ರಾಹುಲ್ ಗಾಂಧಿಗೆ ಮತ್ತೊಂದು ಶಾಕ್, ಅದಾನಿ ಟ್ವೀಟ್‌ಗೆ ಕ್ರಿಮಿನಲ್ ಡಿಫಮೇಶನ್ ಎಚ್ಚರಿಕೆ!

ರಾಹುಲ್ ಗಾಂಧಿ ಕ್ರಿಮಿನಲ್ ಡಿಫಮೇಶ್ ಕೇಸ್‌ನಿಂದ ಸಂಸದ ಸ್ಥಾನದಿಂದ ಅನರ್ಹರಾಗಿ ರಾಜಕೀಯ ಹೈಡ್ರಾಮ ನಡೆದುಹೋಗಿದೆ. ಇದೀಗ ಮತ್ತೊಂದು ಸಂಕಷ್ಟ ಶುರುವಾಗಿದೆ. ಅದಾನಿ ವಿರುದ್ಧ ಟೀಕಿಸುವ ವೇಳೆ ಮಾರ್ಮಿಕ ಟ್ವೀಟ್ ಮಾಡಿದ್ದು, ಇದೀಗ ಕ್ರಿಮಿನಲ್ ಡಿಫಮೇಶನ್ ಕೇಸ್ ಆತಂಕ ಎದುರಿಸುತ್ತಿದ್ದಾರೆ.

Himanta biswa sharma warns rahul gandhi on Adani tweet set to file Criminal Defamation case ckm

ಗುವ್ಹಾಟಿ(ಏ.09): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಂಕಷ್ಟಗಳ ಸರಮಾಲೆ ಶುರುವಾಗಿದೆ. ಈಗಾಗಗಲೇ ಕ್ರಿಮಿನಲ್ ಡಿಫಮೇಶನ್ ಕೇಸ್‌ನಿಂದ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಇತ್ತೀಚೆಗೆ ರಾಹುಲ್ ಗಾಂಧಿ ಅದಾನಿ ಗ್ರೂಪ್ ಹೂಡಿಕೆ ಕುರಿತು ಸರಣಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದರಲ್ಲಿ ಅದಾನಿ ಹೂಡಿಕೆ ಮಾಡಿರುವ 20,000 ಕೋಟಿ ರೂಪಾಯಿ ಹಣ ಎಲ್ಲಿಂದ ಅನ್ನೋ ಗಂಭೀರ ಪ್ರಶ್ನೆ ಭಾರಿ ಚರ್ಚೆಯಾಗುತ್ತಿದೆ. ಈ ಕುರಿತು ರಾಹುಲ್ ಗಾಂಧಿ ಮಾರ್ಮಿಕ ಟ್ವೀಟ್ ಮಾಡಿದ್ದರು.ಈ ಟ್ವೀಟ್‌ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿರುವ ನಾಯಕರ ಹೆಸರನ್ನೂ ಉಲ್ಲೇಖಿಸಿದ್ದಾರೆ. ಇದರ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗರಂ ಆಗಿದ್ದಾರೆ. ಎಪ್ರಿಲ್ 14 ರಂದು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಡಿಫಮೇಶನ್ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.

ಅಸ್ಸಾಂನಿಂದ ಪ್ರಧಾನಿ ಮೋದಿ ಹಿಂದಿರುಗಿದ ಬಳಿಕ ರಾಹುಲ್ ಗಾಂಧಿ ಟ್ವೀಟ್ ವಿರುದ್ಧ ಕ್ರಿಮಿನಲ್ ಡಿಫಮೇಶನ್ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಹಿಮಂತ ಬಿಸ್ವಾ ಶರ್ಮಾ, ಎಪ್ರಿಲ್ 14 ರಂದು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಡಿಫಮೇಶ್ ಕೇಸ್ ದಾಖಲಿಸುವುದಾಗಿ ಹೇಳಿದ್ದಾರೆ. ಹಿಮಂತ ಬಿಸ್ವಾ ಶರ್ಮಾ ಸಿಡಿದೇಳಲು ಕಾರಣವಿದೆ. ರಾಹುಲ್ ಗಾಂಧಿ ಮಾಡಿದ ಅದಾನಿ ಬೇನಾಮಿ ಹಣ ಟ್ವೀಟ್‌ನಲ್ಲಿ ಹಿಮಂತ ಬಿಸ್ವಾ ಶರ್ಮಾ ಹೆಸರನ್ನು ಉಲ್ಲೇಖಿಸಿದ್ದಾರೆ.

ಕೋರ್ಟ್‌ ದೋಷಿ ಎಂದರೆ, ನಾನು ಹೈಕೋರ್ಟ್‌ಗೆ ಹೋಗುತ್ತೇನೆ ಹೊರತು ಪ್ರತಿಭಟನೆ ಮಾಡಲ್ಲ: ಹಿಮಾಂತ ಬಿಸ್ವಾ ಶರ್ಮ

ಶನಿವಾರ ರಾಹುಲ್ ಗಾಂಧಿ, ಪ್ರಶ್ನೆ ಹಾಗೇ ಉಳಿದಿದೆ. ಅದಾನಿ 20,000 ಕೋಟಿ ರೂಪಾಯಿ ಹೂಡಿಯಲ್ಲಿ ಯಾರ ಬೇನಾಮಿ ಹಣವಿದೆ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಜ್ಯೋತಿರಾಧಿತ್ಯ ಸಿಂಧಿಯಾ, ಗುಲಾಮ್ ನಬಿ ಅಜಾದ್, ಕಿರಣ್ ಕುಮಾರ್ ರೆಡ್ಡಿ, ಹಿಮಂತ ಬಿಸ್ವಾ ಶರ್ಮಮಾ, ಅನಿಲ್ ಆ್ಯಂಟಿನಿ ಹೆರನ್ನು ಮಾರ್ಮಿಕವಾಗಿ ಉಲ್ಲೇಖಿಸಿದ್ದಾರೆ. 

ಯಾವುದೇ ಆಧಾರವಿಲ್ಲದೆ ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ತಮ್ಮ ತೆವಲಿಗೆ, ದೇಶವನ್ನು ಉಳಿಸುವ ಹೋರಾಟದ ಹೆಸರಿನಲ್ಲಿ ಇಲ್ಲ ಸಲ್ಲದ  ಆರೋಪ ಮಾಡುತ್ತಿದ್ದಾರೆ. ಇದನ್ನು ಇಲ್ಲಿಗೆ ಬಿಡುವ ಪ್ರಶ್ನೆಯಿಲ್ಲ. ರಾಹುಲ್ ಗಾಂಧಿ ರೀತಿ ಗಾಳಿಯಲ್ಲಿ ಗುಂಡು ಹೊಡೆದು ಬಿಡುವ ಪ್ರಶ್ನೆ ಇಲ್ಲ ಎಂದು ಶರ್ಮಾ ಹೇಳಿದ್ದಾರೆ.

ಮದರಸಾ ಶಿಕ್ಷಣ ಸಂಪೂರ್ಣ ಮುಚ್ಚುವ ಸೂಚನೆ ನೀಡಿದ ಸಿಎಂ ಹಿಮಂತ ಬಿಸ್ವಾ ಶರ್ಮಾ!

ಎಪ್ರಿಲ್ 16ಕ್ಕೆ ಕರ್ನಾಟಕ್ಕೆ ರಾಹುಲ್ ಗಾಂಧಿ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕೋಲಾರದಲ್ಲಿ ನಡೆಯಬೇಕಿದ್ದ ‘ಜೈ ಭಾರತ್‌ ಸತ್ಯಾಗ್ರಹ ಯಾತ್ರೆ’ ಸಮಾವೇಶ ಒಂದು ವಾರ ಮುಂದೂಡಿದ್ದು, ಏ.16ಕ್ಕೆ ಸಮಾವೇಶ ನಡೆಸುತ್ತೇವೆ. ರಾಹುಲ್‌ ಗಾಂಧಿ ಅವರು ಯಾವ ಜಾಗದಲ್ಲಿ ಮಾಡಿದ ಭಾಷಣಕ್ಕೆ ಹೆದರಿ ಅವರನ್ನು ಸಂಸದ ಸ್ಥಾನ ಅನರ್ಹ ಮಾಡಲಾಯಿತೋ ಅದೇ ಜಾಗದಲ್ಲಿ ನಿಂತು ಮಾತನಾಡಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

Latest Videos
Follow Us:
Download App:
  • android
  • ios