ಮಾಸ್ಕೋ(ಜೂ.22): ಚೀನಾ ಅತಿಕ್ರಮಣಕ್ಕೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಇದರ ಜೊತೆಗೆ ಸೇನೆಯ ಕೈ ಬಲಪಡಿಸಲು ಶಸಸ್ತ್ರ ಪೂರೈಕೆಯೂ ನಡೆಯುತ್ತಿದೆ. ರಷ್ಯಾಗೆ ಬೇಟಿ ನೀಡಿರುವ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಶೀಘ್ರವೇ S-400 ಮಿಸೈಲ್ ಪೂರೈಸಲು ಒತ್ತಾಯಿಸಿದ್ದಾರೆ. 

ಶಸ್ತ್ರಾಸ್ತ್ರ ಖರೀದಿಗೆ ಸೇನೆಗೆ ಸರ್ಕಾರ ಅನುಮತಿ!...

ರಷ್ಯಾ ಜೊತೆ ಮಿಸೈಲ್ ಖರೀದಿ ಒಪ್ಪಂದ ಮಾಡಿಕೊಂಡಿರುವ ಭಾರತ, ಕಳೆದ ವರ್ಷ ಬರೋಬ್ಬರಿ 5.4 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ರಷ್ಯಾಗೆ ಪಾವತಿಸಿತ್ತು. ಕೊರೋನಾ ವೈರಸ್ ಕಾರಣ 2021ರ ವೇಳೆಗೆ   S-400 ಮಿಸೈಲ್ ಭಾರತಕ್ಕೆ ಪೂರೈಸಲು ರಷ್ಯಾ ನಿರ್ಧರಿಸಿತ್ತು. ಇದೀಗ ರಾಜನಾಥ್ ಸಿಂಗ್, ಆದಷ್ಟು ಬೇಗ ಬಾರತಕ್ಕೆ  S-400 ಮಿಸೈಲ್ ಪೂರೈಸಬೇಕು ಎಂದು ಒತ್ತಾಯಿಸಿದ್ದಾರೆ.

ಚೀನಾ ಅಡ್ಡಿ ನಡುವೆಯೂ ಗಲ್ವಾನ್‌ ಸೇತುವೆ ಪೂರ್ಣ!

ರಷ್ಯಾ ಮಿಲಿಟರಿ ದಿನಾಚರಣೆಗಾಗಿ 3 ದಿನ ಪ್ರವಾಸದಲ್ಲಿರುವ ರಾಜನಾಥ್ ಸಿಂಗ್ ಮಿಲಿಟರಿ ಒಪ್ಪಂದ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ. ಲಾಡಖ್ ಪ್ರಾಂತ್ಯದಲ್ಲಿ ಚೀನಾ ಸೇನೆ ಆಕ್ರಮಣದ ಬಳಿಕ ರಾಜನಾಥ್ ಸಿಂಗ್ ಮಿಲಿಟರಿ ಒಪ್ಪಂದ ಮಾತುಕತೆ ಮಹತ್ವ ಪಡೆದಿದೆ. ಇತ್ತ ಚೀನಾ ಕೂಡ ಹಲವು ಮಿಲಿಟರಿ ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ. ಇದರಲ್ಲಿ ಭಾರತ ಒಪ್ಪಂದ ಮಾಡಿಕೊಂಡಿರುವ  S-400 ಮಿಸೈಲ್ ಕೂಡ ಚೀನಾ ಬಳಿ ಇದೆ.