ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ.85ರಷ್ಟು ದಾಖಲೆಯ ಮತದಾನವಾಗಿದೆ. ಆಡಳಿತಾರೂಢ ಡಿಎಂಕೆ, ಎಐಎಡಿಎಂಕೆ-ಬಿಜೆಪಿ ಮತ್ತು ನಟ ವಿಜಯ್ ಅವರ ಟಿವಿಕೆ ನಡುವಿನ ತ್ರಿಕೋನ ಸ್ಪರ್ಧೆಯ ಫಲಿತಾಂಶವು ಇವಿಎಂನಲ್ಲಿ ಭದ್ರವಾಗಿದೆ.

ಡಿಎಂಕೆ- ಅಣ್ಣಾಡಿಎಂಕೆ-ಟಿವಿಕೆ ನಡುವಿನ ಫೈಟ್ ಕ್ರೈ ಮ್ಯಾಕ್ಸ್‌ ಹಂತಕ್ಕೆ

ಚೆನ್ನೈ: ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ದಾಖಲೆಯ ಶೇ.85ರಷ್ಟು ಮತ ಚಲಾವಣೆಯಾಗಿದೆ. 2011ರಲ್ಲಿ ಎಐಎಡಿಎಂಕೆ ಭರ್ಜರಿ ಜಯ ಸಾಧಿಸಿದ್ದ ಚುನಾವಣೆಯಲ್ಲಿ ಶೇ.78.29 ರಷ್ಟು ಮತ ಚಲಾವಣೆಯಾಗಿದ್ದೇ ಇದುವರೆಗಿನ ದಾಖಲೆಯಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರದ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವುದರೊಂದಿಗೆ ಆಡಳಿತಾ ರೂಢ ಡಿಎಂಕೆ, ಆಣ್ಣಾಡಿಎಂಕೆ-ಬಿಜೆಪಿ ಮತ್ತು ನಟ ವಿಜಯ್ ನೇತೃತ್ವದ ಟಿವಿಕೆ ನಡುವೆ ತ್ರಿಕೋನ ಸಮರಕ್ಕೆ ವೇದಿಕೆಯಾಗಿದ್ದ ಚುನಾವಣಾ ಕಣ ಕ್ರೈಮ್ಯಾಕ್ಸ್‌ ಹಂತ ತಲುಪಿದಂತಾಗಿದೆ.

ತಮಿಳುನಾಡಲ್ಲಿ ತ್ರಿಕೋನ ಸಮರ: ದಾಖಲೆಯ ಶೇ.85ರಷ್ಟು ಮತದಾನ

234 ಕ್ಷೇತ್ರಗಳಿಗೆ ಒಟ್ಟು 4023 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 75064 ಮತಗಟ್ಟೆಗಳ ಮೂಲಕ ರಾಜ್ಯದ ಜನತೆ ಅಭ್ಯರ್ಥಿಗಳ ಹಣೆ ಬರಹವನ್ನು ಇವಿಎಂ ಯಂತ್ರದ ಮೂಲಕ ನಿರ್ಧರಿಸಿದ್ದಾರೆ. ಗುರುವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು.

ಮತದಾರರು ಇಳಿದರೂ ಮತ ಏರಿಕೆ: ಚುನಾವಣೆಗೂ ಮುನ್ನ ರಾಜ್ಯದಲ್ಲಿ ವಿಶೇಷ ಮತ ದಾರರ ಪಟ್ಟಿ ಪರಿಷ್ಕರಣೆ ನಡೆಸಲಾಗಿತ್ತು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ ಮತದಾರರ ಸಂಖ್ಯೆ 6.41 ಕೋಟಿಯಿಂದ 5.73 ಕೋಟಿಗೆ ಇಳಿದಿತ್ತು. ಆದರೂ ದಾಖಲೆ ಪ್ರಮಾಣದಲ್ಲಿ ಮತದಾನ ದಾಖಲಾಗಿದ್ದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಹಾಲಿವುಡ್‌ ಸ್ಟೈಲಲ್ಲಿ ಭಾರತದ ನೌಕೆ ವಶಕ್ಕೆ ಪಡೆದ ಇರಾನ್: ವೀಡಿಯೋ ಬಿಡುಗಡೆ : ಟ್ರಂಪ್‌ಗೆ ಪರೋಕ್ಷ ಟಾಂಗ್‌?