Asianet Suvarna News Asianet Suvarna News

ಗಡಿ ಬಿಕ್ಕಟ್ಟು; ಚೀನಾ ಜೊತೆಗಿನ 5 ಸಾವಿರ ಕೋಟಿ ರೂ. ಒಪ್ಪಂದ ಸ್ಥಗಿತಗೊಳಿಸಿದ ಸರ್ಕಾರ!

ಭಾರತ-ಚೀನಾ ಗಡಿ ಪರಿಸ್ಥಿತಿ ಇನ್ನೂ ಶಾಂತವಾಗಿಲ್ಲ. ಚೀನಾ ಕಾಲು ಕೆರೆದು ನಿಂತಿದ್ದರೆ, ಇತ್ತ ಭಾರತ ತಕ್ಕ ತಿರುಗೇಟು ನೀಡಲು ಸಜ್ಜಾಗಿದೆ. ಭಾರತೀಯರು ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಪಾಠ ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ ಜೂನ್ ಆರಂಭದಲ್ಲಿ ಚೀನಾ ಕಂಪನಿಗಳ ಜೊತೆ ಮಾಡಿಕೊಂಡಿದ್ದ ಬರೋಬ್ಬರಿ 5000 ಕೋಟಿ ರೂಪಾಯಿ ಹೂಡಿಕೆ ಒಪ್ಪಂದ ಇದೀಗ ಸ್ಥಗಿತಗೊಂಡಿದೆ.

Anti China sentiments Maharashtra government  put on hold 3 agreements with Chinese company
Author
Bengaluru, First Published Jun 22, 2020, 6:29 PM IST

ಮುಂಬೈ(ಜೂ.22): ಚೀನಾ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಪ್ರತಿಯೊಬ್ಬ ಭಾರತೀಯ ಚೀನಾಗೆ ಬುದ್ದಿಕಲಿಸಲು ಮುಂದಾಗಿದ್ದಾನೆ. ಸೆಲೆಬ್ರೆಟಿಗಳು ಕೂಡ ಚೀನಾ ವಸ್ತುಗಳನ್ನು ಬಹಿಷ್ಕರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ಸರ್ಕಾರ ಕೂಡ ಚೀನಾ ಜೊತೆಗಿನ ಪ್ರಮುಖ 3 ಒಪ್ಪಂದಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿದೆ. 

ಗಡಿ ಸಂಘರ್ಷ: ಪರೋಕ್ಷವಾಗಿ ಚೀನಾಗೆ ಸಪೋರ್ಟ್ ಮಾಡ್ತಿದೆಯಾ ಅಮೆರಿಕಾ?...

ಮಹಾರಾಷ್ಟ್ರದಲ್ಲಿ ಬಂಡವಾಳ ಹೂಡಿಕೆ ಮಾಡಿ ಉದ್ಯಮ ಆರಂಭಿಸಲು ಮುಂದಾಗಿದ್ದ ಚೀನಾ ಕಂಪನಿಗಳು ಜೂನ್ ಆರಂಭದಲ್ಲಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಒಟ್ಟು 5,000 ಕೋಟಿ ರೂಪಾಯಿ ಒಪ್ಪಂದ ಇದೀಗ ಸ್ಥಗಿತಗೊಂಡಿದೆ. ಚೀನಾದ ಗ್ರೇಟ್ ವಾಲ್ ಮೋಟಾರ್ಸ್ ಮಹಾರಾಷ್ಟ್ರದಲ್ಲಿ ಘಟಕ ಆರಂಭಿಸಲು 3,770 ಕೋಟಿ, ಫೊಟೋನ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿ 1,000 ಕೋಟಿ ಹಾಗೂ ಹೆಂಗ್ಲಿ ಎಂಜಿನಿಯರಿಂಗ್ 250 ಕೋಟಿ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿತ್ತು.

ಶೀಘ್ರವೇ S-400 ಮಿಸೈಲ್ ಪೂರೈಸಲು ರಷ್ಯಾ ಒತ್ತಾಯಿಸಿದ ರಾಜನಾಥ್ ಸಿಂಗ್!...

ಇದೀಗ ಈ 3 ಒಪ್ಪಂದಗಳನ್ನು ಮಹಾರಾಷ್ಟ್ರ ಸರ್ಕಾರ ಸ್ಥಗಿತಗೊಳಿಸಿದೆ. ಗಡಿಯಲ್ಲಿ ಚೀನಾ ಶಾಂತಿಯನ್ನು ಮತ್ತೆ ಸ್ಥಾಪಿಸಲು ಮುಂದಾದರೆ ಮಾತ್ರ ಒಪ್ಪಂದ ಕುರಿತು ಪರಾಮರ್ಶಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಇತ್ತ ಹರಿಯಾಣದಲ್ಲೂ ಚೀನಾದ 2 ಪವರ್ ಪ್ರಾಜೆಕ್ಟ್ ಒಪ್ಪಂದಗಳನ್ನು ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ರದ್ದು ಮಾಡಿದ್ದಾರೆ.

Follow Us:
Download App:
  • android
  • ios