Government Of Assam : ಪೋಷಕರ ಭೇಟಿಗೆ ಸರ್ಕಾರಿ ನೌಕರರಿಗೆ 2 ದಿನ ಹೆಚ್ಚುವರಿ ರಜೆ
- ತಂದೆ- ತಾಯಿ ಅಥವಾ ಅತ್ತೆ- ಮಾವರನ್ನು ಭೇಟಿಯಾಗಲು ಹೋಗುವ ಸರ್ಕಾರಿ ನೌಕರರಿಗೆ ಹೆಚ್ಚುವರಿ ರಜೆ
- 6 ಮತ್ತು 7ನೇ ತಾರೀಖು 2 ದಿನಗಳ ಹೆಚ್ಚುವರಿ ರಜೆ ನೀಡಲು ಸರ್ಕಾರ ನಿರ್ಧಾರ
ಗುವಾಹಟಿ(ನ.25) : 2022ರ ಜನವರಿ (January) 1ರಿಂದ ತಂದೆ- ತಾಯಿ (parents) ಅಥವಾ ಅತ್ತೆ- ಮಾವರನ್ನು ಭೇಟಿಯಾಗಲು ಹೋಗುವ ಸರ್ಕಾರಿ ನೌಕರರಿಗೆ (Govt Employees) 6 ಮತ್ತು 7ನೇ ತಾರೀಖು 2 ದಿನಗಳ ಹೆಚ್ಚುವರಿ ರಜೆ (Extra Leave) ನೀಡಲು ಅಸ್ಸಾಂ (Assam) ಸಚಿವ ಸಂಪುಟ (Cabinet) ನಿರ್ಧರಿಸಿದೆ. ಮುಂದಿನ 2 ದಿನ ಎರಡನೇ ಶನಿವಾರ ಮತ್ತು ಭಾನುವಾರ ವಾಗಿರುವುದರಿಂದ ನೌಕರರು 4 ದಿನಗಳ ರಜೆ ಪಡೆಯಲಿದ್ದಾರೆ. ತಮ್ಮ ಕುಟುಂಬದ (Family) ಹಿರಿಯರೊಂದಿಗೆ ಹೊಸ ವರ್ಷದ (New Year) ಸಂಭ್ರಮಾಚರಣೆ ಹಂಚಿಕೊಳ್ಳಲು ಅನುವು ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹಿಮ್ವಂತ್ ಬಿಸ್ವಾ ಶರ್ಮಾ (CM Himanth Biswa sharma) ಹೇಳಿದ್ದಾರೆ. ನಾಲ್ಕನೇ ದರ್ಜೆ ನೌಕರರಿಂದ ನಾಗರಿಕ ಸೇವಾ ಅಧಿಕಾರಿಗಳು ಹಾಗೂ ಮಂತ್ರಿಗಳೂ (Ministers) ಸಹ ಈ ರಜೆ ಪಡೆದುಕೊಳ್ಳಬಹುದು.
ವಿವಿಧ ರೀತಿಯ ಯೋಜನೆಗಳನ್ನು ಜಾರಿ ತಂದಿದ್ದ ಅಸ್ಸಾಂ ಸರ್ಕಾರ (Assam Govt) ಇದೀಗ ತನ್ನ ಸರ್ಕಾರಿ ನೌಕರರ ರಜಾ ಪಟ್ಟಿಯಲ್ಲಿ ಮತ್ತೆರಡು ಹೊಸ ರಜೆಗಳನ್ನು ಸೇರ್ಪಡೆ ಮಾಡಿದೆ. ಈ ರಜೆಗಳಿಂದ ಸರ್ಕಾರಿ ನೌಕರರು ಮತ್ತಷ್ಟು ಅನುಕೂಲ ಪಡೆದಿದ್ದಾರೆ. ಕಳೆದ ಅಗಸ್ಟ್ (Agust) ತಿಂಗಳಿನಲ್ಲಿಯೇ ಮುಖ್ಯಮಂತ್ರಿ ಹಿಂತ್ ಬಿಸ್ವಾ ಮಾಹಿತಿ ನೀಡಿದ್ದು ಇದೀಗ ಅಧಿಕೃತವಾಗಿ ಹೊಸ ಆದೇಶಕ್ಕೆ ಅಂಕಿತ ನೀಡಲಾಗಿದೆ.
ಇದರಿಂದ ಅವರ ಪೋಷಕರುನ್ನು ನೋಡಿಕೊಳ್ಳಲು ಅನುಕೂಲವಾಗಲಿದೆ. ಅಲ್ಲದೇ ಕೆಲ ಸಮಯ ಅವರೊಂದಿಗೆ ಕಳೆಯುವುದರಿಂದ ಅವರ ಮನಃಪುರ್ವಕ ಆಶೀರ್ವಾದವೂ (Blessings) ಸಿಗಲಿದೆ. ಇದರಿಂದ ಕೆಲಸ (Work) ಮಾಡಲು ಮತ್ತಷ್ಟು ಉತ್ಸಾಹ ನೌಕರರಿಗೆ ಸಿಗಲಿದೆ ಎಂದು ಸಿಎಂ ಹಿಮಂತ್ ಬಿಸ್ವಾ ಹೇಳಿದ್ದಾರೆ. ಅಲ್ಲದೇ ಒಂದು ವೇಳೆ ಪೋಷಕರು ಇಲ್ಲದಿದ್ದಲ್ಲಿ ಸಂಭಂಧಿಗಳ ಮನೆಗೆ ಭೇಟಿ ನೀಡಿ ಬರಬಹುದು ಎಂದಿದ್ದಾರೆ.
1 ಲಕ್ಷ ಪರಿಹಾರ ಘೋಷಿಸಿದ್ದ ಸರ್ಕಾರ : ಕೋವಿಡ್ (Covid) 19ನಿಂದಾಗಿ ಸಾವಿಗೀಡಾದ ಬಡ ಕುಟುಂಬದವರ ರಕ್ತ ಸಂಬಂಧಿಗಳಿಗೆ 1 ಲಕ್ಷ ರು (Compensation) ನೀಡಲು ಅಸ್ಸಾಂ ಸರ್ಕಾರ ಘೋಷಿಸಿತ್ತು. ಈ ರೀತಿ ಘೋಷಣೆ ಮಾಡಿದ್ದ ಮೊದಲ ಸರ್ಕಾರ ಅಸ್ಸಾಂ ದ್ದಾಗಿತ್ತು.
ಕಳೆದ ಮಾರ್ಚ್ನಿಂದ ದೇಶದಲ್ಲಿ ಕೋವಿಡ್ (Covid) ಎರಡನೇ ಅಲೆ ವ್ಯಾಪಕವಾಗಿ ಹರಡಿತ್ತು. ಎಲ್ಲಾ ರಾಜ್ಯಗಳಲ್ಲಿಯೂ ಅಪಾರ ಪ್ರಮಾಣದಲ್ಲಿ ಸಾವು ನೋವುಗಳು ಸಂಭವಿಸಿತ್ತು. ಅತ್ಯಧಿಕ ಪ್ರಮಾಣದಲ್ಲಿ ಕೊರೋನಾದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಈ ವೇಳೆ ಮಹತ್ವದ ನಿರ್ಧಾರ ಕೈಗೊಂಡಿದ್ದ ಅಸ್ಸಾಂ ಸರ್ಕಾರ 1 ಲಕ್ಷ ರು. ಪರಿಹಾರ ಘೋಷಣೆ ಮಾಡಿತ್ತು.
ಈ ಪರಿಹಾರ ಧನ ಪಡೆಯುವವರು ಸರ್ಕಾರಿ ಉದ್ಯೋಗಿಗಳಾಗಿರಬಾರದು ಹಾಗೂ ಸರ್ಕಾರ ನೀಡುವ ಯಾವುದೇ ವಿಶ್ರಾಂತಿ ವೇತನ ಪಡೆಯುತ್ತಿರಬಾರದು ಎಂಬ ಷರತ್ತು ವಿಧಿಸಲಾಗಿದೆ.
‘ ಪ್ರಾರ್ಥನಾ ಯೋಜನೆಯಡಿಯಲ್ಲಿ 6 ಸಾವಿರ ಫಲಾನಿಭವಿಗಳನ್ನು ಗುರುತಿಸಲಾಗಿದೆ. ಇವರೆಲ್ಲರಿಗೂ ಗಾಂಧಿ ಜಯಂತಿ ದಿನದಂದು 1 ಲಕ್ಷ ರು. ಪರಿಹಾರಧನ ವಿತರಿಸಲಾಗುತ್ತದೆ. ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ, ಗಂಡನನ್ನು ಕಳೆದುಕೊಂಂಡ ಮಹಿಳೆಯರಿಗೆ ಪರಿಹಾರ ನೀಡಲು ಈಗಾಗಲೆ ಸರ್ಕಾರ 2 ಯೋಜನೆಗಳನ್ನು ಜಾರಿಗೊಳಿಸಿತ್ತು.
ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಹೆಸರಿನಲ್ಲಿ 7 ಲಕ್ಷ ರು.ಗಳ ನಿಶ್ಚಿತ ಠೇವಣಿ ಇಡಲಾಗುತ್ತದೆ ಎಂದು ಸಚಿವ ಪಿಯೂಶ್ ಹಜಾರಿಕ ಹೇಳಿದ್ದರು. ಅದಾದ ಬಳಿಕ ಕರ್ನಾಟಕ ಸರ್ಕಾರವು ಕೋವಿಡ್ ಸಾವಿಗೆ 1 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು.