Asianet Suvarna News Asianet Suvarna News

ಅಸ್ಸಾಂ ಪೊಲೀಸರು ಲಕ್ಕಿ ಎಲ್ರನ್ನೂ ಕೊಂದಿಲ್ಲ..! ನೆಕ್ಸ್ಟ್ ಟೈಂ ಕೊಲ್ತೀವಿ ಎಂದ ಸಂಸದ..!

  • ಅಸ್ಸಾಂ-ಮಿಝೋರಾಮ್ ಗಡಿ ವಿವಾದ
  • ಮಿಝೋರಾಮ್ ಸಂಸದರ ಬೇಜವಾಬ್ದಾರಿ ಹೇಳಿಕೆ..!
  • ಸಂಸದರ ಬಾಯಲ್ಲಿ ಇದೆಂಥಾ ಮಾತು ?
Assam policemen lucky we did not kill all next time we will kill them all says Mizoram MP dpl
Author
Bangalore, First Published Jul 29, 2021, 5:50 PM IST

ಐಝ್ವಾಲ್(29): ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಭೀಕರ ಘರ್ಷಣೆ ನಂತರ ಸಂಸದರೊಬ್ಬರ ಬೇಜವಾಬ್ದಾರಿ ಹೇಳಿಕೆಗೆ ತೀವ್ರ ಟೀಕೆ ಎದುರಾಗಿದೆ. ಜುಲೈ 28 ರಂದು ಮಿಜೋರಾಂ ಸಂಸದ ಕೆ. ಅವರು ಮತ್ತೆ ಬಂದರೆ ನಾವು ಅವರೆಲ್ಲರನ್ನೂ ಕೊಲ್ಲುತ್ತೇವೆ ಎನ್ನುವ ಮೂಲಕ ವಿವಾದಕ್ಕೆ ದಾರಿ ಮಾಡಿದ್ದಾರೆ.

ವನ್ಲಾಲ್ವೇನಾ ಅವರ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಘರ್ಷಣೆಗಳು ಪಿತೂರಿಯಲ್ಲಿ ಅವರ ಸಕ್ರಿಯ ಪಾತ್ರವಿದೆ ಎಂದು ಆರೋಪಿಸಿ ಅಸ್ಸಾಂ ಪೊಲೀಸರ ತಂಡ ರಾಜ್ಯಸಭಾ ಸಂಸದರನ್ನು ಪ್ರಶ್ನಿಸಲು ದೆಹಲಿಗೆ ತೆರಳಿತ್ತು.

ಅಸ್ಸಾಂ-ಮಿಜೋರಂ ಗಡಿ ಸಂಘರ್ಷ: ಶತಮಾನಗಳ ಹಿಂದಿನ ಗಡಿ ವಿವಾದಕ್ಕೆ ಸಿಕ್ಕಿಲ್ಲ ಮುಕ್ತಿ!

ಗಡಿ ವಿವಾದದಲ್ಲಿ ಅನಿರೀಕ್ಷಿತವಾಗಿ ಉಭಯ ರಾಜ್ಯಗಳ ನಡುವೆ ಪರಿಸ್ಥಿತಿ ಕೈಮೀರಿದಾಗ ಪೊಲೀಸರು ಪರಸ್ಪರ ಗುಂಡು ಹಾರಿಸಿದ್ದಾರೆ . ಇದರಲ್ಲಿ ಅಸ್ಸಾಂ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 50 ಜನರು ಗಾಯಗೊಂಡಿದ್ದಾರೆ.

ಸಂಸತ್ ಭವನದ ಹೊರಗೆ ನಿಂತು ಸಂಸದ ವನ್ಲಾಲ್ವೆನಾ, 200 ಕ್ಕೂ ಹೆಚ್ಚು ಪೊಲೀಸರು ನಮ್ಮ ಪ್ರದೇಶವನ್ನು ಪ್ರವೇಶಿಸಿದರು. ಅವರು ನಮ್ಮ ಪೊಲೀಸರನ್ನು ಅವರ ಪೋಸ್ಟ್‌ನಿಂದ ಹಿಂದಕ್ಕೆ ತಳ್ಳಿದ್ದಾರೆ ಎಂದಿದ್ದಾರೆ.

ಅಸ್ಸಾಂ-ಮಿಝೋರಾಮ್ ಗಡಿ ಜಗಳ: 5 ಜನ ಪೊಲೀಸರು ಸಾವು

ವನ್ಲಾಲ್ವೆನಾ ಅವರ ಟೀಕೆಗಳನ್ನು ಅನುಸರಿಸಿ, ಅಸ್ಸಾಂ ಪೊಲೀಸರ ಹಿರಿಯ ಅಧಿಕಾರಿ ಜಿ.ಪಿ.ಸಿಂಗ್ ಅವರು ಟ್ವೀಟ್ ನಲ್ಲಿ, ರಾಜ್ಯಸಭಾ ಸಂಸದ ವನ್ಲಾಲ್ವೆನಾ ಅವರ ಸಂದರ್ಶನ ಘಟನೆಯ ಹಿಂದಿನ ಪಿತೂರಯಲ್ಲಿ ಅವರ ಸಕ್ರಿಯ ಪಾತ್ರವನ್ನು ಸೂಚಿಸುತ್ತದೆ ಎಂದಿದ್ದಾರೆ.

Follow Us:
Download App:
  • android
  • ios