ಪಿಎಂ ಮೋದಿ, ಸಿಎಂ ಹಿಮಂತ್‌ಗೆ ಪುಟ್ಟ ಮಕ್ಕಳ ಪತ್ರ: ಅದರಲ್ಲಿತ್ತು 'ಹಲ್ಲಿನ' ಗೋಳು!
* ಪಿಎಂ ಮೋದಿ, ಸಿಎಂ ಬಿಸ್ವಾಗೆ ಪುಟ್ಟ ಮಕ್ಕಳ ಪತ್ರ
* ಪತ್ರದಲ್ಲಿತ್ತು ಮಕ್ಕಳ ಸಮಸ್ಯೆ
* ಒಂದು ಹಲ್ಲಿನ ಕತೆಗೆ ನೆಟ್ಟಿಗರೂ ಫಿದಾ
ಡಿಸ್ಪುರ್(ಸೆ.29): ಅಸ್ಸಾಂನ(Assam) ಇಬ್ಬರು ಮಕ್ಕಳು ಪ್ರಧಾನಿ ನರೇಂದ್ರ ಮೋದಿ(narendra Modi) ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanta Biswa Sarma) ಅವರಿಗೆ ಪತ್ರ ಬರೆದಿದ್ದಾರೆ. ಈ ಮಕ್ಕಳು ತಮ್ಮ ಸಮಸ್ಯೆಗಳನ್ನು ಪತ್ರಗಳ ಮೂಲಕ ಇಬ್ಬರೂ ನಾಯಕರ ಮುಂದೆ ಇಟ್ಟಿದ್ದಾರೆ. ಈ ಮಕ್ಕಳ ಸಮಸ್ಯೆ ಮಕ್ಕಳಷ್ಟೇ ಮುದ್ದದಾಗಿದ್ದು ಈ ಪತ್ರ ವೈರಲ್ ಆಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಪತ್ರದಲ್ಲಿ ಬರೆದಿರುವ ಅಕ್ಷರಗಳನ್ನು ಗಮನಿಸಿದರೆ, ಇದನ್ನು ಖುದ್ದು ಮಕ್ಕಳೇ ತಮ್ಮ ಕೈಯ್ಯಾರೆ ಬರೆದಿದ್ದಾರೆ ಎಂಬುವುದರಲ್ಲಿ ಅನುಮಾನವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಇಬ್ಬರು ಮಕ್ಕಳ ಪತ್ರ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.
ಈ ಇಬ್ಬರು ಮಕ್ಕಳ ಹೆಸರು ರಾವ್ಜಾ ಮತ್ತು ಆರ್ಯನ್. ರವ್ಜಾಗೆ ಆರು ವರ್ಷ, ಆರ್ಯನಿಗೆ ಐದು ವರ್ಷ. ಇಬ್ಬರೂ ಎರಡು ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ. ಆರ್ಯನ್ ಪಿಎಂ ಮೋದಿಗೆ(PM Modi) ಬರೆದಿರುವ ಪತ್ರದಲ್ಲಿ, 'ಪ್ರಿಯ ಮೋದಿ ಜೀ .. ನನ್ನ ಮೂರು ಹಲ್ಲುಗಳು ಬರುತ್ತಿಲ್ಲ, ದಯವಿಟ್ಟು ಸೂಕ್ತ ಕ್ರಮಗಳನ್ನು ಸೂಚಿಸಿ. ಈ ಸಮಸ್ಯೆಯಿಂದ ನನ್ನ ನೆಚ್ಚಿನ ಆಹಾರವನ್ನು ಅಗಿಯಲು ನನಗೆ ಕಷ್ಟವಾಗುತ್ತಿದೆ.' ಎಂದಿದ್ದಾರೆ.
ಮತ್ತೊಂದೆಡೆ, ಅಸ್ಸಾಂನ ಮುಖ್ಯಮಂತ್ರಿಯನ್ನುದ್ದೇಶಿಸಿ(Assam Chief Minister), ರವಾ ಬರೆದ ಪತ್ರದಲ್ಲಿ, 'ಪ್ರೀತಿಯ ಹಿಮಂತ ಮಾಮಾ, ನನ್ನ ಹಲ್ಲುಗಳು ಬರುತ್ತಿಲ್ಲ. ನಾನು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇನೆ ಮತ್ತು ಆಹಾರವನ್ನು ಅಗಿಯುವಲ್ಲಿ ನಾನು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿರುವುದರಿಂದ ದಯವಿಟ್ಟು ಅಗತ್ಯ ಕ್ರಮ ಕೈಗೊಳ್ಳಿ' ಎಂದಿದ್ದಾರೆ. ಇದರೊಂದಿಗೆ, ಇನ್ನರೂ ಮಕ್ಕಳು ಪತ್ರದಲ್ಲಿ ಸಣ್ಣ ರೇಖಾಚಿತ್ರಗಳನ್ನು ಸಹ ಮಾಡಿದ್ದಾರೆ.
ಈ ಪತ್ರಗಳನ್ನು ಮುಖ್ತಾರ್ ಅಹ್ಮದ್ ಎಂಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದನ್ನು ಪೋಸ್ಟ್ ಮಾಡಿದ ಅವರು, 'ನರೇಂದ್ರ ಮೋದಿ ಜಿ ಮತ್ತು ಹಿಮಂತ ಬಿಸ್ವ ಶರ್ಮಾ ಜಿ, ನನ್ನ ಸೊಸೆ ರಾವ್ಜಾ ಮತ್ತು ಸೋದರಳಿಯ ಆರ್ಯನ್ ಬರೆದಿದ್ದಾರೆ. ನಾನು ಮನೆಯಲ್ಲಿಲ್ಲ, ಡ್ಯೂಟಿಯಲ್ಲಿದ್ದೇನೆ. ನನ್ನ ಸೊಸೆ ಮತ್ತು ಸೋದರಳಿಯರು ಇದನ್ನು ತಾವೇ ಬರೆದಿದ್ದಾರೆ. ದಯವಿಟ್ಟು ಅವರ ಹಲ್ಲುಗಳು ಬರಲು ಏನಾದರೂ ಉಪಾಯವಿದ್ದರೆ ತಿಳಿಸಿ. ಹಲ್ಲುಗಳಿಲ್ಲದೇ ಅವರು ತಮ್ಮ ನೆಚ್ಚಿನ ಆಹಾರವನ್ನು ಅಗಿಯಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಮುಕ್ತಾರ್ ಅಹ್ಮದ್ 25 ಸೆಪ್ಟೆಂಬರ್‌ಗೆ ಇದನ್ನು ಪೋಸ್ಟ್ ಮಾಡಿ, ಇಬ್ಬರೂ ಮಕ್ಕಳ ಪತ್ರವನ್ನೂ ಶೇರ್ ಮಾಡಿದ್ದಾರೆ. ಈ ಮಕ್ಕಳ ಮುಗ್ಧತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.