ಗೋದಾವರಿ ನದಿಯಲ್ಲಿ ಹಾರುತ್ತಿದ್ದವನ ಸಿನಿಮೀಯ ರೀತಿ ರಕ್ಷಿಸಿದ ಪತ್ರಕರ್ತರು: ಶಾಕಿಂಗ್​ ವಿಡಿಯೋ ವೈರಲ್​

ಗೋದಾವರಿ ನದಿಯಲ್ಲಿ ಹಾರಿ ಪ್ರಾಣ ಕಳೆದುಕೊಳ್ಳಲು ಹೋಗುತ್ತಿದ್ದವನ  ಸಿನಿಮೀಯ ರೀತಿ ರಕ್ಷಿಸಿದ್ದಾರೆ ಪತ್ರಕರ್ತರು. ಶಾಕಿಂಗ್​ ವಿಡಿಯೋ ವೈರಲ್​ ಆಗಿದೆ. 
 

AP Man Attempts to Jump Into Godavari River Dramatically Rescued By Journalist Friends suc

ಜೀವನದಲ್ಲಿ ಚಿಕ್ಕಪುಟ್ಟ ಸಮಸ್ಯೆ ಬಂದರೂ ಅದಕ್ಕೆ ಆತ್ಮಹತ್ಯೆಯೇ ಪರಿಹಾರ ಎನ್ನುವ ರೀತಿಯಲ್ಲಿ ವರ್ತಿಸುವವರ ಸಂಖ್ಯೆ ಏರುತ್ತಲೇ ಇದೆ.  ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕಳೆದ ತಿಂಗಳಷ್ಟೇ ಸಿನಿಮೀಯ ರೀತಿಯಲ್ಲಿ  ಮುಂಬೈನ ಮುಲುಂಡ್‌ನ ರೀಮಾ ಮುಖೇಶ್ ಪಟೇಲ್ ಎಂಬ  56 ವರ್ಷದ ಮಹಿಳೆಯನ್ನು ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್, ಅಟಲ್ ಸೇತುನಲ್ಲಿ ಆತ್ಮಹತ್ಯೆ ಪ್ರಯತ್ನದಿಂದ  ರಕ್ಷಣೆ ಮಾಡಲಾಗಿತ್ತು. ಕ್ಯಾಬ್‌ ಡ್ರೈವರ್‌ ಹಾಗೂ ಪೊಲೀಸ್‌ ಅಧಿಕಾರಿಗಳ ಧೈರ್ಯದ ಕಾರಣದಿಂದ ಆಕೆಯ ಜೀವ ಉಳಿದಿತ್ತು.  ಅಟಲ್‌ ಸೇತುವಿನ ಸೇಫ್ಟಿ ಬ್ಯಾರಿಯರ್‌ ಮೇಲೆ ಕುಳಿತುಕೊಂಡಿದ್ದ ಮಹಿಳೆ ಇನ್ನೇನು   ಹಾರಿ ಪ್ರಾಣ ಕಳೆದುಕೊಳ್ಳಬೇಕು ಎನ್ನುವ ಹಂತದಲ್ಲಿ ಸಮಯಪ್ರಜ್ಞೆ ಮೆರೆದ ಕ್ಯಾಬ್‌ ಡ್ರೈವರ್‌ ಆಕೆಯ ಜುಟ್ಟನ್ನು ಹಿಡಿದುಕೊಂಡಿದ್ದು ರಕ್ಷಿಸಿದ್ದ.
 
ಅದೇ ರೀತಿ ಸಿನಿಮೀಯವಾಗಿಯೇ ಈಗ ಯುವಕನೊಬ್ಬನ ಪ್ರಾಣವನ್ನು ಇಬ್ಬರು ಪತ್ರಕರ್ತರು ರಕ್ಷಿಸಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಭದ್ರಾಚಲಂನಲ್ಲಿ  ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ವ್ಯಕ್ತಿಯ ಜೀವವನ್ನು ಪತ್ರಕರ್ತರು ಕಾಪಾಡಿದ್ದಾರೆ. ಯುವಕನ ಆತ್ಮಹತ್ಯೆ ಪ್ರಯತ್ನಕ್ಕೆ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ.  ಆದರೆ ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಪತ್ರಕರ್ತರ ಈ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ.

ಕುಡಿದು ಡ್ರೈವ್​ ಮಾಡ್ತಿದ್ರೆ ಇನ್ಮುಂದೆ ಸಿಕ್ಕಾಕ್ಕೊಳೋದು ಪಕ್ಕಾ! ಪೊಲೀಸರಿಂದ 'ಚಾಕ್​ ಪೀಸ್​' ಟ್ರಿಕ್ಸ್​...

ಅಂದಹಾಗೆ, ವ್ಯಕ್ತಿಯ ಪ್ರಾಣ ಕಾಪಾಡಿದವರು,  ಪತ್ರಕರ್ತರಾದ ಮೊಹಮ್ಮದ್ ಅಬ್ದುಲ್ ಘನಿ ಮತ್ತು ಶೇಖ್ ಜಾಕೀರ್ ಎನ್ನಲಾಗಿದೆ. ಈ ಇಬ್ಬರು ಸೇತುವೆಯ ಮೇಲೆ ಬೈಕ್​ನಲ್ಲಿ ಪ್ರಯಾಣಿಸುವಾಗ ಸೇತುವೆಯ ಕಟ್ಟೆಯ ಮೇಲೆ ವ್ಯಕ್ತಿಯೊಬ್ಬ ಕುಳಿತಿರುವುದನ್ನು ಗಮನಿಸಿದ್ದಾರೆ. ಆತ ಆತ್ಮಹತ್ಯೆಗೆ ಯತ್ನಿಸುತ್ತಿರಬಹುದು ಎನ್ನುವ ಸಂದೇಹ ಉಂಟಾಗಿದೆ. ಇದೇ ಕಾರಣಕ್ಕೆ ತಕ್ಷಣ ಬೈಕ್ ನಿಲ್ಲಿಸಿ ಆತನನ್ನು ಮಾತನಾಡಿಸಿದ್ದಾರೆ.  ಮಾತನಾಡುತ್ತಿದ್ದಂತೆಯೇ ಆ ವ್ಯಕ್ತಿ  ಕೆಳಗೆ ಹಾರಲು ಪ್ರಯತ್ನಿಸಿದ್ದಾನೆ. ನಂತರ ಇಬ್ಬರೂ ಹೋಗಿ ಆತನನ್ನು ಗಟ್ಟಿಯಾಗಿ ಹಿಡಿದುಕೊಂಡು ಕೆಳಕ್ಕೆ ಬೀಳದಂತೆ ರಕ್ಷಿಸಿದ್ದಾರೆ. 

ಇದರ ವಿಡಿಯೋ ವೈರಲ್​ ಆಗಿದೆ. ಈ ವೈರಲ್​ ವಿಡಿಯೋದಲ್ಲಿ ಪತ್ರಕರ್ತರು ಆ ವ್ಯಕ್ತಿಯ ಜೊತೆ ಮಾತನಾಡುವುದನ್ನು ನೋಡಬಹುದು. ಆ ಸಮಯದಲ್ಲಿ ಅವರು ವಿಡಿಯೋ ಮಾಡುತ್ತಿದ್ದರು. ಆದರೆ ಆ ವ್ಯಕ್ತಿ ಹಾರಲು ಪ್ರಯತ್ನಿಸಿದ್ದು ಹಾಗೂ ರಕ್ಷಣೆ ಮಾಡುತ್ತಿರುವುದು ವಿಡಿಯೋದಲ್ಲಿ ಸರಿಯಾಗಿ ಕಾಣಿಸುವುದಿಲ್ಲ. ಏಕೆಂದರೆ ಪತ್ರಕರ್ತರು ಕೈಯಲ್ಲಿ ಮೊಬೈಲ್​ ಹಿಡಿದುಕೊಂಡು ವ್ಯಕ್ತಿಯ ರಕ್ಷಣೆ ಹೋಗಿದ್ದರಿಂದ ವಿಡಿಯೋ ಎಲ್ಲೆಲ್ಲೋ ಹೋಗಿದೆ. ಆದರೆ ರಕ್ಷಣೆ ಮಾಡಿರುವುದು ಮಾತ್ರ ತಿಳಿದು ಬರುತ್ತಿದೆ. ಪತ್ರಕರ್ತರ ಈ ಕಾರ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಆ ವ್ಯಕ್ತಿ ಮುಂದೆ ಇಂಥ ಕೃತ್ಯಕ್ಕೆ ಪುನಃ ಕೈ ಹಾಕದಂತೆ ಕೌನ್ಸೆಲಿಂಗ್​ ಮಾಡುವ ಅಗತ್ಯವಿದೆ ಎಂದು ನೆಟ್ಟಿಗರು ಅಭಿಪ್ರಾಯ ಪಡುತ್ತಿದ್ದಾರೆ. 

ನನ್ನ ಅಕ್ಕನಿಗೆ ಬೆಂಕಿ ಹಚ್ಚಿ ಕೊಲ್ಲಲು ನೋಡಿದ್ರು: ಜಯಪ್ರದಾ ಕುಟುಂಬದ ಶಾಕಿಂಗ್ ವಿಷ್ಯ ಬಿಚ್ಚಿಟ್ಟ ನಟಿ ವಿಜಯಲಕ್ಷ್ಮಿ

Latest Videos
Follow Us:
Download App:
  • android
  • ios