ಬೆಂಗಳೂರು ವ್ಲಾಗರ್ ಮರ್ಡರ್: 'ನಾನು ಬದುಕಿದ್ದೇನೆ..' ಎಂದ ಅಸ್ಸಾಂನ ಮೇಕಪ್ ಆರ್ಟಿಸ್ಟ್!
ಬೆಂಗಳೂರಿನಲ್ಲಿ ಕೊಲೆಯಾದ ವ್ಲಾಗರ್ ಮಾಯಾ ಗೊಗಯ್ ಹೆಸರಿನ ಹೋಲಿಕೆಯಿಂದಾಗಿ ಅಸ್ಸಾಂನ ಮೇಕಪ್ ಆರ್ಟಿಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸಂದೇಶಗಳು ಹರಿದು ಬಂದವು. ತಾನು ಜೀವಂತವಾಗಿರುವುದಾಗಿ ಆಕೆ ಸ್ಪಷ್ಟಪಡಿಸಬೇಕಾಯಿತು.
ಬೆಂಗಳೂರು (ನ.30): ಅಸ್ಸಾಂನ ದಿಬ್ರುಗಢ್‌ನ ಮೇಕಪ್ ಆರ್ಟಿಸ್ಟ್‌ಗೆ ಕಳೆದ ಕೆಲವು ದಿನಗಳಿಂದ ಅವರ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸಂದೇಶಗಳೇ ಬರುತ್ತಿದ್ದವು. ಇದ್ಯಾಕೆ ಅನ್ನೋದೇ ಆಕೆಗೆ ಗೊತ್ತಾಗುತ್ತಿರಲಿಲ್ಲ. ಸಾಕಷ್ಟು ಹುಡುಕಾಟದ ಬಳಿಕ ಆಕೆಗೆ ಗೊತ್ತಾಗಿದ್ದೇನೆಂದರೆ, ಬೆಂಗಳೂರಿನ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಇತ್ತೀಚೆಗೆ 19 ವರ್ಷ ಮಾಯಾ ಗೊಗಯ್ ಎನ್ನುವ ವ್ಲಾಗರ್ ಕೊಲೆಯಾಗಿದ್ದಳು. ಆದರೆ, ಅಸ್ಸಾಂ ಸ್ಥಳೀಯರು ಇದೇ ಹೆಸರು ಹೊಂದಿದ್ದ ಮೇಕಪ್ ಆರ್ಟಿಸ್ಟ್ ಸಾವು ಕಂಡಿದ್ದಾಳೆ ಭಾವಿಸಿ ಸಂತಾಪ ಸೂಚಿಸಿ ಆಕೆಯ ರೀಲ್ಸ್‌ಗೆ ಪೋಸ್ಟ್ ಮಾಡಿದ್ದರು. ತನ್ನ ರೀಲ್ಸ್‌ಗಳಿಗೆ RIP ಎಂದು ಸಂದೇಶ ಬರುತ್ತಿರುವುದನ್ನು ಕಂಡ ಮೇಕಪ್ ಆರ್ಟಿಸ್ಟ್ ಮಾಯಾ ಗೊಗೋಯ್, ನಾನಿನ್ನೂ ಬದುಕಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾಳೆ.
ವ್ಲಾಗರ್ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಡಿದಾಗ ಇದು ಪ್ರಾರಂಭವಾಗಿದೆ. ಮೃತರ ಶವವನ್ನು ಮಾಯಾ ಗೊಗೊಯ್ ದೇಕಾ ಎಂದು ಗುರುತಿಸಲಾಗಿತ್ತು. ಮಂಗಳವಾರ ಬೆಂಗಳೂರಿನ ಇಂದಿರಾನಗರ ಪ್ರದೇಶದ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು.
ವ್ಲಾಗರ್ ಸಾವಿನ ಕುರಿತಾದ ಸುದ್ದಿ ಪ್ರಸಾರವಾಗುತ್ತಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ದಿಬ್ರೂಗಢ ಮೂಲದ ಮೇಕಪ್ ಆರ್ಟಿಸ್ಟ್‌ನ ಇನ್ಸ್‌ಟಾಗ್ರಾಮ್ ಪೇಜ್‌ಗಳು RIP ಎನ್ನುವ ಮೆಸೇಜ್‌ಗಳಿಂದ ತುಂಬಿ ಹೋಗಿದ್ದವು. ಹಲವು ಪೋಸ್ಟ್‌ಗಳಲ್ಲಿ ತನ್ನ ಐಡೆಂಟಿಟಿಯ ಬಗ್ಗೆ ಆಕೆ ಹೇಳಿದ್ದರೂ, ನೆಟ್ಟಿಗರು ಮಾತ್ರ ಆಕೆಯ ಪೋಸ್ಟ್‌ಗೆ ಕಾಮೆಂಟ್ ಹಾಕೋದನ್ನ ಮಾತ್ರ ನಿಲ್ಲಿಸಿರಲಿಲ್ಲ. ಒಂದು ಹಂತದಲ್ಲಿ ಆಕೆ ಈ ಕುರಿತಾಗಿ ಒಂದು ಸ್ಟೋರಿ ಕೂಡ ಮಾಡಿ, ನಾನು ಆ ಹುಡುಗಿಯಲ್ಲ ಎಂದು ಪೋಸ್ಟ್ ಮಾಡಿದ್ದರು. ಹಾಗಿದ್ದರೂ ಆಕೆಗೆ ಮೆಸೇಜ್ ಬರೋದು ನಿಂತಿರಲಿಲ್ಲ.
ಕೊನೆಗೆ ಒಂದು ವಿಡಿಯೋವನ್ನು ಶೇರ್ ಮಾಡಿಕೊಂಡ ಆಕೆ, ನಾನು ಬುದುಕಿದ್ದೇನೆ. ಈ ಮೂರ್ಖ ಕಾಮೆಂಟ್‌ಗಳನ್ನು ಮಾಡೋದನ್ನ ನಿಲ್ಲಿಸಿ ಎಂದು ಹೇಳಿದ್ದಲ್ಲದೆ, ತಾನು ಬದುಕಿದ್ದೇನೆ ಎಂದು ಹೇಳಲು ಸ್ಥಳೀಯ ಮಾಧ್ಯಮಗಳೊಂದಿಗೂ ಮಾತನಾಡಿದ್ದಾಳೆ.
"ನಾನು ಬಾನಿಪುರ, ದಿಬ್ರುಗಢದಲ್ಲಿ ವಾಸಿಸುತ್ತಿದ್ದೇನೆ ಮತ್ತು ನಾನು ಬೆಂಗಳೂರಿಗೆ ಹೋಗಿಲ್ಲ" ಎಂದು ಮಾಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ. “ಜನರು ನನ್ನನ್ನು ಕೊಲೆಯಾದ ಮಾಯಾ ಗೊಗೊಯ್ ಎಂದುಕೊಂಡಿದ್ದಾರೆ. ಇದು ಬೇಸರದ ಸಂಗತಿ ಎಂದು ಹೇಳಿದ್ದಾರೆ.
ವರದಕ್ಷಿಣೆ ಕಿರುಕುಳ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆ ಪಡೆದಿದ್ದ 93 ವರ್ಷದ ಅಜ್ಜಿ ನಾಗಮ್ಮ ಬಿಡುಗಡೆ!
ಮಾಯಾ ಗೊಗೋಯ್ ಕೊಲೆ ಕೇಸ್‌ನಲ್ಲಿ ಪ್ರಮುಖ ಆರೋಪಿ ಆಕೆಯ ಬಾಯ್‌ಫ್ರೆಂಡ್ ಆರವ್ ಹನೋಯ್‌ರನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. 21 ವರ್ಷದ ಹನೋಯ್ ಕೇರಳದ ಕಣ್ಣೂರು ಮೂಲದ ಸ್ಟೂಡೆಂಟ್ ಕೌನ್ಸಿಲರ್ ಆಗಿದ್ದು, ಶುಕ್ರವಾರ ಅಪರಿಚಿತ ಸ್ಥಳದಿಂದ ಆತನ ಬಂಧನ ಮಾಡಲಾಗಿದೆ.
ವೆಬ್ ಸಿರೀಸ್ Ranking: ಗ್ರೇಟೆಸ್ಟ್ ಆಫ್ ಆಲ್ ಟೈಮ್, ಓವರ್‌ಹೈಪ್ ಯಾವುದು ಅನ್ನೋದನ್ನ ನೋಡಿ!