ಭಾರತೀಯ ಮೂಲದ ಅಶ್ವಿನ್‌ ರಾಮಸ್ವಾಮಿ, ಅಮೆರಿಕದ ಸೆನೆಟ್‌ ಸೀಟ್‌ಗೆ ಸ್ಪರ್ಧೆ ಮಾಡಲಿರುವ ಭಾರತದ ಮೊದಲ  ಜನರೇಷನ್‌ ಝಡ್‌ ಅಮೇರಿಕನ್‌ (1995 ರಿಂದ 2010ರ ಒಳಗೆ ಜನಿಸಿರುವ ವ್ಯಕ್ತಿಗಳು) ಎನಿಸಿಕೊಂಡಿದ್ದಾರೆ.

ನವದೆಹಲಿ (ಫೆ.21):24 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅಶ್ವಿನ್ ರಾಮಸ್ವಾಮಿ ಅವರು ರಾಜ್ಯ ಸೆನೆಟ್ ಸ್ಥಾನಕ್ಕೆ ಸ್ಪರ್ಧಿಸಲಿರುವ ಮೊದಲ ಜನರೇಷನ್‌ ಝಡ್‌ (1995 ರಿಂದ 2010ರ ಒಳಗೆ ಜನಿಸಿರುವ ವ್ಯಕ್ತಿಗಳು) ಭಾರತೀಯ-ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎರಡನೇ ತಲೆಮಾರಿನ ವಲಸಿಗರಾದ ರಾಮಸ್ವಾಮಿ ಅವರು ಜಾರ್ಜಿಯಾದ ಜಿಲ್ಲೆ 48 ರಲ್ಲಿ ಡೆಮಾಕ್ರಟ್‌ ಸ್ಪರ್ಧಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಅವರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದು ರಿಪಬ್ಲಿಕನ್ ಶಾನ್ ಸ್ಟಿಲ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಶಾನ್‌ ಸ್ಟಿಲ್‌ ಜನವರಿ 6 ರಂದು ಅಮೆರಿಕನ್‌ ಕ್ಯಾಪಿಟಲ್‌ ಮೇಲೆ ನಡೆದ ದಂಗೆಯಲ್ಲಿ ಭಾಗಿಯಾದ ಕಾರಣಕ್ಕಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆಗೆ ದೋಷಾರೋಪಣೆ ಮಾಡಲಾಗಿತ್ತು. 'ನಾನು ಜಾರ್ಜಿಯಾದಲ್ಲಿ ಜನಿಸಿ, ಇಲ್ಲಿಯೇ ಬೆಳೆದವರು. 2ನೇ ಜನರೇಷನ್‌ವ ವಲಸಿಗ ಭಾರತೀಯ ಅಮೆರಿಕ. ಅವಳಿ ಸಹೋದರರ ಪೈಕಿ ಒಬ್ಬ ಹಾಗೂ ಇಂಜಿನಿಯರ್‌' ಎಂದು ಅವರ ಕ್ಯಾಂಪೇನ್‌ ವೆಬ್‌ಸೈಟ್‌ನಲ್ಲಿ ಬರೆಯಲಾಗಿದೆ.

ಪಿಟಿಐಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ 24 ವರ್ಷದ ರಾಮಸ್ವಾಮಿ "ನನ್ನ ಸಮುದಾಯಕ್ಕೆ ಮರಳಿ ಏನನ್ನಾದರೂ ನೀಡಬೇಕು ಎನ್ನುವ ಸಲುವಾಗಿ ನಾನು (ಜಾರ್ಜಿಯಾ) ರಾಜ್ಯ ಸೆನೆಟ್‌ಗೆ ಸ್ಪರ್ಧಿಸುತ್ತಿದ್ದೇನೆ. ನನ್ನಂತೆ ಎಲ್ಲರಿಗೂ ಸಮಾನ ಅವಕಾಶಗಳಿವೆ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ' ಎಂದು ಹೇಳಿದ್ದರು. ಯುವಕರು, ರಾಜಕೀಯದಲ್ಲಿ ಅಸಾಂಪ್ರದಾಯಿಕ ಹಿನ್ನಲೆಯಿಂದ ಬಂದವರಿಗೆ ನಾನು ಹೊಸ ದನಿಯಾಗಬೇಕು ಎಂದು ಬಯಸಿದ್ದೇನೆ. ನಾನು ಯಾವ ಜನರನ್ನು ಪ್ರತಿನಿಧಿಸುತ್ತೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ ಎಂದಿದ್ದಾರೆ.

ಯಾರಿವರು ಅಶ್ವಿನ್ ರಾಮಸ್ವಾಮಿ?: ರಾಮಸ್ವಾಮಿಯವರ ತಂದೆ ತಾಯಿ ಇಬ್ಬರೂ ಐಟಿ ಹಿನ್ನಲೆಯುವರಾಗಿದ್ದಾರೆ. 1990ರಲ್ಲಿಯೇ ತಮಿಳುನಾಡಿನಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು. ಇನ್ನು ಅಶ್ವಿನ್‌ ರಾಮಸ್ವಾಮಿ 2021ರಲ್ಲಿ ಸ್ಟ್ಯಾನ್‌ಫೋರ್ಡ್‌ ವಿವಿಯಿಂದ ಪದವಿ ಪಡೆದುಕೊಂಡಿದ್ದಾರೆ. ತಮ್ಮನ್ನು ತಾವು ಹಿಂದು ಎನ್ನುವ ರಾಮಸ್ವಾಮಿ, ಭಾರತ ಹಾಗೂ ಅಮೆರಿಕದ ಎರಡೂ ಸಂಸ್ಕೃತಿಗಳು ನನ್ನೊಂದಿಗೆ ಇದೆ ಎಂದಿದ್ದಾರೆ. ಭಾರತೀಯ ಸಂಸ್ಕೃತಿ ನನ್ನ ಮೂಲ. ನಾನೊಬ್ಬ ಹಿಂದು. ಭಾರತೀಯ ಸಂಸ್ಕೃತಿಯ ಫಿಲಾಸಫಿಯನ್ನೇ ನನ್ನ ಜೀವನ ಪೂರ್ತಿ ಪಾಲಿಸುತ್ತೇನೆ ಎಂದಿದ್ದಾರೆ.

ನಾನು ಹಿಂದು, ನನ್ನ ಪಾಲಿಗೆ ಮದುವೆ ಅನ್ನೋದು ಪವಿತ್ರ ಸಂಬಂಧ: ಅಮೆರಿಕ ಅಧ್ಯಕ್ಷೀಯ ಸ್ಪರ್ಧಿಯ ಮಾತು!

ಭಾರತದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆಯನ್ನು ಓದಿಕೊಂಡು ಬೆಳೆದವರರು ನಾನು. ಶಾಲೆಯಲ್ಲಿ ಸಂಸ್ಕೃತವನ್ನು ಓದಿದ್ದೇನೆ. ಉಪನಿಷದ್‌ಗಳ ಪ್ರಾಚೀನ ಗ್ರಂಥಗಳ ವಿವರಣೆಯನ್ನು ನೀಡಿದ್ದೇನೆ. “ನಾನು ಕಾಲೇಜಿನಲ್ಲಿದ್ದಾಗ, ನಾನು ಸಂಸ್ಕೃತವನ್ನು ಕಲಿತಿದ್ದೇನೆ ಮತ್ತು ಬಹಳಷ್ಟು ಪ್ರಾಚೀನ ಗ್ರಂಥಗಳನ್ನು ಓದಿ ಅರ್ಥ ಮಾಡಿಕೊಂಡಿದ್ದೇನೆ. ಉಪನಿಷತ್ತುಗಳನ್ನು ಓದಲು ತುಂಬಾ ಆಸಕ್ತಿ ಹೊಂದಿದ್ದೆ, .. ಮತ್ತು ನನ್ನ ಇಡೀ ಜೀವನ ನಾನು ಯೋಗ ಮತ್ತು ಧ್ಯಾನದಲ್ಲಿ ತುಂಬಾ ತೊಡಗಿಸಿಕೊಂಡಿದ್ದೇನೆ ಮತ್ತು ಈಗ ಕಿರಿಯ ವಿದ್ಯಾರ್ಥಿಗಳಿಗೆ ಬಾಲ ವಿಹಾರವನ್ನು ಕಲಿಸುತ್ತಿದ್ದೇನೆ' ಎಂದಿದ್ದಾರೆ.

ಅಮೆರಿಕ ಅಧ್ಯಕೀಯ ಚುನಾವಣೆ: ಭಾರತೀಯ ಮೂಲದ ವಿವೇಕ್‌ 2ನೇ ಸ್ಥಾನಕ್ಕೆ, ಟ್ರಂಪ್‌ಗೆ ಶಿಕ್ಷೆಯಾದ್ರೆ ಅವಕಾಶ?