ಲಖನೌ(ಮಾ13): ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಪತ್ರಕರ್ತರ ನಡುವಿನ ಗುದ್ದಾಟ ತಾರಕಕ್ಕೇರಿದೆ. ಗುರುವಾರ(ಮಾ.11) ಅಖಿಲೇಶ್ ಯಾದವ್ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಗಲಾಟೆಯೇ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತ ಪತ್ರಕರ್ತರ ಸಂಘ ಅಖಿಲೇಶ್ ಯಾದವ್ ವಿರುದ್ಧ ದೂರು ನೀಡಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಅಖಿಲೇಶ್‌ ವಿರುದ್ಧ ಸಂಸದ ತೇಜಸ್ಚಿ ಸೂಯ್ ಕಿಡಿ

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಅಖಿಲೇಶ್ ಹಾಗೂ ಸಮಾಜವಾದಿ ಪಕ್ಷದ 20 ಮಂದಿ ವಿರುದ್ಧ FIR ದಾಖಲಿಸಲಾಗಿದೆ.  ಸಮಾಜವಾದಿ ಪಕ್ಷದ ನಾಯಕರು ತಮ್ಮ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಪತ್ರಕರ್ತರು ಆರೋಪಿಸಿದ್ದಾರೆ. ಘಟನೆಯಲ್ಲಿ ಕೆಲ ಪತ್ರಕರ್ತರು, ಕ್ಯಾಮಾರಮ್ಯಾನ್ ಕಾಲಿಗೆ ಗಾಯಾವಾಗಿದ್ದರೆ, ಕೆಲ ಕ್ಯಾಮಾರಗಳು ಜಖಂ ಗೊಂಡಿದೆ.

ಬಿಜೆಪಿ ವಿತರಿಸೋ ಲಸಿಕೆ ಹಾಕಿಸ್ಕೊಳ್ಳಲ್ಲ, ನಮ್ಮ ಸರ್ಕಾರ ಬಂದ್ರೆ ಉಚಿತ ವ್ಯಾಕ್ಸಿನ್

ದೂರಿನ ಮೇಲೆ ಅಖಿಲೇಶ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ಮುಖಂಡರ ಮೇಲೆ ಐಪಿಸಿ ಸೆಕ್ಷನ್  147, 342 ಹಾಗೂ 323 ಅಡಿ ಕೇಸ್ ದಾಖಲಾಗಿದೆ. ಇತ್ತ ಎಫ್ಐಆರ್ ದಾಖಲಾಗುತ್ತಿದ್ದಂತೆ, ಸಮಾಜವಾದಿ ಪಕ್ಷ ಪತ್ರಕರ್ತರ ಮೇಲೆ ಪ್ರತಿ ದೂರು ದಾಖಲಿಸಿದೆ. ಇಬ್ಬರು ಪತ್ರಕರ್ತರನ್ನು ಉಲ್ಲೇಖಿಸಿ ದೂರು ದಾಖಲಿಸಲಾಗಿದೆ

ಮೊರಾದಾಬಾದ್ ಪೊಲೀಸರು ಇದೀಗ ಸುದ್ದಿಗೋಷ್ಠಿ ಆಯೋಜಿಸಿದ ಖಾಸಗಿ ಹೊಟೆಲ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತ ಅಖಿಲೇಶ್ ಹಾಗೂ  ಸಮಾಜವಾದಿ ಮುಖಂಡರ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.