ಶೀಘ್ರದಲ್ಲೇ ಬಹುಪತ್ನಿತ್ವ ನಿಷೇಧ, ಹೊಸ ನಿಯಮ ಜಾರಿಗೆ ಮುಂದಾದ ಸಿಎಂ ಹಿಮಂತ ಬಿಸ್ವಾ!
ಏಕರೂಪ ಕಾನೂನು ಬಿಜೆಪಿಯ ಪ್ರಮುಖ ಗುರಿಯಾಗಿದೆ. ಇದೀಗ ಅಸ್ಸಾಂನಲ್ಲಿ ಏಕರೂಪ ಕಾನೂನಿನ ಅಡಿಯಲ್ಲಿ ಬಹುಪತ್ನಿತ್ವ ನಿಷೇಧಕ್ಕೆ ಮುಖ್ಯಮಂತ್ರಿ ಹಮಂತ ಬಿಸ್ವಾ ಶರ್ಮಾ ಮುಂದಾಗಿದ್ದಾರೆ. ಈಗಾಗಲೇ ತಜ್ಞರ ಸಮಿತಿ ರಚನೆ ಮಾಡಲಾಗಿದ್ದು, ಶೀಘ್ರದಲ್ಲೇ ಅಸ್ಸಾಂನಲ್ಲಿ ಹೊಸ ಕಾನೂನು ಜಾರಿಯಾಗಲಿದೆ.
ಗುವ್ಹಾಟಿ(ಮೇ.09): ಅಕ್ರಮ, ನೋಂದಣಿಯಾಗದ ಮದರಸಾಗಳನ್ನು ಮುಚ್ಚಿ ಭಾರಿ ಸದ್ದು ಮಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇದೀಗ ಬಿಜೆಪಿ ಪ್ರಮುಖ ಗುರಿಯ ಏಕರೂಪ ನೀತಿ ಸಂಹಿತೆ ಜಾರಿಗೆ ಪಣತೊಟ್ಟಿದ್ದಾರೆ. ಇದರ ಮೊದಲ ಭಾಗವಾಗಿ ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಸಿಎಂ ಶರ್ಮಾ ತಜ್ಞರ ಸಮಿತಿಯನ್ನು ರಚನೆ ಮಾಡಿದ್ದಾರೆ. ಈ ವರದಿ ಆಧರಿಸಿ ಶೀಘ್ರದಲ್ಲೇ ಕ್ರಮಕೈಗೊಳ್ಳಲು ಶರ್ಮಾ ಮುಂದಾಗಿದ್ದಾರೆ. ನೂತನ ಸಮಿತಿ, ಅಸ್ಸಾಂ ಭಾಗದಲ್ಲಿ ಬಹುಪತ್ನಿತ್ವ ನಿಷೇಧದ ಸಾಧಕ ಬಾಧಕ, ಕಾನೂನು ಪ್ರಕ್ರಿಯೆ ಸೇರಿದಂತೆ ಹಲವು ವಿಚಾರಗಳ ಕುರಿತು ವರದಿ ಸಲ್ಲಿಸಲಿದೆ.
ಅಸ್ಸಾಂನಲ್ಲಿ ಏಕರೂಪದ ನೀತಿ ಸಂಹಿತೆ ಜಾರಿಗೊಳಿಸುತ್ತಿಲ್ಲ. ಆದರೆ ಬಹುಪತ್ನಿತ್ವ ನಿಷೇಧ ಮಾಡಲು ಸಜ್ಜಾಗಿದ್ದೇವೆ. ಬಹುಪತ್ನಿತ್ವ ನಿಷೇಧ ಮಾಡಲು ಸರ್ಕಾರಕ್ಕೆ ಅಧಿಕಾರವಿದೆಯಾ ಅನ್ನೋದನ್ನು ನೂತನ ಸಮಿತಿ ವರದಿ ನೀಡಲಿದೆ. ಎಲ್ಲಾ ಆಯಾಮದಲ್ಲಿ ತಜ್ಞರ ಸಮಿತಿ ವರದಿ ನೀಡಲಿದೆ. ಬಹುಪತ್ನಿತ್ವಕ್ಕೆ ಅಂತ್ಯಹಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕಿರುವ ತೊಡಕುಗಳು ಕುರಿತು ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಉಗ್ರ ಸಂಘಟನೆ ಬದಲು ಬಜರಂಗದಳ ಬ್ಯಾನ್ ಮಾಡಲು ಕಾಂಗ್ರೆಸ್‌ಗೆ ಆಸಕ್ತಿ, ಹಿಮಂತ ಶರ್ಮಾ ವಾಗ್ದಾಳಿ!
ತಜ್ಞರ ಸಮಿತಿ ಮುಸ್ಲಿಮ್ ಪರ್ಸನಲ್ ಲಾ(ಷರಿಯತ್) ಕಾಯ್ದೆ 1937, ಸಂವಿಧಾನದಲ್ಲಿರುವ ಆರ್ಟಿಕಲ್ 25ರ ಅಡಿಯಲ್ಲಿ ನೀಡಿರುವ ಸ್ವಾತಂತ್ರ್ಯದ ಕುರಿತು ತಜ್ಞರ ಸಮಿತಿ ಅಧ್ಯಯನ ನಡೆಸಲಿದೆ. ಈ ವರದಿ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಸ್ಸಾಂನಲ್ಲಿ ಬಹುಪತ್ನಿತ್ವ ಅಂತ್ಯಗೊಳಿಸಲು ಸರ್ಕಾರ ಬದ್ಧವಾಗಿದೆ. ಸರ್ಕಾರದ ಅಧಿಕಾರ, ಪರಿಮಿತಿಗಳ ಕುರಿತು ಚರ್ಚೆಯಾಗಲಿದೆ. ಹೆಣ್ಣುಮಕ್ಕಳ ಸಮಸ್ಯೆಗೆ ಮುಕ್ತಿ ಹಾಡಲು ಸರ್ಕಾರ ತಯಾರಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಭೌಗೋಳಿಕ ಜನಸಂಖ್ಯೆ ಅನುಪಾತ ಸಮತೋಲನ ತಪ್ಪುತ್ತಿದೆ. ಇತ್ತ ಹೆಣ್ಣುಮಕ್ಕಳ ಬದುಕು ದುಸ್ತರವಾಗಿದೆ. ಬಹುಪತ್ನಿತ್ವ ದೇಶಕ್ಕೆ ಒಳಿತಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ದೇಶದಲ್ಲಿ ಕ್ರಾಂತಿಕಾರಕ ಹೆಜ್ಜೆ ಇಡುವ ಅವಶ್ಯಕತೆ ಇದೆ.ಇಲ್ಲದಿದ್ದರೆ ಭಾರತ ಸರ್ವನಾಶವಾಗಲಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಇತ್ತೀಚೆಗೆ ಅಸ್ಸಾಂ ಸರ್ಕಾರ ಪೊಲೀಸ್ ಇಲಾಖೆಗೆ ಕಾಯಕಲ್ಪ ನೀಡಲು ಮಹತ್ವದ ನಿರ್ಧಾರ ಕೈಗೊಂಡಿದೆ. ವಿಪರೀತ ಮದ್ಯ ಕುಡಿತದ ಚಟ ಹೊಂದಿರುವ ಪೊಲೀಸ್ ಸಿಬ್ಬಂದಿಗಳನ್ನು ಕೆಲಸದಿಂದ ಸ್ವಯಂ ನಿವೃತ್ತಿ (ವಿಆರ್‌ಎಸ್) ಗೊಳಿಸಲು ಅಸ್ಸಾಂ ಸರ್ಕಾರ ಮುಂದಾಗಿದೆ. ರಾಜ್ಯದ ಸುಮಾರು 300 ಪೊಲೀಸರಿಗೆ ಸರ್ಕಾರವು ವಿಆರ್‌ಎಸ್ ಅಡಯಲ್ಲಿ ಕಡ್ಡಾಯ ನಿವೃತ್ತಿಗೊಳಿಸಿದೆ. ಮದ್ಯ ಸೇವನೆಯಿಂದ ಅವರ ದೇಹಕ್ಕೆ ಹಾನಿಯಾಗಿದೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದು ಹಳೆ ನಿಯಮವಾಗಿದ್ದು ಈ ಹಿಂದೆ ಇದನ್ನು ಜಾರಿಗೊಳಿಸಿಲ್ಲ ಎಂದು ಸಿಎಂ ಹಾಗೂ ಗೃಹ ಖಾತೆ ಹೊಂದಿರುವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.
ರಾಹುಲ್ ಗಾಂಧಿಗೆ ಮತ್ತೊಂದು ಶಾಕ್, ಅದಾನಿ ಟ್ವೀಟ್‌ಗೆ ಕ್ರಿಮಿನಲ್ ಡಿಫಮೇಶನ್ ಎಚ್ಚರಿಕೆ!
ಇದಕ್ಕೂ ಮೊದಲು ಬಾಲ್ಯವಿವಾಹ ವಿರುದ್ಧ ಸಿಎಂ ಹಿಮಂತ ಬಿಸ್ವಾ ಶರ್ಮಾ ಅತೀ ದೊಡ್ಡ ಕಾರ್ಯಾಚರಣೆ ನಡೆಸಿದ್ದರು. 4 ದಿನಗಳ ಬೃಹತ್ ಕಾರಾರಯಚರಣೆ ಯಲ್ಲಿ 1800 ಬಾಲ್ಯವಿವಾಹ ಆರೋಪಿಗಳನ್ನು ಬಂಧಿಸಲಾಗಿತ್ತು. ಜ.23 ರಂದು ಸಚಿವ ಸಂಪುಟ ಬಾಲ್ಯ ವಿವಾಹದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿತ್ತು. 10 ದಿನಗಳೊಳಗೆ 4,004 ಪ್ರಕರಣಗಳು ದಾಖಲಾಗಿತ್ತು. ಧುಬ್ರಿಯಲ್ಲಿ ಅತೀ ಹೆಚ್ಚು ಜನರನ್ನು ಬಂಧಿಸಲಾಗಿದ್ದು, 370 ಪ್ರಕರಣಗಳಲ್ಲಿ 136 ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಬಾರ್ಪೆಟದಲ್ಲಿ 110 ನಾಗವ್‌್ನ ನಲ್ಲಿ 100 ಪ್ರಕರಣಗಳು ದಾಖಲಾಗಿತ್ತು.