74ರ ಹರೆಯದ ಅನುರಾಧಾ ಕುಲಕರ್ಣಿ ಮುಂಬೈನಲ್ಲಿ ೩೦ ವರ್ಷಗಳಿಂದ ಪೊಲೀಸರಿಗೆ ಸ್ವಯಂಸೇವಕಿಯಾಗಿ ಸಹಾಯ ಮಾಡುತ್ತಿದ್ದಾರೆ. ಸಾಂತಾಕ್ರೂಜ್, ಜುಹು ಪ್ರದೇಶಗಳಲ್ಲಿ ಸಂಚಾರ ನಿಯಂತ್ರಿಸುವುದು, ಕಳ್ಳರನ್ನು ಹಿಡಿಯುವುದು, ಅಪಘಾತಗಳಲ್ಲಿ ನೆರವು ನೀಡುವುದು, ಸಾಕ್ಷಿ ಹೇಳುವುದು ಮುಂತಾದ ಕೆಲಸಗಳನ್ನು ಮಾಡುತ್ತಾರೆ. ಬೆನ್ನುನೋವು ಇದ್ದರೂ ನಿರಂತರ ಸೇವೆ ಸಲ್ಲಿಸುತ್ತಿರುವ ಅವರು 'ಬೈಕ್ ಅಜ್ಜಿ' ಎಂದೇ ಪ್ರಸಿದ್ಧಿ.

ಈ ಫೋಟೋದಲ್ಲಿ ಕಾಣಿಸುತ್ತಿರುವ, ಬೈಕ್​ ಮೇಲೆ ಕುಳಿತ ಅಜ್ಜಿಗೆ ಈಗ 74 ವರ್ಷ ವಯಸ್ಸು. ಬೈಕ್​ ಓಡಿಸುತ್ತಿರುವುದನ್ನು ನೋಡಿದರೇನೇ ಈಕೆ ಸಾಮಾನ್ಯ ಮಹಿರೆ ಅಲ್ಲ ಎನ್ನುವುದು ತಿಳಿಯುತ್ತದೆ. ಆದರೆ, ಈ ಅಜ್ಜಿಯ ಬಗ್ಗೆ ಕೇಳಿದರೆ ಅಬ್ಬಬ್ಬಾ ಎನ್ನುವಿರಿ. ಪೊಲೀಸ್​ ಇಲಾಖೆಗೆ ಉಚಿತವಾಗಿ ಕರೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾಲೆ ಈ ಅಜ್ಜಿ. ಬೈಕ್​ನಲ್ಲಿ ಹೋದರೆ ಸಾಕು ಅಲ್ಲೊಬ್ಬ ಕಳ್ಳನ ಕಥೆ ಮುಗಿದಂತೆ, ಅಪಘಾತ ಆದರೆ ತಕ್ಷಣ ಧಾವಿಸಿ ನೆರವು ನೀಡುತ್ತಾರೆ, ಅಪಘಾತವನ್ನು ಕಣ್ಣಾರೆ ನೋಡಿದರೆ ಕೋರ್ಟ್​ಗೆ ಹೋಗಿ ಸಾಕ್ಷಿ ನುಡಿದು ನಿರಪರಾಧಿಗಳನ್ನು ರಕ್ಷಿಸ್ತಾರೆ, ಅಷ್ಟೇ ಅಲ್ಲ... ಸಿಗ್ನಲ್​ನಲ್ಲಿ ನಿಂತು ಟ್ರಾಫಿಕ್​ ಅನ್ನೂ ಸರಿ ಮಾಡ್ತಾರೆ...!

ವಯಸ್ಸು ಎನ್ನೋದು ಒಂದು ಲೆಕ್ಕ ಮಾತ್ರ ಎನ್ನುವ ಮಾತಿಗೆ ಅಕ್ಷರಶಃ ಅನ್ವಯ ಈ ಅಜ್ಜಿ. ಮುಂಬೈನ ಸಾಂತಾಕ್ರೂಜ್ ಮತ್ತು ಜುಹುವಿನ ಜನದಟ್ಟಣೆಯ ಲೇನ್‌ಗಳಲ್ಲಿ, ಸದಾ ಕಾಣಸಿಗುವ ಈಕೆ ಹೆಸರು ಅನುರಾಧ ಕುಲಕರ್ಣಿ. ಮೂರು ದಶಕಗಳಿಗೂ ಹೆಚ್ಚು ಕಾಲ ಮುಂಬೈ ಪೊಲೀಸರಿಗೆ ಸ್ವಯಂಪ್ರೇರಣೆಯಿಂದ ಸಹಾಯ ಮಾಡುತ್ತಿದ್ದಾರೆ. ಕಳ್ಳರನ್ನು ಬೆನ್ನಟ್ಟುವುದರಿಂದ ಹಿಡಿದು ಸಂಚಾರವನ್ನು ಸುಗಮಗೊಳಿಸುವವರೆಗೆ, ಸೇವೆಗೆ ವಯಸ್ಸು ಅಡ್ಡಿಯಲ್ಲ ಎಂದು ಅವರು ಸಾಬೀತುಪಡಿಸುತ್ತಿದ್ದಾರೆ. ಮುಂಬೈನ ಸಾಂತಾಕ್ರೂಜ್ ಮತ್ತು ಜುಹುವಿನ ಜನದಟ್ಟಣೆಯ ಲೇನ್‌ಗಳಲ್ಲಿ ಇರುವ ಈ ಅಜ್ಜಿ ಪೊಲೀಸ್​ ಸಮವಸ್ತ್ರ ಧರಿಸಲ್ಲ. ಬದಲಾಗಿ ಉತ್ಸಾಹದಲ್ಲಿ ಟ್ರಾಫಿಕ್​ ಸರಿಯಾಡುತ್ತಿರುತ್ತಾರೆ. ಮುಂಬೈನ ಬೈಕ್​ ಅಜ್ಜಿ, ಸಂಚಾರಿ ಅಜ್ಜಿ ಎಂದೆಲ್ಲಾ ಇವರು ಕರೆಸಿಕೊಳ್ರುತ್ತಿದ್ದಾರೆ. ತಮ್ಮ ಶಾಂತ ದೃಢನಿಶ್ಚಯ, ನಿರ್ಭೀತ ಸೇವೆಯಿಂದ ಇವರು ಫೇಮಸ್​ ಆಗಿದ್ದಾರೆ. 

ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್​ ಎಳೆದು ಕದ್ದೊಯ್ದ ಗೂಳಿ! ಕಣ್ಣುಗಳನ್ನೇ ನಂಬಲಾಗದ ವಿಡಿಯೋ ವೈರಲ್​

 ಅನುರಾಧಾ ಅವರ ಕುರಿತು ಹೇರುವುದಾದರೆ, ಇವರ ಈ ಎಲ್ಲಾ ಸೇವೆ ಶುರುವಾಗ 30 ವರ್ಷಗಳ ಮೇಲಾಗಿದೆ. 30 ವರ್ಷಗಳ ಹಿಂದೆ ಪೋದಾರ್ ಶಾಲೆಯ ಬಳಿಯಿಂದ ಇದು ಆರಂಭವಾಗಿದೆ. ಅಲ್ಲಿ ಇವರು, ಬೈಕರ್‌ಗಳು ತಪ್ಪು ಲೇನ್‌ಗೆ ಅಪಾಯಕಾರಿಯಾಗಿ ಪ್ರವೇಶಿಸುವುದನ್ನು ಗಮನಿಸಿದರು. ಅವರು ಈ ಸಮಸ್ಯೆಯನ್ನು ವರದಿ ಮಾಡಿದರು ಮತ್ತು ಸ್ವತಃ ಬೈಕರ್‌ಗಳನ್ನು ನಿಲ್ಲಿಸಲು ಪ್ರಾರಂಭಿಸಿದರು. ಇದರಿಂದ ಪ್ರಭಾವಿತರಾದ ಸಂಚಾರ ಅಧಿಕಾರಿಯೊಬ್ಬರು ಸ್ವಯಂಸೇವಕರಾಗಿ ಸೇರಲು ಸೂಚಿಸಿದರು. ಅಲ್ಲಿಂದ ಅವರ ಕೆಲಸ ಆರಂಭವಾಗಿದೆ. ಈಗ ಸದ್ಯ ಮುಂಬೈನ ಜುಹು ಏರ್‌ಪ್ಲೇನ್ ಗಾರ್ಡನ್ ಜಂಕ್ಷನ್, ಕ್ಯಾಪ್ಟನ್ ವಿನಾಯಕ್ ಗೋರ್ ರಸ್ತೆ, ವೈಲ್ ಪಾರ್ಲೆ ವೆಸ್ಟ್, ಪೋದರ್ ಸ್ಕೂಲ್ ಲೇನ್, ಸೇಂಟ್ ಲಾರೆನ್ಸ್ ಶಾಲೆಯ ಬಳಿ, ಸಾಂತಾಕ್ರೂಜ್ ವೆಸ್ಟ್ ಮುಂತಾದ ಕಡೆಗಳಲ್ಲಿ ಸಂಚಾರ ನಿಯಂತ್ರಿಸುತ್ತಾರೆ.

ಬೆನ್ನು ನೋವಿನಿಂದ ಬಳಲುತ್ತಿದ್ದರೂ, ಅವರು ಮಕ್ಕಳಿಗೆ ರಸ್ತೆ ದಾಟಲು, ಆಂಬ್ಯುಲೆನ್ಸ್‌ಗಳಿಗೆ ಮಾರ್ಗದರ್ಶನ ನೀಡಲು ಮತ್ತು ದೈನಂದಿನ ಸಂಚಾರ ಅವ್ಯವಸ್ಥೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತಿದ್ದಾರೆ, ಇವೆಲ್ಲವನ್ನೂ ಅವರು ಉಚಿತವಾಗಿ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬಾಂದ್ರಾ ವೃತ್ತದ ಬಳಿಯ ಎಟಿಎಂನಲ್ಲಿ ಒಬ್ಬ ವ್ಯಕ್ತಿಯಿಂದ 5 ಸಾವಿರ ರೂ. ಕಸಿದುಕೊಂಡ ಕಳ್ಳನನ್ನು ಹಿಡಿಯುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದರು. ಹಿಂಜರಿಕೆಯಿಲ್ಲದೆ, ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಬೆನ್ನಟ್ಟುವಲ್ಲಿ ಕಳ್ಳನನ್ನು ಬೆನ್ನಟ್ಟಿ ಆತನನ್ನು ಹಿಡಿದಿದ್ದರು. ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಫೋನ್​ ಎಗರಿಸಿದ ಕಳ್ಳನನ್ನು ಹಿಡಿದಿದ್ದರು! ಮತ್ತೊಂದು ಪ್ರಕರಣದಲ್ಲಿ, ಅಪಘಾತ ಮಾಡಿ ಆರೋಪಿಯಾಗಿದ್ದ ಲಾರಿ ಚಾಲಕ ತಪ್ಪು ಮಾಡಿಲ್ಲ ಎಂದು ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದರು. ಕೋವಿಡ್​ ಸಮಯದಲ್ಲಿಯೂ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದರು. 

ಆಟೋದಲ್ಲಿದ್ದ ವೃದ್ಧ ದಂಪತಿ ಬಳಿ ಬಂದು ವಿಚಾರಣೆ: ರಸ್ತೆಯಲ್ಲೇ ನ್ಯಾಯ ಕೊಟ್ಟ ನ್ಯಾಯಾಧೀಶ!