ಲಕ್ನೋ(ಜ.02): ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಾವು ಬಿಜೆಪಿ ವಿತರಿಸುವ ಲಸಿಕೆ ಹಾಕಿಸಿಕೊಳ್ಳುವುದಿಲ್ಲ, ನನಗೆ ಅವರು ಕೊಡುವ ಲಸಿಕೆ ಮೇಲೆ ನಂಬಿಕೆ ಇಲ್ಲ ಎಂದಿದ್ದಾರೆ. ಈ ಮೂಲಕ ಭಾರತ ಸರ್ಕಾರ ನೀಡಲಿರುವ ಲಸಿಕೆಯನ್ನು ಬಿಜೆಪಿಯ ಲಸಿಕೆ ಎಂದು ಹೇಳಿದ್ದಾರೆ.

"

ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಯಾದವ್ 'ನಮ್ಮ ಸರ್ಕಾರ ಅಧಿಕಾರಕ್ಕೇರಿದರೆ ಜನರಿಗೆ ಉಚಿತವಾಗಿ ಲಸಿಕೆ ವಿತರಿಸುತ್ತೇವೆ' ಎಂದೂ ಹೇಳಿದ್ದಾರೆ. ಇನ್ನು ದೇಶಾದ್ಯಂತ ಇಂದು ಕೊರೋನಾ ಲಸಿಕೆಯ ಡ್ರೈ ರನ್ ನಡೆಯುತ್ತಿದೆ. ಈ ಮೂಲಕ ಸರ್ಕಾರ ಎಷ್ಟು ಸಜ್ಜಾಗಿದೆ ಎಂದು ತಿಳಿಯುತ್ತದೆ. ಹೀಗಿರುವಾಗಲೇ ಅಖಿಲೇಶ್ ಯಾದವ್ ತಮ್ಮ ಹೇಳಿಕೆ ಮೂಲಕ ವಿವಾದೊಂದನ್ನು ಹುಟ್ಟು ಹಾಕಿದ್ದಾರೆ.

ಇನ್ನು ಅತ್ತ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮಾತನಾಡುತ್ತಾ 'ಮೊದಲ ಹಂತದಲ್ಲಿ ದೇಶಾದ್ಯಂತ ಮೂರು ಕೋಟಿ ಮಂದಿಗೆ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಗುವುದು' ಎಂದಿದ್ದಾರೆ. ಇದರಲ್ಲಿ ಒಂದು ಕೋಟಿ ಹೆಲ್ತ್ ವರ್ಕರ್ಸ್ ಹಾಗೂ ಎರಡು ಕೋಟಿ ಫ್ರಂಟ್ ಲೈನ್ ವರ್ಕರ್ಸ್ ಇರಲಿದ್ದಾರೆ.