ಕುಡಿದು ಡ್ರೈವ್​ ಮಾಡ್ತಿದ್ರೆ ಇನ್ಮುಂದೆ ಸಿಕ್ಕಾಕ್ಕೊಳೋದು ಪಕ್ಕಾ! ಪೊಲೀಸರಿಂದ 'ಚಾಕ್​ ಪೀಸ್​' ಟ್ರಿಕ್ಸ್​...

ಕುಡಿದು ಡ್ರೈವ್​ ಮಾಡ್ತಿದ್ರೆ ಸಿಕ್ಕಿಹಾಕಿಕೊಳ್ಳದಂತೆ ಪ್ಲ್ಯಾನ್​ ಮಾಡ್ತಿದ್ರಾ? ಇನ್ಮುಂದೆ ಅದೆಲ್ಲಾ ನಡೆಯಲ್ಲ.  ಪೊಲೀಸರಿಂದ 'ಚಾಕ್​ ಪೀಸ್​' ಟ್ರಿಕ್ಸ್ ಶುರುವಾಗಿದೆ. ಏನಿದು ಟೆಸ್ಟ್​? 
 

Madhya Pradesh Ratlam Police introduces chalk line test to combat drunk and drive suc

ಕುಡಿದು ಡ್ರೈವ್​ ಮಾಡ್ತಿರೋದನ್ನು ಕಂಡು ಹಿಡಿಯಲು ಇದಾಗಲೇ ಪೊಲೀಸರು ಕೆಲವು ರೀತಿಯ ಪ್ರಯೋಗ ಮಾಡುತ್ತಾರೆ. ಅದರಲ್ಲಿಯೂ ಸದ್ಯ ಚಾಲ್ತಿಯಲ್ಲಿ ಇರುವುದು ಉಸಿರಿನ ಟೆಸ್ಟ್. ಮೀಟರ್​ ಮೂಲಕ ಪರಿಶೀಲಿಸಿದಾಗ ನೀವು ಯಾವ ಮಟ್ಟದಲ್ಲಿ ಕುಡಿದಿದ್ದೀರಿ ಎನ್ನುವುದು ತಿಳಿದುಬರುತ್ತದೆ. ಲಿಮಿಟ್​ ಮೀರಿದ್ರೆ ದಂಡ ಬೀಳುತ್ತೆ. ಡ್ರಂಕ್​ ಆ್ಯಂಡ್​​ ಡ್ರೈವ್​ ಮಾಡುವುದು ಕಾನೂನಿನ ಪ್ರಕಾರ ಅಪರಾಧ ಎಂದರೂ ತಲೆ ಕೆಡಿಸಿಕೊಳ್ಳದವರು ಸಿಕ್ಕಾಪಟ್ಟೆ ಜನ ಇದ್ದಾರೆ. ಯಾರದ್ದೋ ತಪ್ಪಿಗೆ ಅಪಘಾತ ಸಂಭವಿಸಿ ಇನ್ಯಾರೋ ಸಾಯುವುದು ಇದೆ. ಕುಡಿದು ಚಾಲನೆ ಮಾಡಿ ಬೇರೆಯವರ ಪ್ರಾಣಕ್ಕೆ ಕುತ್ತು ತರುವ ಘಟನೆಗಳು ಅದೆಷ್ಟೋ ನಡೆಯುತ್ತಲೇ ಇರುತ್ತವೆ. ಆದರೂ ಕುಡುಕರ ಕಾಟವಂತೂ ತಪ್ಪಿಲ್ಲ. ಇನ್ನು ಶ್ರೀಮಂತರೋ ಒಂದಿಷ್ಟು ಹಣ ಕೊಟ್ಟು ಪೊಲೀಸರಿಂದ ಬಚಾವಾಗುವ ಕಾರಣ, ಡ್ರಂಕ್​ ಆ್ಯಂಡ್ ಡ್ರೈವ್​ ಎನ್ನುವುದು ಅಮಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಇದೀಗ ವಿನೂತನ ಮಾದರಿಯೊಂದನ್ನು ಪೊಲೀಸ್​ ಇಲಾಖೆ ಕಂಡು ಹಿಡಿದಿದೆ. ಅದೇ ಸುಣ್ಣದ ಗೆರೆ. ಇದೊಂದು ರೀತಿಯಲ್ಲಿ ಜಿರಳೆಗಳು ಬರದಂತೆ ಲಕ್ಷ್ಮಣ ರೇಖೆ ಎಳೆಯುತ್ತಾರಲ್ಲ, ಇದೂ ಹಾಗೆಯೇ, ಕುಡುಕುರನ್ನು ಸುಲಭದಲ್ಲಿ ಪತ್ತೆ ಹಚ್ಚುವ ಲೈನ್​ ಇದು. ಈ ಲೈನ್​ ಅನ್ನು ದಾಟುವಲ್ಲಿ ಯಶಸ್ವಿಯಾದ್ರೆ ನೀವು ಬಚಾವ್​, ಇಲ್ಲದಿದ್ದರೆ ದಂಡ ಕಟ್ಟಬೇಕು. ಅಷ್ಟಕ್ಕೂ ಇದೇನು ಹೊಸ ನಿಯಮ ಎಂದು ನೋಡುವುದಾದ್ರೆ, ವಾಹನ ತಪಾಸಣೆ ವೇಳೆ ಪೊಲೀಸರು ಸಂದೇಹ ಬರುವ ವಾಹನ ಚಾಲಕರನ್ನು ರಸ್ತೆಯ ಮೇಲೆ ಹಾಕಿರುವ ಚಾಕ್‌ ಲೈನ್‌ ಅಥವಾ ಸುಣ್ಣದ ಗೆರೆಯಲ್ಲಿ ನಡೆಸುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಕುಡುಕರು ಸೀದಾ ನಡೆಯಲು ಸಾಧ್ಯ ಇಲ್ಲ. ಆದ್ದರಿಂದ,  ಒಂದು ವೇಳೆ ಗೆರೆಯ ಮೇಲೆ ನಡೆಯುವಾಗ ಯಾರಾದರೂ ಎಡವಿದರೆ ಅವರು ಕುಡಿದು ಬಂದಿದ್ದಾರೆ ಎನ್ನುವುದು ತಿಳಿಯುತ್ತದೆ. ಹೀಗೆ ಡೌಟ್​ ಬಂದ್ರೆ, ಅಂಥ ಚಾಲಕರನ್ನು ಸೂಕ್ತ ವೈದ್ಯಕೀಯ ಪರೀಕ್ಷೆ ನಡೆಸಿ ಕುಡಿದ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

ನನ್ನ ಅಕ್ಕನಿಗೆ ಬೆಂಕಿ ಹಚ್ಚಿ ಕೊಲ್ಲಲು ನೋಡಿದ್ರು: ಜಯಪ್ರದಾ ಕುಟುಂಬದ ಶಾಕಿಂಗ್ ವಿಷ್ಯ ಬಿಚ್ಚಿಟ್ಟ ನಟಿ ವಿಜಯಲಕ್ಷ್ಮಿ
 
ಸದ್ಯ ಇದು ಮಧ್ಯಪ್ರದೇಶದಲ್ಲಿ ಜಾರಿ ಮಾಡಲಾಗಿದೆ. ಅಲ್ಲಿ ಸಕ್ಸಸ್​ ಆದ್ರೆ ಎಲ್ಲೆಡೆ ಬರುವಲ್ಲಿ ಡೌಟೇ ಇಲ್ಲ. ಪ್ರತಿವರ್ಷವೂ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕುಡಿದು ವಾಹನ ಚಲಾಯಿಸುವಂತಿಲ್ಲ ಎಂಬ ಕಾನೂನು ತರಲಾಗಿದ್ದರೂ ಅದನ್ನು ಪಾಲಿಸುತ್ತಿಲ್ಲ. ಕೆಲವೊಮ್ಮೆ ಮೀಟರ್​ಗಳಿಂದಲೂ ಬಚಾವಾಗಲು ತಂತ್ರ ಹುಡುಕುತ್ತಾರೆ. ಆದ್ದರಿಂದ ನಡೆದು ತೋರಿಸುವುದು ಸುಲಭದ ಮಾರ್ಗ ಎಂದು ಮಧ್ಯಪ್ರದೇಶದ ಪೊಲೀಸ್​ ಅಧಿಕಾರಿ ಹೇಳಿದ್ದಾರೆ.  ಬ್ರೀತ್‌ ಅನಲೈಸರ್‌ ಮೂಲಕ ಪರೀಕ್ಷಿಸಿ ಕುಡಿದು ವಾಹನ ಚಲಾಯಿಸುವವರಿಗೆ ದಂಡ ಹಾಕುವಂತಹ ಕೆಲಸ ಮಾಡುತ್ತಿದ್ದೇವೆ. ಆದ್ರೆ ಇದರಿಂದಲೂ ಬಚಾವಾಗುತ್ತಿರುವ ಹಿನ್ನೆಲೆಯಲ್ಲಿ ಸುಣ್ಣದ ಗೆರೆ ಪ್ರಯೋಗ ಮಾಡಲಾಗುತ್ತಿದೆ ಎಂದಿದ್ದಾರೆ.

ಇದರ ವಿಡಿಯೋ  ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಒಬ್ಬ ವ್ಯಕ್ತಿ ಈ ಸರಳ ರೇಖೆಯಲ್ಲಿ ನೇರವಾಗಿ ನಡೆಯಲು ಸಾಧ್ಯವಾದರೆ, ಅವನು ವಾಹನವನ್ನು ಸಹ ಸರಿಯಾಗಿ ಓಡಿಸಬಹುದು ಒಂದು ವೇಳೆ ಸರಿಯಾಗಿ ನಡೆಯಲು ಸಾಧ್ಯವಾಗದಿದ್ದರೆ, ಅವನು ತುಂಬಾ ಕುಡಿದಿದ್ದಾನೆ ಮತ್ತು ವಾಹನವು ಸರಿಯಾಗಿ ಓಡಿಸುವ ಸ್ಥಿತಿಯಲ್ಲಿಲ್ಲ ಎಂದು ಅರ್ಥ. ಅಂತಹವರನ್ನು ತಡೆದು ಪೋಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಕುಡಿತದಲ್ಲಿ ನಿಸ್ಸೀಮರಾಗಿದ್ದು ಸೀದಾ ಸಾದಾ ನಡೆಯುವರಲ್ಲಿ ಎಕ್ಸ್​ಪರ್ಟ್​ ಆಗಿದ್ರೆ ಏನು ಮಾಡುವುದು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ತಮಾಷೆಯಾಗಿ ತೆಗೆದುಕೊಂಡಿದ್ದು, ಕುಡಿದು ನೇರವಾಗಿ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ ಎನ್ನುತ್ತಿದ್ದಾರೆ. 

ನೀವ್​ ಬೇಡ, ಅವ್ಳೇ ಬೇಕು ಅಂತ ಹೊರಟೇ ಹೋದ, ಈಗ ನೋಡಿ... 'ಮುಖ್ಯಮಂತ್ರಿ' ಚಂದ್ರು ಪತ್ನಿ ಮನದ ಮಾತು...
 

Latest Videos
Follow Us:
Download App:
  • android
  • ios