ಉತ್ತರಾಖಂಡದ ಹೃಷಿಕೇಶದಲ್ಲಿ ಗೂಳಿಯೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕನ್ನು ಕದ್ದೊಯ್ದ ವಿಚಿತ್ರ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೂಳಿ ಬೈಕನ್ನು ಕೊಂಬಿನಿಂದ ತಿವಿದು ತಳ್ಳಿಕೊಂಡು ಹೋಗುವ ದೃಶ್ಯ ವೈರಲ್ ಆಗಿದ್ದು, ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಪುನರ್ಜನ್ಮದ ಸೇಡು ಎಂದೂ ಮತ್ತೆ ಕೆಲವರು ಪ್ರಾಣಿಗಳ ಮೇಲಿನ ದೌರ್ಜನ್ಯಕ್ಕೆ ಪ್ರತಿಕ್ರಿಯೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ರಸ್ತೆ ಮೇಲೆ ನಿಲ್ಲಿಸಿದ್ದ ವಾಹನಗಳ ಕಳ್ಳತನವಾಯಿತು ಎಂದರೆ, ಅದರಲ್ಲೇನು ವಿಶೇಷ ಇಲ್ಲ ಬಿಡಿ ಅಂತೀರಿ ಅಲ್ವಾ? ಅದೇ ನಮ್ಮ ಪರಿಚಯಸ್ಥರದ್ದು ಆಗಿದ್ದರೆ ಅಯ್ಯೋ ಎಂದೂ, ನಮ್ಮದೇ ಆಗಿದ್ದರೆ ಕಣ್ಣೀರು ಸುರಿಸಿ ಕಳ್ಳನಿಗೆ ಹಿಡಿಶಾಪ ಹಾಕೋದು ಸಹಜ. ಬೈಕ್, ಕಾರ್ ಹೀಗೆ ಏನೇನೋ ಕಳ್ಳತನ ಎಂದಾಕ್ಷಣ ನಮ್ಮ ಕಣ್ಣೆದುರಿಗೆ ಬರುವುದು ಪುರುಷನ ಮುಖ ಚೆಹರೆ. ಕಳ್ಳಿಯರಿಗೇನೂ ಕೊರತೆಯಿಲ್ಲ ಎನ್ನುವುದು ನಿಜವಾದರೂ ವಾಹನ ಕಳ್ಳತನ ಸದ್ಯ ಪುರುಷರೇ ಎಕ್ಸ್ಪರ್ಟ್ ಇದ್ದಾರೆ ಎನ್ನುವುದು ಸುಳ್ಳಲ್ಲ. ಆದರೆ, ಗೂಳಿಯೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನ ಕದ್ದೊಯ್ದಿದೆ ಎಂದರೆ ನಂಬ್ತೀರಾ? ಸಿನಿಮಾಗಳಲ್ಲಿ ಮಾತ್ರ ಇದು ಸಾಧ್ಯ ಎನ್ನಿಸಬಹುದು. ಇಲ್ಲದಿದ್ದರೆ ಹೀಗೆ ಹೇಳಿದವರನ್ನೇ ಹುಚ್ಚರು ಎಂದೂ ಹೇಳಬಹುದು.
ಅದರೆ, ಈ ಪ್ರಪಂಚದಲ್ಲಿ ಸಾಧ್ಯವಾಗದ್ದು ಯಾವುದೂ ಇಲ್ಲ ಎನ್ನುವುದಕ್ಕೆ ಆಗಾಗ್ಗೆ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಈಗ ಬಹುತೇಕ ಕಡೆಗಳಲ್ಲಿ ಸಿಸಿಟಿವಿ ಇರುವ ಕಾರಣ, ಈ ವಿಚಿತ್ರ, ಕುತೂಹಲ ಘಟನೆಗಳು ನಮಗೆ ಕಾಣಸಿಗುತ್ತವೆ. ಅಂಥದ್ದರಲ್ಲಿ ಒಂದು ಶಾಕಿಂಗ್ ವಿಡಿಯೋ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿರುವ ಕಾರಣದಿಂದಾಗಿ ಇದು ಗೂಳಿಯದ್ದೇ ಕೆಲಸ ಎಂದು ತಿಳಿದಿದೆ. ಇಲ್ಲದಿದ್ದರೆ ಕಣ್ಣಿನಿಂದ ನೋಡಿದ್ದ ಪ್ರತ್ಯಕ್ಷದರ್ಶಿಗಳು ಹೇಳಿದ್ದರೂ ಪೊಲೀಸರು ಮೊದಲು ಅವರನ್ನೇ ಹಿಡಿದು ಒಳಕ್ಕೆ ಹಾಕುತ್ತಿದ್ದರೋ ಏನೋ.
ಮುಟ್ಟಿನ ಮೊದಲ ಮೂರು ದಿನ ತಲೆಸ್ನಾನ ಮಾಡ್ತೀರಾ? ಇಲ್ಲಿದೆ ನೋಡಿ ಎಚ್ಚರಿಕೆ..
ಇದು ಉತ್ತರಾಖಂಡದ ಹೃಷಿಕೇಶದಲ್ಲಿ ನಡದಿರುವ ಘಟನೆ. ಗೂಳಿಯೊಂದು ಆರಾಮಾಗಿ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದೆ. ಅಲ್ಲೊಂದು ಬೈಕ್ ನಿಲ್ಲಿಸಲಾಗಿತ್ತು. ಇದ್ದಕ್ಕಿದ್ದಂತೆಯೇ ಆ ಗೂಳಿಗೆ ಅದೇನಾಯ್ತೋ ಗೊತ್ತಿಲ್ಲ. ನಂಬಲು ಅಸಾಧ್ಯ ಎನ್ನುವ ರೀತಿಯಲ್ಲಿ ಅದು ಬೈಕ್ ಹಿಂದೆ ಹೋಗಿ ಅದನ್ನು ಕೋಡಿನಿಂದ ತಿವಿದು ಓಡಿಸಿಕೊಂಡು ಹೋಗಿದೆ! ಬೈಕ್, ಕಾರು ಸೇರಿದಂತೆ ಇತರ ವಾಹನಗಳನ್ನು ಪ್ರಾಣಿಗಳು ತಿವಿದು ಹಾಳು ಮಾಡಿರುವುದನ್ನು ಎಲ್ಲರೂ ನೋಡಿರಬಹುದು. ಅದರೆ ಇದು ಹಾಗಲ್ಲ, ಅಕ್ಷರಶಃ ಬೈಕ್ ಅನ್ನು ತಳ್ಳಿಕೊಂಡು ಕದ್ದುಕೊಂಡು ಹೋಗಿದೆ.
ಇದು ವೈರಲ್ ಆಗುತ್ತಲೇ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಇದು ನಿಜಕ್ಕೂ ಗೂಳಿಯಲ್ಲ. ಹೋದ ಜನ್ಮದ ಶತ್ರುತ್ವವನ್ನು ತೀರಿಸಿಕೊಳ್ಳಲು ಯಾರೋ ಗೂಳಿ ರೂಪದಲ್ಲಿ ಬಂದಿದ್ದಾರೆ ಎಂದೇ ಹಲವರು ಹೇಳುತ್ತಿದ್ದಾರೆ. ಪುನರ್ಜನ್ಮದ ಬಗ್ಗೆ ತಮಗೆ ನಂಬಿಕೆ ಇಲ್ಲ ಎನ್ನುತ್ತಲೇ ಕೆಲವರು ಇದನ್ನು ನೋಡಿದರೆ ಈಗ ತಮಗೆ ನಂಬಿಕೆ ಬರುತ್ತಿದೆ ಎನ್ನುತ್ತಿದ್ದಾರೆ. ಏಕೆಂದರೆ ಯಾವುದಾದರೂ ಪ್ರಾಣಿಗಳ ಮೇಲೆ ಅಥವಾ ಅವುಗಳ ಮರಿಗಳ ಮೇಲೆ ಬೈಕ್, ಬಸ್ಸು, ಕಾರು ಇತ್ಯಾದಿ ಹರಿದು ಅವುಗಳಿಗೆ ಗಾಯವಾದಾಗ ಇಲ್ಲವೇ ತಮ್ಮ ಮರಿಗಳು ಸಾವನ್ನಪ್ಪಿದ್ದಾಗ ಪ್ರಾಣಿಗಳು ಅಂಥವರ ಮೇಲೆ ಅಥವಾ ಅಂಥ ವಾಹನಗಳ ಮೇಲೆ ಸೇಡು ತೀರಿಸಿಕೊಳ್ಳುವುದು ಸಹಜ. ಆ ಅಪಘಾತ ಸಂಭವಿಸಿದ ಜಾಗದಲ್ಲಿಯೇ ನಿಂತು ಅಂಥದ್ದೇ ವಾಹನಗಳ ಮೇಲೆ ಹೋಗುವವರನ್ನು ಅಟ್ಟಾಡಿಸಿಕೊಂಡು ಬರುತ್ತದೆ. ಆದರೆ ಈ ವಿಡಿಯೋದಲ್ಲಿ ನೋಡಿರುವಂತೆ, ಗೂಳಿ ಅದನ್ನು ತಳ್ಳಿಕೊಂಡು ಹೋಗಿದೆ. ಇದು ವಿಚಿತ್ರ ಆದರೂ ಸತ್ಯ!
80% ಮಹಿಳೆಯರು ಸಿಂಧೂರ ತಪ್ಪಾಗಿ ಹಚ್ತಾರೆ! ಸರಿಯಾದ ವಿಧಾನ ಹೇಗೆ? ಏನಿದರ ಮಹತ್ವ?


