Asianet Suvarna News Asianet Suvarna News

ಸಿ.ಟಿ.ರವಿ ಕ್ಷೇತ್ರದಲ್ಲಿ ಬುಲ್ಡೋಜರ್ ಸದ್ದು, ಅಕ್ರಮ ಗೋ ಮಾಂಸ ಅಡ್ಡೆಗಳ ಮೇಲೆ ದಾಳಿ

  • ಕಾಫಿನಾಡಲ್ಲಿ ಯುಪಿಯ ಬುಲ್ಡೋಜರ್ ಪ್ರಯೋಗ 
  • ಗೋ ಮಾಂಸ ಮಾರಾಟ ಮಾಡುವ ಮನೆಗಳಿಗೆ ನಗರಸಭೆ  ನೋಟಿಸ್
  • ನಿರ್ದಾಕ್ಷಣ್ಯ ಕ್ರಮದ ಎಚ್ಚರಿಕೆ ನೋಟಿಸ್ ಅಂಟಿಸಿದ ನಗರಸಭೆ
  • ಸ್ಫೋಟಕ, ಮಾದಕ ವಸ್ತು ಸೇರಿದಂತೆ ಗೋ ಹತ್ಯೆ ಮಾಡಿದ್ರೆ ಕಟ್ಟಡ ನೆಲಸಮ
  • 10ಕ್ಕೂ ಹೆಚ್ಚು ಮನೆ,  ಗೋಮಾಂಸ ಅಡ್ಡೆಗಳಿಗೆ ನೋಟಿಸ್ ಅಂಟಿಸಿದ ಸಿಬ್ಬಂದಿ
chikkamagaluru municipal corporation notice to Illegal beef shed gow
Author
Bengaluru, First Published Jun 15, 2022, 5:48 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜೂ.15): ಕಾಫಿನಾಡಲ್ಲಿ ಉತ್ತರ ಪ್ರದೇಶದ ಬುಲ್ಡೋಜರ್ ಪ್ರಯೋಗ ಮಾಡಲಾಗುತ್ತಿದೆ. ಅಕ್ರಮ ಗೋ ಮಾಂಸ (Beef) ಅಡ್ಡೆಗಳ ಮೇಲೆ ನಗರ ಸಭೆ ಜೆಸಿಬಿ ಯಂತ್ರದ ಮೂಲಕ ದಾಳಿ ನಡೆಸಲು ಪ್ಲಾನ್ ರೂಪಿಸಿ ಅಖಾಡಕ್ಕೆ ಇಳಿದಿದೆ.

ಅಕ್ರಮ ಕಸಾಯಿಖಾನೆ ನಡೆಸುತ್ತಿರುವರಿಗೆ ನಡುಕ ಶುರು: ಚಿಕ್ಕಮಗಳೂರು ನಗರಸಭೆಯಿಂದ (chikkamagaluru municipal corporation) ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ಮಾಡಲು ಪ್ಲಾನ್ ರೂಪಿಸಿದೆ. ಚಿಕ್ಕಮಗಳೂರು (chikkamagaluru) ನಗರದಲ್ಲಿ ಒಂದೇ ಒಂದು ಕಸಾಯಿಖಾನೆಗೂ ಅನುಮತಿ ಇಲ್ಲ. ಆದ್ರೆ, ಅಕ್ರಮವಾಗಿ 40ಕ್ಕೂ ಹೆಚ್ಚಿವೆ. ನಿನ್ನೆ-ಮೊನ್ನೆಯಿಂದಲ್ಲ. ದಶಕಕ್ಕೂ ಅಧಿಕ ವರ್ಷದಿಂದ. ಗೋಹತ್ಯೆ ವಿರುದ್ಧ ಹೋರಾಡ್ದೋರು ಓದೆ ತಿಂದ್ರು. ಜೈಲಿಗೆ ಹೋದ್ರು. ಕೆಲವರು ಸತ್ತೇ ಹೋದ್ರು. ನಗರಸಭೆ ಯಾವತ್ತೋ ಮಾಡಬೇಕಾದ ಕೆಲಸವನ್ನ ಈಗ ಮಾಡಲು ಮುಂದಾಗಿದೆ.

Chikkamagaluru ; ಅಕ್ರಮ ಗೋಮಾಂಸ ಮಾರಾಟ ಶೆಡ್ ತೆರವು

ಆಗಾಗ ನೋಟೀಸ್ ನೀಡಿದ್ದರು ಅಕ್ರಮ ಗೋಹತ್ಯೆ ನಿಂತಿರಲಿಲ್ಲ. ಆದ್ರೀಗ ಪ್ರಾಥಮಿಕ ಹಂತವಾಗಿ 20ಕ್ಕೂ ಹೆಚ್ಚು ಮನೆಗಳಿಗೆ ನಗರಸಭೆ ನೋಟೀಸ್ ನೀಡಿ ಎಚ್ಚರಿಕೆ ನೀಡಿದೆ. ಹೇಳಿ ಹೇಳಿ ಸಾಕಾಯ್ತು. ಹಲವು ಬಾರಿ ನೋಟೀಸ್ ನೀಡಿ ಎಚ್ಚರಿಕೆ ನೀಡಿದ್ದು ಆಯ್ತು. ಇನ್ನು ಮುಂದೆ ಅಕ್ರಮ ಗೋಹತ್ಯೆ ನಡೆದರೆ. ಆ ಜಾಗ ಮನೆ-ಕಟ್ಟಡ ಯಾವ್ದೆ ಆಗಿದ್ರು ಮುಲಾಜಿಲ್ಲದೆ ಡೆಮಾಲಿಶ್ ಮಾಡ್ತೀವಿ ಅಂತ  ನಗರಸಭೆ ಸಭಾ ಅಧ್ಯಕ್ಷ ವರಸಿದ್ದ ವೇಣುಗೋಪಾಲ್ ಎಚ್ವರಿಕೆ ನೀಡಿದ್ದಾರೆ. 

ಪ್ರಾಯೋಗಿಕವಾಗಿ ಸದ್ಯಕ್ಕೆ ಒಂದು ಅಕ್ರಮ ಗೋಹತ್ಯೆ ಶೆಡ್ ನೆಲಸಮ: ಎಂಟು ದಿನಗಳ ಹಿಂದಷ್ಟೆ ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯಲ್ಲಿ (Tamil colony) ಗಿಡ ಗಂಟೆಗಳ ಮಧ್ಯೆ ಇದ್ದ ಅಕ್ರಮ ಕಸಾಯಿಖಾನೆಯನ್ನ ತೆರವು ಮಾಡಿದ್ದರು. ಅಲ್ಲೂ ಕೂಡ ಎಳೆ ಕರುವನ್ನ ಕಡಿದು ನೇತು ಹಾಕಿದ್ದರು. ಅಲ್ಲಿದ್ದ ಸುಮಾರು 200 ಕೆಜಿಗೂ ಅಧಿಕ ಮಾಂಸವನ್ನ ವಶಪಡಿಸಿಕೊಂಡಿದ್ದರು.

UDUPI; ಕಲುಷಿತ ನೀರು ಕುಡಿದು ಲಕ್ಷಾಂತರ ಮೀನುಗಳ ಸಾವು, ಕೊಳಕು ನೀರು ಬಂದಿದ್ದೆಲ್ಲಿಂದ?

ನಿನ್ನೆಯೂ ನಗರದ ಟಿಪ್ಪು ನಗರದಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ದಾಳಿ ಮಾಡಿ ಅಲ್ಲಿ ಪ್ಯಾಕ್ ಆಗಿದ್ದ ಹಾಗೂ ಫ್ರಿಜ್ ನಲ್ಲಿ ಇಟ್ಟಿದ್ದ ಮಾಂಸದ ಜೊತೆ ಕೆಲ ಸಾಮಾಗ್ರಿಗಳನ್ನೂ ವಶಕ್ಕೆ ಪಡೆದಿದ್ದಾರೆ. ಹಸು-ಕರು ಕಟ್ಟುವ ಹಗ್ಗಗಳು, ಮರದ ತುಂಡು ಎಲ್ಲವನ್ನೂ ವಶಕ್ಕೆ ಪಡೆದಿದ್ದಾರೆ. ಮೇಲೆ ನೋಡೋದಕ್ಕೆ ವಾಸದ ಮನೆ. ಆದರೆ, ಒಳಗೆ ಕಸಾಯಿಖಾನೆ. ಮನೆಯನ್ನೇ ಕಸಾಯಿಖಾನೆ ಮಾಡಿಕೊಂಡವರಿಗೆ ಕಠಿಣವಾಗಿ  ಎಚ್ವರಿಸಿದ್ದಾರೆ.

ಅಕ್ರಮ ಕಟ್ಟಡಗಳನ್ನ ಎರಡ್ಮೂರು ದಿನದಲ್ಲಿ ತೆರವು ಮಾಡದಿದ್ರೆ ನಗರಸಭೆಯೇ ತೆರವು ಮಾಡಲಿದೆ ಎಂದು ಎಚ್ವರಿಕೆ ನೀಡಿದ್ದಾರೆ. ಒಟ್ಟಾರೆ, ಹಲವು ದಶಕಗಳಿಂದ ರಾಜರೋಷವಾಗಿ  ಅಕ್ರಮ ಕಸಾಯಿಖಾಯಿ ನಡೆಸುತ್ತಿದ್ದ ಖದೀಮರಿಗೆ ಆಡಳಿತ ವ್ಯವಸ್ಥೆ ನಡುಕ ಹುಟ್ಟಿಸಿದೆ.

Ballari Pearl Scam; ಮುತ್ತಿನ ಮತ್ತಲ್ಲಿ ಕೋಟಿ ಕಳೆದುಕೊಂಡ ನೂರಾರು ಜನ!

ಪ್ರಾಯೋಗಿಕವಾಗಿ ಸದ್ಯಕ್ಕೆ ಒಂದು ಅಕ್ರಮ ಗೋಹತ್ಯೆ ಶೆಡ್ ನೆಲಸಮವಾಗಿದೆ. ಈಗ ನೋಟೀಸ್ ನೀಡಿರೋ ಮನೆ ಹಾಗೂ ಶೆಡ್ ಗಳು ಇಷ್ಟು ದಿನ ಮಾಡ್ತಿದ್ದ ಅಕ್ರಮವನ್ನ ನಿಂತ ಜಾಗದಲ್ಲೇ ಕೈಬಿಡದಿದ್ದರೆ ಅವುಗಳಿಗೂ ಉಳಿಗಾಲವಿಲ್ಲ ಎಂದು ಆಡಳಿತ ವ್ಯವಸ್ಥೆ ಖಡಾಖಂಡಿತವಾಗಿ ಕಡ್ಡಿ ಮುರಿದಂತೆ ಎಚ್ವರಿಕೆ ನೀಡಿದೆ. ನಗರದ ಜನ ಕೂಡ ಅಕ್ರಮ ಗೋಹತ್ಯೆಗೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದಾರೆ. ಸರ್ಕಾರ ಮುಂದೆ ಏನ್ ಮಾಡುತ್ತೆ. ಹೇಗೆ ಮಾಡುತ್ತೆ ಅನ್ನೋದನ್ನ ಕಾದುನೋಡ್ಬೇಕು..

"

Follow Us:
Download App:
  • android
  • ios