಕಾಲಿದಳ 6 ಸ್ಥಾನಗಳಲ್ಲಿ ಮುನ್ನಡೆ
ಇತರರು 1 ಸ್ಥಾನದಲ್ಲಿ ಮುನ್ನಡೆ
ಕರ್ನಾಟಕ ಸಿಎಂ ಅಭ್ಯರ್ಥಿ ರೇಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಇದರ ನಡುವೆ ಡಾ.ಜಿ ಪರಮೇಶ್ವರ್ ನೀಡಿರುವ ಕೆಲ ಹೇಳಿಕೆಗಳು ಸಿಎಂ ರೇಸ್‌ನಲ್ಲಿ ಸ್ಥಾನ ಪಡೆದುಕೊಳ್ಳುವಂತೆ ಮಾಡಿದೆ. ಇನ್ನು ಡಿಕೆಶಿ ಹಾಗೂ ಸಿದ್ದು ಬಣ ರಾಜಕೀಯ ಕಾಂಗ್ರೆಸ್‌ನಲ್ಲಿ ಹೆಚ್ಚಾಗಿದೆ ಅನ್ನೋ ಆರೋಪಗಳು ಮುಂಬರವು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಳುವಾಗಲಿದೆ.
4 ರಾಜ್ಯಗಳ ಪೋಲ್ ಆಫ್ ಪೋಲ್
ಪಂಜಾಬ್: ಒಟ್ಟು ಸ್ಥಾನ 117
ಬಹುಮತ 59
ಒಟ್ಟು ಸಮೀಕ್ಷೆ 8: 8ರಲ್ಲೂ ಆಪ್
ಪಕ್ಷ ಪೋಲ್ ಆಫ್ ಪೋಲ್
ಆಪ್ 67
ಕಾಂಗ್ರೆಸ್ 24
ಅಕಾಲಿದಳ 19
ಬಿಜೆಪಿ+ 15
ಇತರರು 02
ಕಾಂಗ್ರೆಸ್- ಅಕಾಲಿ ದಳದ ಆಡುಂಬೊಲವಾಗಿದ್ದ ಪಂಜಾಬ್‌ನಲ್ಲಿ ಆಪ್ ರೂಪದಲ್ಲಿ 3ನೇ ಶಕ್ತಿ ಉದಯ ಸಾಧ್ಯತೆ. ದೆಹಲಿ ಬಳಿಕ 2ನೇ ರಾಜ್ಯದಲ್ಲಿ ಭರ್ಜರಿ ಬಹುಮತದೊಂದಿಗೆ ಆಪ್ ಅಧಿಕಾರಕ್ಕೇರುವ ಬಗ್ಗೆ ಸಮೀಕ್ಷೆಗಳ ಭವಿಷ್ಯ.