Asianet Suvarna News Asianet Suvarna News

ಕಿವುಡ-ಮೂಕ ಬಾಲಕನೊಂದಿಗೆ ಸೇನಾಧಿಕಾರಿ ಸ್ನೇಹ.. ಒಂದೊಳ್ಳೆ ಸ್ಟೋರಿ

*ಹದಿನಾರು ವರ್ಷದ ಬಾಲಕನೊಂದಿಗೆ ಸೇನಾಧಿಕಾರಿಗಳ ಸ್ನೇಹ
* ಮಾತು ಬಾರದ, ಕಿವಿ ಕೇಳದ ಬಾಲಕನಿಗೆ ಮೇಜರ್ ಆಶ್ರಯ
* ಶಿಕ್ಷಣದ ಜತೆಗೆ ಗೆಳೆಯನಿಗೆ ಚಿಕಿತ್ಸೆ ನೀಡಲು ನಿರ್ಧಾರ

Army Officer In Kashmir Adopts A Boy Who Can not Speak And Hear mah
Author
Bengaluru, First Published Jun 8, 2021, 11:48 PM IST

ಶ್ರೀನಗರ(ಜೂ.  08)  ಈ  ವರ್ಷದ ಮೇ ತಿಂಗಳಿನಲ್ಲಿ ಘೋರ ಘಟನೆಯೊಂದು ನಡೆದು ಹೋಗಿತ್ತು.ಹಂದ್ವಾರ ಬಳಿಯ ಚಾಂಜಿಮುಲಾ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭಾರತ ತನ್ನ ಭದ್ರತಾ ಪಡೆಯ ಐದು ಅಧಿಕಾರಿಗಳನ್ನು ಕಳೆದುಕೊಂಡಿತ್ತು.  ಕರ್ನಲ್ ಅಶುತೋಷ್ ಶರ್ಮಾ ಮತ್ತು ಮೇಜರ್ ಅನುಜ್ ಸೂದ್ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು.

ರಾಷ್ಟ್ರೀಯ ರೈಫಲ್ಸ್ ನ  ಮೇಜರ್ ಕಮಲೇಶ್ ಮಣಿ ಕರ್ತವ್ಯದ ನಿಮಿತ್ತ  ಅದೇ ಗ್ರಮಾದಲ್ಲಿ ಗಸ್ತು ತಿರುಗುತ್ತಿದ್ದರು. ರಸ್ತೆ ಮಧ್ಯದಲ್ಲಿ ಗವ್ಹೌರ್ ಮಿರ್ ಎಂಬ ಬಾಲಕ ಕಣ್ಣಿಗೆ ಬಿದ್ದಿದ್ದಾನೆ.  ಉಭಯಕುಶಲೋಪರಿ ವಿಚಾರಿಸಿಕೊಳ್ಳಲೆಂದು ಮೇಜರ್ ಬಾಲಕನನ್ನು ಮಾತನಾಡಿಸಿದ್ದಾರೆ. ಆದರೆ ಆತನಿಗೆ ಮಾತು ಬರುವುದಿಲ್ಲ, ಕಿವಿಯೂ ಕೇಳುವುದಿಲ್ಲ ಎಂಬ ಸಂಗತಿ ಗೊತ್ತಾಗಿದೆ.

ಮರೆಯಾದ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ

ನನಗೆ ಬಾಲಕನ ವಿಚಾರ ಗೊತ್ತಾಯಿತು. ನಾನು ಆತನ ಮನದ ಭಾವನೆ ಅರ್ಥ ಮಾಡಿಕೊಳ್ಳಲು ಅಲ್ಲೇ ಒಂದಿಷ್ಟು ಸಮಯ ಕಳೆದೆ.  ಆತನ ಕಣ್ಣುಗಳು ನನ್ನನ್ನು ಸೆಳೆದಿದ್ದವು. ಆತನಿಗೆ ಚಾಕೋಲೇಟ್ ಗಳನ್ನು ನೀಡಿದೆ. ನಮ್ಮ ಕ್ಯಾಂಪ್ ಗೆ ಬಾ ಎಂದು ಕೇಳಿದ್ದಕ್ಕೆ ಆತ ಒಪ್ಪಿಕೊಂಡ ಎಂದು ಮೇಜರ್ ಅಂದಿನ ಘಟನಾವಳಿಗಳನ್ನು ತಿಳಿಸುತ್ತಾರೆ.

ಇದಾದ ಮೇಲೆ ಬಾಲಕ ಆರ್ಮಿ ಕ್ಯಾಂಪ್ ಗೆ ಬಂದ. ಸಾಮಾನ್ಯವಾಗಿ ಜಮ್ಮು ಮತ್ತು ಕಾಶ್ಮಿರದ ಬಾಲಕರು ಆರ್ಮಿ ಕ್ಯಾಂಪ್ ಗೆ ಬರುವುದು ವಿರಳ.  ಆದರೆ ಆತ ಬಂದಿದ್ದ. ಬಾಲಕ ಬಂದ ದಿನ ನಾನು ಅಲ್ಲಿ ಇರಲಿಲ್ಲ.

ನನ್ನ ಸ್ನೇಹಿತರು ಆತನಿಗೆ ತಿಂಡಿ ಕೊಡಲು ಮುಂದಾದಾಗ ಅದನ್ನು ನಿರಾಕರಿಸಿದ. ನಾನು ಬರುವವರೆಗೆ ಕಾಯುತ್ತೇನೆ ಎಂದು ಹೇಳಿದ. ಕೆಲವರು ಆತನಿಗೆ ಹಣ ಕೊಡಲು ಮುಂದಾದಾಗ ಅದನ್ನು ನಿರಾಕರಿಸಿ ನನ್ನ ಭೇಟಿಗೆ ಬಂದಿರುವೆ ಎಂಬುದನ್ನು ಸ್ಪಷ್ಟಪಡಿಸಿದ ಎಂದು ಕ್ಯಾಂಪ್ ಗೆ ಬಂದ ದಿನವನ್ನು ವಿವರಿಸುತ್ತಾರೆ. 

ಮೇಜರ್ ಮಣಿ ಕ್ಯಾಂಪ್ ಗೆ ಬರುತ್ತಿದ್ದಂತೆ ಓಡಿ ಬಂದ ಬಾಲಕ ಅವರಿಗೆ ಗೌರವ ಸೂಚಿಸಿದ್ದ.  ತಾನು ತಂದಿದ್ದ ಸೇಬಿನ ಹಣ್ಣುಗಳನ್ನು ಮಣಿ ಮತ್ತು ಇತರ ಆಫೀಸರ್ ಗಳಿಗೆ ನೀಡಿದ್ದ.  ಆತನಿಗೆ ಬದಲಾಗಿ ಚಾಕೋಲೇಟ್ ಗಳು ಸಿಕ್ಕಿದ್ದವು. ಅಲ್ಲೊಂದು ಹೆಸರಿಗೆ ನಿಲುಕದ ಬಾಂಧವ್ಯ ಸೃಷ್ಟಿಯಾಗಿತ್ತು.

ಮಾಲೀಕ ಹುಡುಕುತ್ತ ಶ್ವಾನದ ದೂರ ಪ್ರಯಾಣ

ಇದೀಗ ಮೇಜರ್ ಮಣಿ ಆತನ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆತನ ಶಿಕ್ಷಣದ ವೆಚ್ಚ ಭರಿಸುತ್ತೇನೆ ಎಂದು ತಿಳಿಸಿದ್ದಾರೆ. ಆತನಿಗೊಂದು ಸ್ಮಾರ್ಟ್ ಫೋನ್ ತೆಗೆಸಿಕೊಟ್ಟಿದ್ದು ಸೆಲ್ಫಿ ಸಂಭ್ರಮಕ್ಕೆ ಕೊನೆಯೇ ಇಲ್ಲ.

ಆತನ ಕುಟುಂಬ ಭೇಟಿ ಮಾಡಿದ ಮೇಜರ್ ಮಣಿ ಅವರಿಗೆ ಮತ್ತಷ್ಟು ಸಂಗತಿ ಗೊತ್ತಾಗಿದೆ. ಕುಟುಂಬದ 9 ಜನರಲ್ಲಿ ಐವರಿಗೆ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುವ ವಿಚಾರ ಆಘಾತ ತಂದಿದೆ. 

ಆತನ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುತ್ತೇವೆ ಎಂದಾಗ ಬಾಲಕನ ತಂದೆ ಒಪ್ಪಿಕೊಳ್ಳಲು ಮುಂದೆ ಬರಲಿಲ್ಲ. ಆದರೆ ಆತನ ಅಜ್ಜಿ ಸೈನಿಕರ ಮೇಲೆ ನಂಬಿಕೆಯಿಟ್ಟರು.  ಎಲ್ಲಿಗೆ ಹೋಗುತ್ತಿಯೋ ನಹೋಗು, ಆದರೆ ದೊಡ್ಡ ವ್ಯಕ್ತಿಯಾಗಿ ಮನೆಗೆ ಬಾ ಎಂದು ಹಾರೈಸಿದರು. 

ಬಾಲಕನ ಬಾಳಲ್ಲಿ ಹಲವು ಬದಲಾವಣೆಗಳಾಗಿವೆ.  ಹಂದ್ವಾರದಲ್ಲಿDEIC (District Early Intervention Center) ಶಿಕ್ಷಣ ಪಡೆದುಕೊಳ್ಳುತ್ತಿದ್ದಾನೆ. ತಜ್ಞ ವೈದ್ಯರು ಆತನ ಸಮಸ್ಯೆ ಬಗೆಹರಿಸುವ ಯತ್ನದಲ್ಲಿ ಇದ್ದಾರೆ.  ದೆಹಲಿ, ಚೆನ್ನೈ ಅಥವಾ ಬೆಂಗಳೂರಿನಲ್ಲಿ ಹದಿನಾರು ವರ್ಷದ ಗೆಳೆಯನಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಪಣವನ್ನು ಮಣಿ ತೊಟ್ಟಿದ್ದಾರೆ.

 

 

Follow Us:
Download App:
  • android
  • ios