ಹಿಂದೂ ಭಾವನೆ ಗೌರವಿಸಿ ಬಕ್ರೀದ್ ದಿನ ಗೋ ಮಾತೆ ಬಲಿ ಬೇಡ, ಬದ್ರುದ್ದೀನ್ ಅಜ್ಮಲ್ ಮನವಿ!
- ಅಸ್ಸಾಂ ಸಂಸದ, AIUDF ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿಶೇಷ ಮನವಿ
- ಹಿಂದೂ ಭಾವನೆಗಳಿಗೆ ಧಕ್ಕೆ ತರುವುದು ಉಚಿತವಲ್ಲ, ಬಲಿ ಬೇಡ
- ಜುಲೈ 10 ರಂದು ಬಕ್ರೀದ್ ಆಚರಣೆ ಹಿನ್ನಲೆಯಲ್ಲಿ ಮನವಿ
ಅಸ್ಸಾಂ(ಜು.04): ಹಿಂದೂ ಮುಸ್ಲಿಮ್ ನಡುವೆ ಇತ್ತೀಚೆಗೆ ಹಲವು ವಿಚಾರಗಳು ಸಂಘರ್ಷಕ್ಕೆ ಕಾರಣವಾಗಿದೆ. ಪ್ರತಿ ಹೇಳಿಕೆಗಳೂ ವಿವಾದಕ್ಕೆ ಕಾರಣವಾಗುತ್ತಿದೆ. ಇದರ ನಡುವೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(AIUDF ) ಮುಖ್ಯಸ್ಛ ಹಾಗೂ ಅಸ್ಸಾಂ ಸಂಸದ ಬದ್ರುದ್ದೀನ್ ಅಜ್ಮಲ್ ತಮ್ಮ ಸಮುದಾಯಕ್ಕೆ ವಿಶೇಷ ಮನವಿ ಮಾಡಿದ್ದಾರೆ. ಜುಲೈ 10 ರಂದು ಆಚರಿಸುವ ಬಕ್ರೀದ್ ಹಬ್ಬಕ್ಕೆ ಹಿಂದೂಗಳ ನಂಬಿಕೆ, ಭಾವನೆ ಗೌರವಿಸುವ ಮಮೂಲಕ ಗೋ ಮಾತೆ ಬಲಿಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಬಕ್ರೀದ್ ಹಬ್ಬದ ಕಾರಣದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಾರದು. ಬಲಿ ಕೊಡುವುದು ಬಕ್ರೀದ್ ಹಬ್ಬದ ಭಾಗವಾಗಿದೆ. ಆದರೆ ದನಗಳ ಬಲಿ ಬೇಡ, ಇದರ ಬದಲು ಕುರಿ, ಮೇಕೆ, ಒಂಟೆ ಆಯ್ಕೆ ಮಾಡಿಕೊಳ್ಳಿ ಎಂದು ಬದ್ರುದ್ದೀನ್ ಅಜ್ಮಲ್ ಮುಸ್ಲಿಮ್ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ಕಾಯ್ದೆ ಬಂದ್ರೂ ಉಡುಪಿಯಲ್ಲಿ ನಿಲ್ಲದ ಗೋಹತ್ಯೆ, 1 ತಿಂಗ್ಳಲ್ಲೇ 4 ಪ್ರಕರಣಗಳು ಉದಾಹರಣೆ!
ಸನಾತನ ಹಿಂದೂ ಧರ್ಮ ದನಗಳನ್ನು ಗೋ ಮಾತೆ ಎಂದು ಪೂಜಿಸುತ್ತದೆ. ದನಗಳ ಬಲಿ ಕೊಡುವುದರಿಂದ ಭಾರತೀಯ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗಲಿದೆ. ಸನಾತನ ಧರ್ಮ ತಾಯಿ ಸ್ವರೂಪದಲ್ಲಿ ಪೂಜಿಸುವ ಗೋವನ್ನು ಬಲಿ ಕೊಡುವುದು ಉಚಿತವಲ್ಲ ಎಂದು ಅಜ್ಮಲ್ ಹೇಳಿದ್ದಾರೆ. 2008ರಲ್ಲಿಇಸ್ಲಾಮ್ ದಾರುಲ್ ಉಲಮ್ ಬಕ್ರೀದ್ ಹಬ್ಬಕ್ಕೆ ಗೋವಿನ ಬಲಿ ಕಡ್ಡಾಯವಲ್ಲ ಎಂದಿದೆ. ಇನ್ನು ಮದರಸಾಗಳು ಕೂಡ ಬಕ್ರೀದ್ ಹಬ್ಬಕ್ಕೆ ದನ ಬಲಿ ಕಡ್ಡಾಯವಲ್ಲ ಎಂದಿದೆ. ಹೀಗಾಗಿ ಮುಸ್ಲಿಮ್ ಸಮುದಾಯ ಕಡ್ಡಾಯವಲ್ಲದ ಆಚರಣೆಯನ್ನು ಮುಂದುವರಿಸುವ ಅಗತ್ಯವಿಲ್ಲ. ಇಷ್ಟೇ ಅಲ್ಲ ಈ ನಿರ್ಧಾರದಿಂದ ಹಿಂದೂಗಳ ಭಾವನೆಯನ್ನು ಗೌರವಿಸಿದ ಕೀರ್ತಿಯೂ ಸಲ್ಲಲಿದೆ ಎಂದು ಬದ್ರುದ್ದೀನ್ ಅಜ್ಮಲ್ ಮನವಿ ಮಾಡಿದ್ದಾರೆ.
ಬಕ್ರಿದ್ ವೇಳೆ ಜಾನುವಾರು ವಧೆ ತಡೆಗೆ ಕಟ್ಟುನಿಟ್ಟಿನ ಕ್ರಮ
ಜುಲೈ 10ರಂದು ರಾಜ್ಯಾದ್ಯಂತ ಬಕ್ರೀದ್ ಹಬ್ಬದ ಆಚರಣೆ ಮಾಡಲಾಗುವುದು. ಮುಂಜಾಗ್ರತಾ ಕ್ರಮವಾಗಿ ಶಾಂತಿ ಸೌಹಾರ್ಧ ಸಭೆಗಳನ್ನು ಆಯೋಜಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿರುವುದರಿಂದ ರಾಜ್ಯದಲ್ಲಿ ಎಲ್ಲ ದನ, ಕರು, ಒಂಟೆಗಳು 13 ವರ್ಷದೊಳಗಿನ ಎಮ್ಮೆ, ಕೋಣಗಳನ್ನು ಅಕ್ರಮ ಸಾಗಾಣಿಕೆ ಹಾಗೂ ವಧೆ ಮಾಡುವುದನ್ನು ನಿಷೇಧಿಸಲಾಗಿದೆ. ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆ ತಡೆಗಟ್ಟುವಿಕೆ ಸಂಬಂಧ ಪ್ರಮುಖ ರಸ್ತೆಗಳ ಚೆಕ್‌ಪೋಸ್ಟ್ ನಿರ್ಮಿಸಿ ತಪಾಸಣೆ ಮಾಡಬೇಕು ಎಂದರು.
ಸಿ.ಟಿ.ರವಿ ಕ್ಷೇತ್ರದಲ್ಲಿ ಬುಲ್ಡೋಜರ್ ಸದ್ದು, ಅಕ್ರಮ ಗೋ ಮಾಂಸ ಅಡ್ಡೆಗಳ ಮೇಲೆ ದಾಳಿ
ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಜಾನುವಾರುಗಳು ವಧೆಯಾಗದಂತೆ ಕ್ರಮವಹಿಸಬೇಕು. ಈ ಕುರಿತು ತಾಲೂಕು ಮಟ್ಟದ ಸಮಿತಿಗಳು, ಜಿಲ್ಲಾ ಮಟ್ಟದ ಸಮಿತಿಗೆ ವರದಿ ಸಲ್ಲಿಸಬೇಕು. ಅಕ್ರಮವಾಗಿ ಜಾನುವಾರು ಸಾಗಾಟ ಮಾಡುವ ಕುರುತು ಮಾಹಿತಿ ಲಭಿಸಿದರೆ ತಕ್ಷಣವೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ ಕಂಡುಬಂದರೆ ಪ್ರಕರಣ ದಾಖಲಿಸಬೇಕು ಎಂದರು.
ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ ಮಾತನಾಡಿ, 2021ರ ಗೋ ಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಯಿದೆ. ಕಾಯ್ದೆ ಅನುಸಾರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹಾಗೂ ಪಶು ವೈದ್ಯಾಧಿಕಾರಿ ಹಂತ ಮೇಲಿನ ಅಧಿಕಾರಿಗಳು ಕಾಯ್ದೆ ಉಲ್ಲಂಘನೆಯ ಪ್ರಕರಣ ದಾಖಲಿಸಬೇಕು. ಪ್ರಕರಣವನ್ನು ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಮೊದಲ ಬಾರಿ ತಪ್ಪಿತಸ್ಥರು ಎಂದು ಕಂಡು ಬಂದರೆ 50 ಸಾವಿರದಿಂದ 5 ಲಕ್ಷ ರು.ವರೆಗೆ ದಂಡ ವಿಧಿಸಲಾಗುತ್ತದೆ. 3 ವರ್ಷದಿಂದ 7 ವರ್ಷದವರೆಗೆ ಸಜೆ ನೀಡಲಾಗುತ್ತದೆ. ಪದೇ ಪದೇ ಕಾಯ್ದೆಯ ಉಲಂಘನೆ ಮಾಡಿದರೆ ಒಂದು ಲಕ್ಷದಿಂದ 10 ಲಕ್ಷ ರು.ವರೆಗೆ ದಂಡ, 7 ರಿಂದ 10 ವರ್ಷಗಳ ಸಜೆ ವಿಧಿಸಲಾಗುತ್ತದೆ. 10 ಕಿಮೀ ವ್ಯಾಪ್ತಿಯಲ್ಲಿ ಜಾನುವಾರು ಸಾಗಾಟ ಮಾಡಲು ಯಾವುದೇ ಪರವಾನಗಿ ಅಗತ್ಯವಿಲ್ಲ. ಇದಕ್ಕೂ ಮೇಲ್ಪಟ್ಟಸಾಗಾಣಿಕೆ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು ಎಂದರು.