ಪ್ರಕಾಶ್‌ರಾಜ್ ಅಪ್ಪ-ಅಮ್ಮನಿಗೆ ಹುಟ್ಟಿದ್ದಾನೆ ಎನ್ನುವುದಕ್ಕೆ ಗ್ಯಾರಂಟಿ ಏನಿದೆ? ಕೆ.ಎಸ್. ಈಶ್ವರಪ್ಪ ವಾಗ್ದಾಳಿ
ನಟ ಪ್ರಕಾಶ್‌ರಾಜ್ ತಮ್ಮ ತಂದೆ ತಾಯಿಗೇ ಹುಟ್ಟಿದ್ದಾರೆ ಎನ್ನುವುದಕ್ಕೆ ಗ್ಯಾರಂಟಿ ಏನಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ವಿಜಯಪುರ (ಸೆ.07): ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವುದಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ನಾನು ಹಿಂದೂ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪ-ಾಮ್ಮನಿಗೆ ಹುಟ್ಟಿದ್ದೇನೆ ಎಂದು ಹೇಳಿಕೆ ನೀಡಿದ್ದ ನಟ ಪ್ರಕಾಶ್‌ರಾಜ್ ಹೇಳಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು, ಪ್ರಕಾಶ್‌ರಾಜ್ ಅಪ್ಪ-ಅಮ್ಮನಿಗೆ ಹುಟ್ಟಿದ್ದಾರೆ ಎನ್ನುವುದಕ್ಕೆ ಗ್ಯಾರಂಟಿ ಏನು ಎಂದು ತಿರುಗೇಟು ನೀಡಿದ್ದಾರೆ.
ಹೌದು ಈ ಮೂಲಕ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ನಟ ಪ್ರಕಾಶ ರಾಜ್ ಹುಟ್ಟಿನ ಬಗ್ಗೆ ಪ್ರಶ್ನಿಸಿದ್ದಾರೆ. ಪ್ರಕಾಶ್ ರಾಜ್ ಒಬ್ಬ ಅಯೋಗ್ಯನಾಗಿದ್ದಾನೆ. ಪ್ರಕಾಶ್ ರಾಜ್ ಅಪ್ಪ-ಅಮ್ಮನಿಗೆ ಹುಟ್ಟಿದ್ದಾನಾ ಅನ್ನೋದಕ್ಕೆ ಗ್ಯಾರಂಟಿ ಏನು? ಯಾರಿಗೆ ಹುಟ್ಟಿದ್ದಾನೆ ಎಂದು ತಾಯಿನಾ ಕೇಳಿದ್ದಾನಾ? ತಾಯಿ ಹೇಳಿದಾಗಲೇ ಅಪ್ಪ ಯಾರು ಅಂತ ಗೊತ್ತಾಗಿದೆ ಅಲ್ವಾ? ಪ್ರಕಾಶ್ ರಾಜ್ ತಾಯಿಯ ಬಗ್ಗೆ ನನಗೆ ಗೌರವ ಇದೆ. ತಾಕತ್ತು ಇದ್ದರೆ ಮುಸಲ್ಮಾನರ ಹುಟ್ಟಿನ ಬಗ್ಗೆ ಪ್ರಶ್ನಿಸಲಿ. ಮುಸ್ಲಿಂರು ಎಲ್ಲಿ ಹುಟ್ಟಿದ್ರು, ಎಲ್ಲಿಂದ ಬಂದ್ರು ಪ್ರಶ್ನಿಸಲಿ ಎಂದು ಕಿಡಿಕಾರಿದರು.
Sanatan Dharma: ಉದಯನಿಧಿ ಮಾತ್ರವಲ್ಲ, ಅವರಪ್ಪ ಬಂದ್ರೂ ಆಗಲ್ಲ: ಅವರಜ್ಜನ ಕೈಯಲ್ಲೂ ಆಗಿಲ್ಲವೆಂದ ಈಶ್ವರಪ್ಪ
ಉದಯನಿಧಿ ಸ್ಟಾಲಿನ್ ಒಬ್ಬ ಹುಚ್ಚ:
ಇನ್ನು ಉದಯನಿಧಿ ಸ್ಟ್ಯಾಲಿನ್ ಒಬ್ಬ ಅಯೋಗ್ಯ, ಹುಚ್ಚ. ಉದಯನಿಧಿಗೂ ಸನಾತನ ಧರ್ಮಕ್ಕು ಏನ್ ಸಂಬಂಧ..? ಈ ಬಗ್ಗೆ ಮಾತನಾಡಲಿಕ್ಕೆ ಸ್ಟ್ಯಾಲಿನ್ ಯಾರು? ಸಾಧು-ಸಂತರ ತಪಸ್ಸಿನಿಂದ ಸನಾತನ ಧರ್ಮವಾಗಿದೆ. ಧರ್ಮವನ್ನ ಮುಟ್ಟಿದವನು ಯಾವನೂ ಉದ್ಧಾರ ಆಗಲ್ಲ. ಸನಾತನ ಧರ್ಮದ ನಾಶ ಅವರಪ್ಪ, ಅಜ್ಜನಿಂದಲು ಆಗಿಲ್ಲ, ಆಗೋದು ಇಲ್ಲ. ಧರ್ಮ ವಿರುದ್ಧ ರಾಕ್ಷಸಿ ಪ್ರವೃತ್ತಿ ತೋರಿಸಿದ್ದಾರೊ ಅವರು ನಾಶವಾಗಿ ಹೋಗ್ತಾರೆ. ಪ್ರಚಾರಕ್ಕಾಗಿಯೇ ಸ್ಟ್ಯಾಲಿನ್ ಈ ತರಹದ ಹೇಳಿಕೆ ನೀಡಿದಂತಿದೆ. "ಧರ್ಮದ ವಿರುದ್ಧ ಮಾತನಾಡುವವರು ಸುಟ್ಟು ಭಸ್ಮವಾಗ್ತಾರೆ" ಸ್ಟ್ಯಾಲಿನ್ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಭಾರತ ಮಾತಾಕಿ ಜೈ ಅಂತೇವೆ, ಆದ್ರೆ ಇಂಡಿಯಾ ಮಾತಾಕಿ ಜೈ ಎನ್ನೊಲ್ಲ: ಕೆ.ಎಸ್. ಈಶ್ವರಪ್ಪ ಆಕ್ರೋಶ
ಪರಮೇಶ್ವರ್‌ಗೆ ಮುತ್ತಜ್ಜನ ಹೆಸರೇ ಗೊತ್ತಿಲ್ಲ, ಹಿಂದೂ ಧರ್ಮದ ಬಗ್ಗೆ ಮಾತಾಡ್ತಾರಾ?: ಹಿಂದೂ ಧರ್ಮವನ್ನು ಯಾರು ಹುಟ್ಟಿಸಿದವರು ಎಂದು ಹೇಳಿದ್ದ ಗೃಹ ಸಚಿವ ಜಿ. ಪರಮೇಶ್ವರ ವಿರುದ್ಧವೂ ಈಶ್ವರಪ್ಪ ವಾಗ್ದಾಳಿ ಮಾಡಿದ್ದಾರೆ. ಹಿಂದೂ ಧರ್ಮದ ಬಗ್ಗೆ ಮಾತನಾಡೋರು, ಬೇರೆ ಧರ್ಮದ ಬಗ್ಗೆ ಮಾತಾಡ್ತಾರಾ? ಪರಮೇಶ್ವರಗೆ ಮುತ್ತಜ್ಜನ ಹೆಸರೇ ಗೊತ್ತಿಲ್ಲ. ನಾನು ಪರಮೇಶ್ವರ ತಂದೆ ಹೆಸರು, ಅಜ್ಜನ ಹೆಸರಿನ ಬಗ್ಗೆ ವಿಚಾರಿಸಿದೆ. ತಂದೆ ಹೆಸರು ಜಿ ಎಂದರೇ ಗಂಗಾಧರಯ್ಯ. ಪರಮೇಶ್ವರ ಅವರಿಗೆ ಮುತ್ತಜ್ಜನ ಹೆಸರೆ ಗೊತ್ತಿಲ್ಲ, ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಅದ್ ಹೇಗೆ ಕೇಳ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.