ಮುಂಬೈ (ಮಾ.19): ಉದ್ಯಮಿ ಮುಕೇಶ್‌ ಅಂಬಾನಿ ಮನೆಯ ಬಳಿ ಪತ್ತೆಯಾದ ಸ್ಫೋಟಕ ತುಂಬಿದ್ದ ಕಾರಿನ ಮಾಲಿಕ ಮನ್‌ಸುಖ್‌ ಹೀರೇನ್‌ ಸಾವಿಗೂ ಮುನ್ನ ಆತನ ಮೇಲೆ ಹಲ್ಲೆ ನಡೆಸಿ, ಜೀವಂತವಾಗಿ ನೀರಿನ ಕಾಲುವೆಗೆ ಎಸೆದಿರುವ ಸಾಧ್ಯತೆ ಇದೆ ಎಂದು ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌) ಅನುಮಾನ ವ್ಯಕ್ತಪಡಿಸಿದೆ.

ಅನುದಾನಿತ ಸರ್ಕಾರಿ ವೈದ್ಯಕೀಯ ಕಾಲೇಜು ನಡೆಸಿದ ಮೃತ ದೇಹದಲ್ಲಿನ ಪಾಚಿ (ಏಕ ಕೋಶೀಯ ಜೀವಿ) ಪರೀಕ್ಷೆಯ ವರದಿಯನ್ನು ಎಟಿಎಸ್‌ ಸ್ವೀಕರಿಸಿದ್ದು, ನೀರಿಗೆ ಬೀಳುವುದಕ್ಕೆ ಮುನ್ನ ಮನ್‌ಸುಖ್‌ ಜೀವಂತವಾಗಿದ್ದಿರಬಹುದು ಎಂಬ ಸುಳಿವು ಲಭ್ಯವಾಗಿದೆ.

ಹಿರೇನ್‌ ಹತ್ಯೆ ಕೇಸಲ್ಲಿ ಎಎಸ್‌ಐ ಸಚಿನ್‌ ಪಾತ್ರ: ಪತ್ನಿ ಆರೋಪ ...

ನೀರಿನಲ್ಲಿರುವ ಏಕ ಕೋಶೀಯ ಜೀವಿಗಳಾದ ಪಾಚಿಗಳು ಮೃತ ದೇಹದ ಶ್ವಾಸಕೋಶ ಮತ್ತು ವಿವಿಧ ಅಂಗಾಶಗಳನ್ನು ಪ್ರವೇಶಿಸಿದ್ದವು. ಸಂತ್ರಸ್ತನ ದೇಹದ ಒಳಗೆ ಪಾಚಿಯ ಇರುವಿಕೆ ಆತ ನೀರಿನಲ್ಲಿ ಜೀವಂತವಾಗಿ ಮುಳುಗುತ್ತಿರುವುದರ ಸೂಚನೆಯಾಗಿದೆ ಎಂದು ವರದಿ ತಿಳಿಸಿದೆ. ಮಾ.4ರಂದು ಮುಂಬೈ ಸಮೀಪದ ಕಾಲುವೆಯೊಂದರಲ್ಲಿ ಹಿರೇನ್‌ ಮೃತದೇಹ ಪತ್ತೆ ಆಗಿತ್ತು.