Asianet Suvarna News Asianet Suvarna News

ಸಂವಿಧಾನ ರೂಪಗೊಂಡ ಇ-ಫೋಟೋ , ಚಿತ್ರಾಂಜಲಿ@75 ಪ್ರದರ್ಶನಕ್ಕೆ ಅನುರಾಗ್ ಚಾಲನೆ!

  • ಸಂವಿಧಾನ ರೂಪಗೊಂಡ ಬಗೆ" ಇ-ಫೋಟೋ ಪ್ರದರ್ಶನ 
  • ಸರ್ಕಾರದಿಂದ ಸಂವಿಧಾನವನ್ನು ತಿಳಿಯಿರಿ' ಅಭಿಯಾನ
  • ಚಿತ್ರಾಂಜಲಿ@75 ಕಾರ್ಯಕ್ರಮದ ಮೂಲಕ ವರ್ಚುಯಲ್‌ ಸಿನಿಮಾ ಪೋಸ್ಟರ್‌ ಪ್ರದರ್ಶನ
     
Anurag Thakur launches Making of Constitution e Photo Exhibition and Virtual Film Poster Exhibition ckm
Author
Bengaluru, First Published Aug 28, 2021, 5:46 PM IST

ನವದೆಹಲಿ(ಆ.28): ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ಚಿತ್ರಾಂಜಲಿ@75 ವಿಶೇಷ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಚಾಲನೆ ನೀಡಿದ್ದಾರೆ. ಇದು ಸಂವಿಧಾನ ರೂಪುಗೊಂಡ ಬಗೆ ಕುರಿತು ಇ-ಫೋಟೋ ಪ್ರದರ್ಶನ ಹಾಗೂ  ವರ್ಚುವಲ್ ಫಿಲ್ಮ್ ಪೋಸ್ಟರ್ ಪ್ರದರ್ಶನವಾಗಿದೆ. 

ಜಲಿಯನ್ ವಾಲಾಬಾಗ್ ಸ್ಮಾರಕ ಸಂಕೀರ್ಣ ಆಗಸ್ಟ್ 28ಕ್ಕೆ ಪ್ರಧಾನಿ ಮೋದಿ ರಾಷ್ಟ್ರಕ್ಕೆ ಸಮರ್ಪಣೆ!

ಸ್ವಾತಂತ್ರ್ಯ ಪ್ರಯಾಣದ ಮೈಲಿಗಲ್ಲಿನಲ್ಲಿ ಸಂವಿಧಾನ ರೂಪುಗೊಂಡ ಬೆಗೆಗೆ ವಿಶೇಷ ಸ್ಥಾನವಿದೆ. ಇದರ ಇತಿಹಾಸ ತಿಳಿಸಿವು ಇ ಪ್ರದರ್ಶನ ಇಂಗ್ಲೀಷ್, ಹಿಂದಿ, ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ಲಭ್ಯವಿದೆ.  ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಆಚರಿಸುತ್ತಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವʼದ ಅಂಗವಾಗಿ ಹಮ್ಮಿಕೊಂಡಿರುವ 'ಐಕಾನಿಕ್ ವೀಕ್' ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನವ ಭಾರತದ ಪ್ರಯಾಣವನ್ನು ಪ್ರದರ್ಶಿಸುವ ಮತ್ತು ಸ್ವಾತಂತ್ರ್ಯ ಚಳವಳಿಯ 'ಎಲೆಮರೆ ಕಾಯಿಗಳುʼ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಬೃಹತ್ ಜನಸಂಪರ್ಕ ಚಟುವಟಿಕೆಗಳ ಮೂಲಕ ಆಚರಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಇದಕ್ಕಾಗಿ ವಿವಿಧ ಮಾಧ್ಯಮ ಘಟಕಗಳು ಈ ಸಂಭ್ರಮಾಚರಣೆಗೆ ಕೈ ಜೋಡಿಸಿವೆ.

ಸಂವಿಧಾನ ರೂಪುಗೊಂಡ ಬಗೆಯ ಕುರಿತು ಜನರಿಗೆ ತಿಳಿಸುವುದು ಇ-ಫೋಟೋ ಪ್ರದರ್ಶನದ ಉದ್ದೇಶ . ಜನರ ಪಾಲ್ಗೊಳ್ಳುವಿಕೆ  ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾದ ಈ ಪ್ರದರ್ಶನವು ಸಂವಿಧಾನದ ಬಗ್ಗೆ ತಿಳಿಯಲು ದೇಶದ ಯುವಕರನ್ನು ಉತ್ತೇಜಿಸಲಿದೆ.  ಯುವಕರ ಹಕ್ಕುಗಳ ಬಗ್ಗೆ ಶಿಕ್ಷಣ ನೀಡುತ್ತದೆ.  ರಾಷ್ಟ್ರದ ಬಗ್ಗೆಯುವಕರಲ್ಲಿರುವ  ಕರ್ತವ್ಯ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತದೆ.  
ಭಾರತದ ಸಂವಿಧಾನದ ಮೂಲ ತತ್ವಗಳನ್ನು ಪ್ರಚಾರ ಮಾಡುವ ಪ್ರಯತ್ನದಲ್ಲಿ ಯುವಜನರು ಪಾಲ್ಗೊಳ್ಳುವಂತೆ ಉತ್ತೇಜಿಸಲು ಸರಕಾರ ಶೀಘ್ರದಲ್ಲೇ 'ನಿಮ್ಮ ಸಂವಿಧಾನವನ್ನು ತಿಳಿಯಿರಿ' ಕಾರ್ಯಕ್ರಮವನ್ನು ನಡೆಸಲಿದೆ ಎಂದು ಅನುರಾಗ್ ಠಾಕೂರ್ ಘೋಷಿಸಿದರು.

ಡಿಜಿಟಲ್ ಕ್ರಾಂತಿ ಪರಿವರ್ತನೆಗೆ ಅನುಗುಣವಾಗಿ ನಾವು ಈ ಸಂಕಲನವನ್ನು ಡಿಜಿಟಲ್ ಸ್ವರೂಪದಲ್ಲಿ ಬಿಡುಗಡೆ ಮಾಡಿದ್ದೇವೆ. ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಹನ್ನೊಂದು ಭಾರತೀಯ ಭಾಷೆಗಳಲ್ಲಿ ಈ ಪುಸ್ತಕ ಬಿಡುಗಡೆಯಾಗಲಿದೆ. ಈ ವಿಶಿಷ್ಟ ಸಂಗ್ರಹವು ನಮ್ಮ ಸ್ವಾತಂತ್ರ್ಯದ ಪ್ರಯಾಣದ ವಿವಿಧ ಮೈಲಿಗಲ್ಲುಗಳನ್ನು ಆಚರಿಸುತ್ತದೆ ಎಂದರು. ವರ್ಚುವಲ್ ಪ್ರದರ್ಶನವು ವಿಡಿಯೋಗಳು, ಭಾಷಣಗಳ ಸಂಗ್ರಹಗಳ ಜೊತೆಗೆ ಸಂವಾದಾತ್ಮಕ ರಸಪ್ರಶ್ನೆ ಕಾರ್ಯಕ್ರಮವನ್ನೂ ಹೊಂದಿದೆ. ಇದರಲ್ಲಿ ಭಾಗವಹಿಸಿ ಇ-ಪ್ರಮಾಣಪತ್ರ ಪಡೆಯಲು ಅವಕಾಶವಿದೆ ಎಂದು ಠಾಕೂರ್ ಹೇಳಿದರು. 

ಬೆಂಗಳೂರಿನ ಯುವ ಚಿತ್ರಕಲಾವಿದನ ಅದ್ಭುತ ಪ್ರತಿಭೆಗೆ ಪ್ರಧಾನಿ ಮೋದಿ ಮೆಚ್ಚುಗೆ!

ಚಿತ್ರಾಂಜಲಿ@75 ಕಾರ್ಯಕ್ರಮ 75 ವರ್ಷಗಳ ಭಾರತೀಯ ಸಿನೆಮಾವನ್ನು ಪ್ರತಿನಿಧಿಸುತ್ತದೆ. ಜೊತೆಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ನಮ್ಮ ಸಮಾಜ ಸುಧಾರಕರು ಮತ್ತು ನಮ್ಮ ಸೈನಿಕರ ಶೌರ್ಯದ ಪವಿತ್ರ ನೆನಪುಗಳ ಮೆಲುಕು ಮೂಡಿಸುತ್ತದೆ ಎಂಬ ಖಾತರಿ ನನಗಿದೆ. ಅಂತಹ 75 ಅಪ್ರತಿಮ ಚಲನಚಿತ್ರಗಳನ್ನು ನಮ್ಮ ಪೋಸ್ಟರ್ ಪ್ರದರ್ಶನದಲ್ಲಿ ಸೇರಿಸಲು ನಾವು ಪ್ರಯತ್ನಿಸಿದ್ದೇವೆ.  ಭವಿಷ್ಯದಲ್ಲಿ, ಸಚಿವಾಲಯವು ಕೇವಲ ಪೋಸ್ಟರ್‌ಗಳನ್ನು ಮಾತ್ರವಲ್ಲ, ಈ ಚಲನಚಿತ್ರಗಳನ್ನು ದೇಶದ ಜನರ ಬಳಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತದೆ ಎಂದು ಠಾಕೂರ್ ಹೇಳಿದರು.

ಚಿತ್ರಾಂಜಲಿ@75 :
ಇದು ಸ್ವಾತಂತ್ರ್ಯ ಹೋರಾಟದ ದೃಶ್ಯ ದಾಖಲೆಗಳನ್ನು ಅನಾವಣಗೊಳಿಸುವ ಚಿತ್ರಾವಳಿಯ ಸರಣಿ. ಈ ವರ್ಚುವಲ್ ಪ್ರದರ್ಶನವು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸೈನಿಕರ ಶೌರ್ಯ ಮತ್ತು ತ್ಯಾಗವನ್ನು ವೈಭವೀಕರಿಸುವ ಭಾರತೀಯ ಚಿತ್ರಗಳನ್ನು ಅನಾವರಣಗೊಳಿಸುತ್ತದೆ. ಆಗ ಸಮಾಜದಲ್ಲಿ ಗುಪ್ತಗಾಮಿಯಾಗಿದ್ದ ಹೋರಾಟದ ಕಿಚ್ಚನ್ನು ಪ್ರತಿಬಿಂಬಿಸುವ ಮತ್ತು ವಿವಿಧ ಸುಧಾರಣೆಗಳಿಗೆ ಕಾರಣವಾದ ಚಲನಚಿತ್ರಗಳು ಹಾಗೂ ಸಮವಸ್ತ್ರಧಾರಿ ಹೀರೋಗಳಾದ ನಮ್ಮ ಯೋಧರನ್ನು ಅಮರಗೊಳಿಸಿದ ಚಲನಚಿತ್ರಗಳ ಪೋಸ್ಟರ್‌ಗಳನ್ನು ಇದರಲ್ಲಿ ಪ್ರದರ್ಶಿಸಲಾಗುವುದು. 

ಸತತ ದಾಳಿ ಬಳಿಕ ಅದೇ ಗತವೈಭವದಲ್ಲಿರುವ ಸೋಮನಾಥ ದೇವಾಲಯ ನಮ್ಮ ಸ್ಪೂರ್ತಿ; ಪ್ರಧಾನಿ ಮೋದಿ!

ವಿವಿಧ ಭಾಷೆ ಸಿನೆಮಾಗಳ 75 ಚಲನಚಿತ್ರ ಪೋಸ್ಟರ್‌ಗಳು ಮತ್ತು ಛಾಯಾಚಿತ್ರಗಳ ಮೂಲಕ ದೇಶಭಕ್ತಿಯ ವಿಭಿನ್ನ ಮನಸ್ಥಿತಿಗಳನ್ನು 'ಚಿತ್ರಾಂಜಲಿ @ 75' ಪ್ರಸ್ತುತಪಡಿಸುತ್ತದೆ. ಪ್ರದರ್ಶನವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ: 'ಸಮಾಜ ಸುಧಾರಣೆಯ ಸಿನೆಮಾ', 'ಸಿನೆಮಾದ ಕಣ್ಣಿನ ಮೂಲಕ ಸ್ವಾತಂತ್ರ್ಯ ಹೋರಾಟ', ಮತ್ತು 'ವೀರ ಸೈನಿಕರಿಗೆ ವಂದನೆʼ.
ʻಭಕ್ತ್ ವಿದುರ್‌ʼ(1921) ಎಂಬ ಮೂಕ ಚಿತ್ರದಿಂದ ಪ್ರಾರಂಭಿಸಿ, ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ, ಸೈ ರಾ ನರಸಿಂಹ ರೆಡ್ಡಿ (2019) ಅವರ ಜೀವನದಿಂದ ಪ್ರೇರಿತವಾದ ಇತ್ತೀಚಿನ ತೆಲುಗು ಚಿತ್ರದವರೆಗೆ ಈ 75 ಚಿತ್ರಗಳು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಜೀವನಚರಿತ್ರೆಗಳನ್ನು ಒಳಗೊಂಡಿವೆ. ಜೊತೆಗೆ ಭಾರತದ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯನ್ನು ಚಿತ್ರಿಸುವ ವಿವಿಧ ಭಾಷೆಗಳ ಚಲನಚಿತ್ರಗಳು, ಸಾಮಾಜಿಕ ಪಿಡುಗುಗಳ ವಿರುದ್ಧ ವಿಜಯವನ್ನು ಸಾರಿದ ಮತ್ತು ನಮ್ಮ ಗಡಿಗಳನ್ನು ರಕ್ಷಿಸುತ್ತಿರುವ ವೀರರ ಶೌರ್ಯವನ್ನು ಅನಾವರಣಗೊಳಿಸುವ ಚಿತ್ರಗಳನ್ನೂ ಇದು ಒಳಗೊಂಡಿದೆ. 

ʻಸಂವಿಧಾನ ರೂಪುಗೊಂಡ ಬಗೆʼಯ ಕುರಿತು:
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 75 ವರ್ಷಗಳ ಸಂಭ್ರಮಾಚರಣೆ ಹಿನ್ನೆಕೆ ಆಚರಿಸಲಾಗುತ್ತಿರುವ 'ಸ್ವಾತಂತ್ರ್ಯದ ಅಮೃತಮಹೋತ್ಸವ'ದ ಭಾಗವಾಗಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸ್ವಾತಂತ್ರ್ಯ ಹೋರಾಟದ ವಿವಿಧ ಆಯಾಮಗಳ ಬಗ್ಗೆ ಇಡೀ ವರ್ಷ ಇ-ಪುಸ್ತಕಗಳ ಸರಣಿಯನ್ನು ಪ್ರಾರಂಭಿಸುತ್ತಿದೆ. ಈ ಸರಣಿಯಲ್ಲಿ ಮೊದಲನೆಯದು 'ಸಂವಿಧಾನ ರೂಪುಗೊಂಡ ಬಗೆʼ. ಇದರ ನಂತರ ʻರಾಷ್ಟ್ರೀಯ ಏಕೀಕರಣʼ, ʻಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರುʼ, ʻಬುಡಕಟ್ಟು ಚಳವಳಿಗಳುʼ, ʻಕ್ರಾಂತಿಕಾರಿ/ಗಾಂಧಿ ಚಳವಳಿʼ ಇತ್ಯಾದಿ ವಿಷಯಗಳು ಪ್ರಕಟಗೊಳ್ಳಲಿವೆ.

ಸಂವಿಧಾನದ ರಚನೆಯನ್ನು ಚಿತ್ರಿಸುವ 'ಸಂವಿಧಾನದ ರೂಪುಗೊಂಡ ಬಗೆʼ ಇ-ಪುಸ್ತಕವು ಸುಮಾರು 25 ಅಪರೂಪದ ಚಿತ್ರಗಳ ಹೂರಣವನ್ನು ಹೊಂದಿದೆ. ಆಕಾಶವಾಣಿಯಿಂದ (ಎಐಆರ್‌) ಪಡೆಯಲಾದ ಮತ್ತು ಸಿನಿಮಾ ವಿಭಾಗದಿಂದ ಪಡೆಯಲಾದ ವೀಡಿಯೊಗಳು ಮತ್ತು ಭಾಷಣಗಳಿಗೆ ಲಿಂಕ್‌ಗಳನ್ನು ಸಹ ಇದು ಒಳಗೊಂಡಿದೆ. ಇ-ಪುಸ್ತಕವು ಓದುಗರ ಜತೆ ಒಡನಾಟವನ್ನು ಹೆಚ್ಚಿಸಲು ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಲು 10 ಪ್ರಶ್ನೆಗಳನ್ನು ಒಳಗೊಂಡ ರಸಪ್ರಶ್ನೆಯನ್ನು ಸಹ ಹೊಂದಿದೆ.

ಈ ಇ-ಪುಸ್ತಕವು ಹಿಂದಿ ಮತ್ತು ಇಂಗ್ಲಿಷ್ ಮತ್ತು ಇತರ 11 ಭಾಷೆಗಳಲ್ಲಿ (ಒಡಿಯಾ, ಗುಜರಾತಿ, ಮರಾಠಿ, ಅಸ್ಸಾಮಿ, ತೆಲುಗು, ಕನ್ನಡ, ತಮಿಳು, ಮಲಯಾಳಂ, ಪಂಜಾಬಿ, ಬಂಗಾಳಿ, ಉರ್ದು) ಲಭ್ಯವಿರುತ್ತದೆ. ಇದರ ಲಿಂಕ್‌ಗಳು ಸ್ಥಳೀಯ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಶಾಲೆಗಳು, ಪ್ರಾದೇಶಿಕ ಪಿಐಬಿ/ಆರ್‌ಒಬಿ ಕಚೇರಿಗಳಿಗೆ ಲಭ್ಯವಿರುತ್ತವೆ. ಜೊತೆಗೆ ಅವುಗಳ ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ಪ್ರಚಾರ ಅಭಿಯಾನ ಕೈಗೊಳ್ಳಲಾಗುವುದು.

Follow Us:
Download App:
  • android
  • ios