ಮನೋಜ್ ತಿವಾರಿ ಹಾಡು, ಡ್ಯಾನ್ಸ್ ಎಂಜಾಯ್ ಮಾಡ್ತಾರಂತೆ ಕೇಜ್ರಿ| ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಕುರಿತು ಕೇಜ್ರಿ ವ್ಯಂಗ್ಯ| ತಿವಾರಿ ಡ್ಯಾನ್ಸ್ ನೋಡುವಂತೆ ಜನರಲ್ಲಿ ಮನವಿ ಮಾಡುತ್ತೇನೆ ಎಂದ ಕೇಜ್ರಿವಾಲ್| ಸಂದರ್ಶನದಲ್ಲಿ ಮನೋಜ್ ತಿವಾರಿ ಕಾಲೆಳೆದ ದೆಹಲಿ ಸಿಎಂ|

ನವದೆಹಲಿ(ಫೆ,.06): ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರ ಹಾಡು ಹಾಗೂ ನೃತ್ಯ ಎಂದರೆ ತಮಗೆ ಇಷ್ಟ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರ ಡ್ಯಾನ್ಸ್ ಎಂದರೆ ತಮಗೆ ಇಷ್ಟ ಎಂದು ಕಿಚಾಯಿಸಿದ್ದಾರೆ.

Scroll to load tweet…

ಇದೇ ಕಾರಣಕ್ಕೆ ತಾವು ಜನರ ಬಳಿ ಹೋದಾಗ ಮನೋಜ್ ತಿವಾರಿ ಅವರ ಡ್ಯಾನ್ಸ್ ಹಾಗೂ ಹಾಡುಗಳನ್ನು ತಪ್ಪದೇ ನೋಡಿ ಲೈಕ್ ಮಾಡಿ ಎಂದು ಮನವಿ ಮಾಡುವುದಾಗಿ ಅರವಿಂದ್ ಕೇಜ್ರಿವಾಲ್ ಕಾಲೆಳೆದಿದ್ದಾರೆ.

ಬಿಜೆಪಿಯ ಉಗ್ರ ಪಟ್ಟಕ್ಕೆ ಕಣ್ಣೀರಿಟ್ಟ ದಿಲ್ಲಿ ಸಿಎಂ ಕೇಜ್ರಿವಾಲ್

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪುರ್ವಾನ್’ಚಾಲೀಸ್’ಗೆ ಅವಮಾನ ಮಾಡಿದ್ದಾರೆ ಎಂಬ ಮನೋಜ್ ತಿವಾರಿ ಆರೋಪಕ್ಕೆ ಪ್ರತಿಯಾಗಿ ಅವರ ನೃತ್ಯ ಹಾಗೂ ಹಾಡುಗಳ ಕುರಿತು ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.

Scroll to load tweet…

ಪುರ್ವಾನ್’ಚಾಲೀಸ್ ಪೂರ್ವ ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಭಾರೀ ಜನಪ್ರಿಯ ಜಾನಪದ ಗೀತೆಯಾಗಿದ್ದು, ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿಯಲ್ಲಿ ವಾಸಿಸುತ್ತಾರೆ.