ಬಹುಪತ್ನಿತ್ವವನ್ನು ನಿಷೇಧಿಸುವ ಕಾನೂನು ರೂಪಿಸುವ ಅಧಿಕಾರ ರಾಜ್ಯಗಳಿಗೆ ಇದೆಯೇ ಎಂದು ಪರಿಶೀಲಿಸಲು ನೇಮಕಗೊಂಡಿದ್ದ ಸಮಿತಿಯಿಂದ ಅಸ್ಸಾಂ ಸರ್ಕಾರಕ್ಕೆ ವರದಿ ಸಲ್ಲಿಕೆ.
ಗುವಾಹಟಿ (ಆ.7): ಬಹುಪತ್ನಿತ್ವವನ್ನು ನಿಷೇಧಿಸುವ ಕಾನೂನು ರಚನೆ ಮಾಡಲು ರಾಜ್ಯ ವಿಧಾನಸಭೆಗೆ ಶಾಸನಾತ್ಮಕ ಅಧಿಕಾರವಿದೆಯೇ ಎಂಬುದನ್ನು ಪರಿಶೀಲಿಸಲು ನೇಮಕಗೊಂಡಿದ್ದ ತಜ್ಞರ ಸಮಿತಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಭಾನುವಾರ ತನ್ನ ವರದಿಯನ್ನು ಸಲ್ಲಿಕೆ ಮಾಡಿದೆ. ಈ ಕುರಿತ ಫೋಟೋಗಳನ್ನು ಶರ್ಮಾ ಅವರು ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ.
‘ಜಾತಿ, ನಂಬಿಕೆ ಅಥವಾ ಧರ್ಮ ನೋಡದೆ ಮಹಿಳಾ ಸಬಲೀಕರಣಕ್ಕೆ ಧನಾತ್ಮಕ ವಾತಾವರಣವನ್ನು ಸೃಷ್ಟಿಸುವತ್ತ ಅಸ್ಸಾಂ ಹೆಜ್ಜೆ ಇಡುತ್ತಿದೆ’ ಎಂದು ಹಿಮಂತ ಬಿಸ್ವ ಶರ್ಮಾ ಅವರು ತಿಳಿಸಿರುವುದು, ಸಮಿತಿ ಸರ್ಕಾರದ ಆಶಯಗಳಿಗೆ ಅನುಗುಣವಾದ ರೀತಿಯಲ್ಲೇ ವರದಿ ಸಲ್ಲಿಸಿರಬಹುದು ಎಂಬ ಸುಳಿವನ್ನು ನೀಡಿದೆ.
ಕುರುಹು ಸಿಕ್ಕಿರುವ ವದಂತಿ ನಿಲ್ಲಿಸದಿದ್ದರೆ ಗ್ಯಾನವಾಪಿ ಮಸೀದಿ ಸರ್ವೇಗೆ ಬಹಿಷ್ಕಾರ: ಮುಸ್ಲಿಮರ
ವರದಿಯಲ್ಲಿ ಯಾವೆಲ್ಲಾ ಶಿಫಾರಸುಗಳು ಇವೆ ಎಂಬುದು ಬಹಿರಂಗವಾಗಿಲ್ಲ. ಒಂದು ವೇಳೆ, ಬಹುಪತ್ನಿತ್ವ ನಿಷೇಧಿಸಲು ವಿಧಾನಸಭೆಗೆ ಅಧಿಕಾರವಿದೆ ಎಂದು ತಜ್ಞರ ಸಮಿತಿ ವರದಿಯಲ್ಲಿ ಹೇಳಿದ್ದರೆ, ಅಸ್ಸಾಂ ಸರ್ಕಾರ ಸೆಪ್ಟೆಂಬರ್ ಅಥವಾ ಜನವರಿಯಲ್ಲಿ ಬಹುಪತ್ನಿತ್ವ ನಿಷೇಧ ಕುರಿತ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ತನ್ಮೂಲಕ ಬಹುಪತ್ನಿತ್ವಕ್ಕೆ ನಿಷೇಧ ಹೇರಿದ ದೇಶದ ಮೊದಲ ರಾಜ್ಯ ಎನಿಸಿಕೊಳ್ಳಲಿದೆ.
ಇಂಡಿಯಾ ಮೈತ್ರಿಕೂಟಕ್ಕೆ ಸೋನಿಯಾ ಅಧ್ಯಕ್ಷೆ, ನಿತೀಶ್ ಸಂಚಾಲಕ ಬಹುತೇಕ ನಿಶ್ಚಿತ
ನಿವೃತ್ತ ನ್ಯಾ. ರುಮಿ ಕುಮಾರಿ ಫುಕಾನ್ ನೇತೃತ್ವದಲ್ಲಿ ರಾಜ್ಯ ಅಡ್ವೋಕೇಟ್ ಜನರಲ್ ದೇವಜಿತ್ ಸೈಕಿಯಾ ಹಾಗೂ ಹಿರಿಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ನಳಿನ್ ಕೊಹ್ಲಿ ಮತ್ತು ಹಿರಿಯ ವಕೀಲ ನೆಕಿಬುರ್ ಜಮಾನ್ ಅವರನ್ನು ಒಳಗೊಂಡ ಸಮಿತಿಯನ್ನು ಮೇ 12ರಂದು ಹಿಮಂತ ಅವರು ರಚನೆ ಮಾಡಿದ್ದರು.
