ಅರುಣಾಚಲ ಟಿಬೆಟ್ ಜೊತೆ ಗಡಿ ಹಂಚಿಕೊಂಡಿದೆ ಹೊರತು ಚೀನಾ ಅಲ್ಲ; ತಿರುಗೇಟು ನೀಡಿದ CM ಖಂಡು!
ಹಲವು ದಶಕಗಳಿಂದ ಚೀನಾ ಗಡಿಯುದ್ದಕ್ಕೂ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ. ಪ್ರತಿ ಭಾರಿ ಭಾರತ ತಕ್ಕೆ ತಿರುಗೇಟು ನೀಡುತ್ತಾ ಬಂದಿದೆ. ಅರುಣಾಚಲ ಪ್ರದೇಶ ನಮ್ಮದು ಎಂದು ಖ್ಯಾತೆ ತೆಗೆಯುವ ಚೀನಾಗೆ, ಮುಖ್ಯಮಂತ್ರಿ ಪೆಮಾ ಖಂಡು ನೀಡಿದ ಪ್ರತ್ಯುತ್ತರ ಚೀನಾಗೆ ಕಪಾಳಮೋಕ್ಷ ಮಾಡಿದಂತಿದೆ
ಅರುಣಾಚಲ ಪ್ರದೇಶ(ನ.23): ಭಾರತದ ಜೊತೆ ಸದಾ ಕಿರಿಕ್ ತೆಗೆಯುವ ಚೀನಾ, ಅರುಣಾಚಲ ಪ್ರದೇಶ ತಮ್ಮದು ಎಂಬ ಖ್ಯಾತೆ ತೆಗೆಯುತ್ತಲೇ ಬಂದಿದೆ. ಗಡಿ ಕೆಣಕಿದ ಚೀನಾಗೆ ಭಾರತೀಯ ಸೇನೆ ತಕ್ಕ ತಿರುಗೇಟು ನೀಡಿದೆ. ಇದೀಗ ಅರುಣಾಚಲ ಪ್ರದೇಶದ ಮೇಲೆ ಪ್ರಭುತ್ವ ಸಾಧಿಸಲು ಯತ್ನಿಸುವ ಚೀನಾಗೆ, ಅರುಣಾಚಲ ಮುಖ್ಯಮಂತ್ರಿ ಪೆಮಾ ಖಂಡು ತಕ್ಕ ಉತ್ತರ ನೀಡಿದ್ದಾರೆ.
ಅರುಣಾಚಲ ಪ್ರದೇಶ ಭಾರತದ ಭಾಗ: ಚೀನಾಗೆ ಎಚ್ಚರಿಕೆ ನೀಡಿದ ಅಮೆರಿಕ!.
ಚೀನಾ ದೀರ್ಘಕಾಲದಿಂದ ಹಕ್ಕುನ್ನು ಪೆಮಾ ಖಂಡು ಕಡೆಗಣಿಸಿದ್ದಾರೆ. ಅರುಣಾಚಲ ಪ್ರದೇಶ, ಟಿಬೆಟ್ ಜೊತೆ ಗಡಿ ಹಂಚಿಕೊಂಡಿದೆ. ಬದಲಾಗಿ ಚೀನಾ ಜೊತೆಗಲ್ಲ ಎಂದು ಪೆಮಾ ಖಂಡು ಹೇಳಿದ್ದಾರೆ. ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ. ಟಿಬೆಟನ್ನು ಚೀನಾ ಸ್ವಾಧೀನ ಪಡಿಸಿಕೊಂಡಿದೆ ಅನ್ನೋದು ಇಡೀ ವಿಶ್ವಕ್ಕೆ ತಿಳಿದಿದೆ ಎಂದು ಖಾಸಗಿ ಮಾದ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಪೆಮಾ ಖಂಡು ಹೇಳಿದ್ದಾರೆ.
ಲಡಾಖ್ ಬೆನ್ನಲ್ಲೇ ಅರುಣಾಚಲ ಪ್ರದೇಶ ನಮ್ಮದು ಎಂದು ಚೀನಾ; ಮತ್ತೆ ಶುರುವಾಯ್ತು ಕಿರಿಕ್
ಗಡಿ ವಿಚಾರದಲ್ಲಿ ಪೆಮಾ ಖಂಡು ಚೀನಾಗೆ ಈ ರೀತಿ ತಿರುಗೇಟು ನೀಡುತ್ತಿರುವುದು ಇದೇ ಮೊದಲಲ್ಲ. ಹಲವು ಭಾರಿ ಪೆಮಾ ಖಂಡು ಚೀನಾಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಜೂನ್ 24ರಂದು ಪೆಮಾ ಖಂಡು ಟ್ವೀಟ್ ಮೂಲಕ ಅರುಣಾಚಲ ಪ್ರದೇಶ ಹಾಗೂ ಟಿಬೆಟ್ ಗಡಿ ಅನ್ನೋದನ್ನು ಒತ್ತಿ ಹೇಳಿದ್ದರು. ಲಡಾಖ್ ಗಡಿ ಪ್ರಾಂತ್ಯದಲ್ಲಿ ಚೀನಾ ಅತಿಕ್ರಮಣ ಖಂಡಿಸಿ ಪೆಮಾ ಖಂಡು ಟ್ವೀಟ್ ಮಾಡಿದ್ದರು.
ಚೀನಾ ಅತಿಕ್ರಮಣಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ಅರುಣಾಚಲ- ಟಿಬೆಟ್ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆ ಜೋಶ್ ಹೆಚ್ಚಿದೆ. ಇಲ್ಲಿ ಯಾವುದೇ ಅಪ್ರಚೋದಿತ ದಾಳಿ ನಡೆಯಲ್ಲ ಎಂದು ಖಂಡು ಟ್ವೀಟ್ ಮಾಡಿದ್ದರು.
ಕೇಂದ್ರ ಸರ್ಕಾರ ಗಡಿ ಪ್ರದೇಶಗಳಿಗೆ ತೆರಳು ರಸ್ತೆ, ಸೇತುವೆ ಸೇರಿದಂತೆ ಹಲವು ಅಭಿವೃದ್ದಿ ಕಾಮಾಗಾರಿಗಳನ್ನು ಮಾಡುತ್ತಿದೆ. ಇವೆಲ್ಲವೂ ಭಾರತದ ನೆಲದಲ್ಲಿ ನಡೆಯುತ್ತಿದೆ. ಚೀನಾ ಸುಖಾಸುಮ್ಮೆ ಖ್ಯಾತೆ ತೆಗೆಯುತ್ತಿದೆ ಎಂದು ಖಂಡು ಹೇಳಿದ್ದಾರೆ.