ಲಡಾಖ್ ಬೆನ್ನಲ್ಲೇ ಅರುಣಾಚಲ ಪ್ರದೇಶ ನಮ್ಮದು ಎಂದು ಚೀನಾ; ಮತ್ತೆ ಶುರುವಾಯ್ತು ಕಿರಿಕ್!
ಲಡಾಖ್ ಪ್ರಾಂತ್ಯದ ಗಡಿ ಭಾಗಗಳಾದ ಗಲ್ವಾನ್, ಪ್ಯಾಂಗಾಂಗ್ ಸೇರಿದಂತೆ ಹಲವು ಭಾಗಗಳಲ್ಲಿ ಚೀನಾ ಪ್ರತಿ ದಿನ ಒಂದಲ್ಲ ಒಂದು ಖ್ಯಾತೆ ತೆಗೆಯುತ್ತಿದೆ. ಲಡಾಖ್ ಗಡಿ ಭಾಗದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಚೀನಾ ಇದೀಗ ಅರುಣಾಚಲ ಪ್ರದೇಶ ನಮ್ಮದು ಎಂದಿದೆ.
ಗವ್ಹಾಟಿ(ಸೆ.08): ಚೀನಾ ವಿರುದ್ಧ ಕಿಡಿ ಕಾರುತ್ತಿರುವ ಚೀನಾ ಪ್ರತಿ ದಿನ ಒಂದಲ್ಲ ಒಂದು ಸಮಸ್ಯೆ ತಂದಿಡುತ್ತಿದೆ. ಗಲ್ವಾಣ್ ಕಣಿವೆಯಲ್ಲಿ ಗಡಿ ರಕ್ಷಿಸಿಲು 20 ಭಾರತೀಯ ಯೋಧರು ತಮ್ಮ ಪ್ರಾಣ ತೆತ್ತಿದ್ದಾರೆ. ಈ ಘಟನೆ ಬಳಿಕ ಪರಿಸ್ಥಿತಿ ಉದ್ವಿಘ್ನಗೊಂಡಿದೆ. ಹಲವು ಬಾರಿ ಚೀನಾ ಗಡಿ ನಿಯಂತ್ರಣ ರೇಖೆಯ ಯಥಾ ಸ್ಥಿತಿ ನಿಯಮ ಉಲ್ಲಂಘಿಸಿ ಒಳನುಸುಳುವ ಯತ್ನ ಮಾಡಿದೆ. ಹಲವು ಸುತ್ತಿನ ಮಾತುಕತೆಗಳಿಗೆ ಚೀನಾ ಸೊಪ್ಪು ಹಾಕಿಲ್ಲ. ಲಡಾಖ್ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಚೀನಾ, ಇದೀಗ ಅರುಣಾಚಲ ಪ್ರದೇಶದಲ್ಲಿ ಖ್ಯಾತೆ ತೆಗೆದಿದೆ.
ಲಡಾಖ್ ಬಿಕ್ಕಟ್ಟಿಗೆ ನಾಡಿದ್ದು ಪರಿಹಾರ? ಚೀನಾದೊಂದಿಗೆ ಮಾತುಕತೆ.
ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್ಸಿರಿ ಜಿಲ್ಲೆ ನಾಕೋ ಗ್ರಾಮದ ಐವರು ಕಾಣೆಯಾಗಿದ್ದಾರೆ. ನಾಕೋ ಗ್ರಾಮದಿಂದ 12 ಕಿ.ಮೀ ದೂರದಲ್ಲಿ ಭಾರತ ಹಾಗೂ ಚೀನಾ ಗಡಿ ಪ್ರದೇಶವಿದೆ. ಗಡಿ ವಲಯದಿಂದ ಒಟ್ಟು 7 ಮಂದಿ ಕಾಣೆಯಾಗಿದ್ದರು. ಆದರೆ ಇಬ್ಬರು ಮನೆಗೆ ಮರಳಿದ್ದು, ಇನ್ನು ಐವರನ್ನು ಚೀನಾ ಸೇನೆ ಕಿಡ್ನಾಪ್ ಮಾಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಮಿಲಿಟರಿ ಮಾತುಕತೆ ನಡೆದಿದೆ. ಇಷ್ಟೇ ಭಾರತ ಕಾಣೆಯಾದ ಐವರ ಕುರಿತು ಚೀನಾ ಸೇನೆ ಬಳಿ ಮಾಹಿತಿ ಕೇಳಿದೆ.
ಮತ್ತೆ ಯುದ್ಧಭೀತಿ: ಗಡಿಗೆ ಸೇನಾ ಮುಖ್ಯಸ್ಥರು ದೌಡು..!.
ಭಾರತದ ಒತ್ತಡ ತೀವ್ರಗೊಳ್ಳುತ್ತಿದ್ದಂತೆ ಚೀನಾ ವರಸೆ ಬದಲಿಸಿದೆ. ನಮ್ಮ ಪ್ರಜೆಗಳನ್ನು ನಾವು ಕಿಡ್ನಾಪ್ ಮಾಡುವುದಿಲ್ಲ. ಐವರು ಕಾಣೆಯಾಗಿರು ಮಾಹಿತಿ ನಮಗಿಲ್ಲ. ನಮ್ಮ ಸೇನೆ ಯಾರನ್ನು ಕಿಡ್ನಾಪ್ ಮಾಡಿಲ್ಲ ಎಂದಿದೆ. ಆದರೆ ತನ್ನ ಉತ್ತರದಲ್ಲಿ ನಮ್ಮ ಪ್ರಜೆಗಳನ್ನು ಎಂದು ಹೇಳೋ ಮೂಲಕ ಅರುಣಾಚಲಲ ಪ್ರದೇಶ ನಮ್ಮದು ಎಂದಿದೆ.
ಚೀನಾ ನಡೆ ಕುರಿತು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ. ಇತ್ತ ಅರುಣಾಚಲ ಪ್ರದೇಶ ಸರ್ಕಾರ ಐವರು ಕಾಣೆಯಾಗಿರುವ ಕುರಿತು ತನಿಖೆಗೆ ಆದೇಶಿಸಿದೆ. ಗ್ರಾಮಸ್ಥರು ಚೀನಾ ಸೇನೆ ಗಡಿಯೊಳಕ್ಕೆ ಪ್ರವೇಶಿಸುವ ಯತ್ನ ಮಾಡುತ್ತಿದೆ ಜೊತೆಗೆ ಗ್ರಾಮಸ್ಥರನ್ನು ಬೆದರಿಸುತ್ತಿದೆ ಎಂದು ಆರೋಪಿಸಿದ್ದಾರೆ.