ಗಾಳಿಪಟದ ದಾರ ಸಿಲುಕಿ ಮಗಳನ್ನು ಶಾಲೆಗೆ ಬಿಟ್ಟು ವಾಪಸ್ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದ ತಂದೆಯೊಬ್ಬರು ಸಾವನ್ನಪ್ಪಿದ್ದಾರೆ. ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಚೈನೀಸ್ ಮಾಂಜಾ ಅವರ ಕತ್ತಿಗೆ ಸಿಲುಕಿ  ಈ ದುರಂತ ನಡೆದಿದೆ.

ಕೆಲ ದಿನಗಳ ಹಿಂದಷ್ಠೇ ಸ್ನೇಹಿತರ ಜೊತೆ ಬೈಕ್‌ನಲ್ಲಿ ಸಾಗುತ್ತಿದ್ದಾಗ ಕತ್ತಿಗೆ ಚೈನೀಸ್ ಮಾಂಜಾ ಸಿಲುಕಿ 16ರ ಹರೆಯದ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಇಂತಹದ್ದೇ ಮತ್ತೊಂದು ದುರಂತ ಉತ್ತರ ಪ್ರದೇಶದ ಜೌನ್‌ಪುರದಲ್ಲಿ ನಡೆದಿದೆ. ಗಾಳಿಪಟದ ದಾರ ಸಿಲುಕಿ ಮಗಳನ್ನು ಶಾಲೆಗೆ ಬಿಟ್ಟು ವಾಪಸ್ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದ ತಂದೆಯೊಬ್ಬರು ಸಾವನ್ನಪ್ಪಿದ್ದಾರೆ. ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಚೈನೀಸ್ ಮಾಂಜಾ ಅವರ ಕತ್ತಿಗೆ ಸಿಲುಕಿದ್ದು, ದಾರದಿಂದ ಕತ್ತನ್ನು ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಅವರಿಗೆ ಬೈಕ್‌ನ ಮೇಲೆ ನಿಯಂತ್ರಣ ತಪ್ಪಿದ್ದು, ಮುಖಕೆಳಗಾಗಿ ಬೈಕ್‌ನಿಂದ ಅವರು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರ ಗಾಳಿಪಟದ ದಾರ ಅವರ ಕತ್ತನ್ನು ಸೀಳಿದೆ. ಗಾಳಿಪಟ್ಟದ ದಾರ ಅರ್ಧದಷ್ಟು ಅವರ ಕತ್ತನ್ನು ಕೊಯ್ಯಲ್ಪಟ್ಟಿದ್ದು, ನೇತಾಡಿದೆ. ಪರಿಣಾಮ ಸುಮಾರು ಹೊತ್ತಿನವರೆಗೆ ಅವರು ನೋವಿನಿಂದ ರಸ್ತೆಯಲ್ಲೇ ಬಿದ್ದಿದ್ದಾರೆ.

ಇದಾದ ನಂತರ ದಾರಿಯಲ್ಲಿ ಹೋಗುತ್ತಿದ್ದವರು ಯಾರೋ ಪೊಲೀಸರಿಗೆ ಮಾಹಿತಿ ನೀಡಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಒಂದು ಗಂಟೆಗೂ ಹೆಚ್ಚು ಕಾಲ ಅವರನ್ನು ಬದುಕುಳಿಸಲು ಪ್ರಯತ್ನಿಸಿದರಾದರು ಅವರು ಬದುಕುಳಿಯಲಿಲ್ಲ. ಜಿಲ್ಲಾ ಕೇಂದ್ರದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ನಗರ ಕೊಟ್ವಾಲಿ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಈ ಅಪಘಾತ ಸಂಭವಿಸಿದೆ. ಮೃತರನ್ನು 40 ವರ್ಷದ ಸಂದೀಪ್ ತಿವಾರಿ ಎಂದು ಗುರುತಿಸಲಾಗಿದೆ. ಸಂದೀಪ್ ತಿವಾರಿ ಅವರು ಕೊತ್ವಾಲಿ ಪ್ರದೇಶದ ಉಮರ್‌ಪುರ ಹರಿಬಂಧನಪುರದ ನಿವಾಸಿಯಾಗಿದ್ದು, ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಶಿಕ್ಷಕನ ಹಠಾತ್ ಸಾವಿನಿಂದಾಗಿ ಅವರ ಪತ್ನಿ ಹಾಗೂ ಅವರ ವೃದ್ಧ ತಂದೆ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ತೀವ್ರ ಶೋಕತಪ್ತರಾಗಿದ್ದಾರೆ.

ಇದನ್ನೂ ಓದಿ: ಪ್ರತಿಷ್ಠಿತ ಶಾಲೆಯ ಮೇಲೆ ಐಟಿ ರೈಡ್: ಕೋಟಿ ಕೋಟಿ ಹಣ ಪತ್ತೆ: ಹಣ ಎಣಿಸುವ ಯಂತ್ರ ತರಿಸಿದ ಅಧಿಕಾರಿಗಳು

ಕುಟುಂಬ ಸದಸ್ಯರ ಪ್ರಕಾರ, ಸಂದೀಪ್ ಅವರ ಏಳು ವರ್ಷದ ಮಗಳು ಮನ್ನತ್ ಸೇಂಟ್ ಪ್ಯಾಟ್ರಿಕ್ ಶಾಲೆಯಲ್ಲಿ 2 ನೇ ತರಗತಿಯಲ್ಲಿ ಓದುತ್ತಿದ್ದು, ಅವರು ಇಂದು ಬೆಳಗ್ಗೆ ತಮ್ಮ ಮಗಳನ್ನು ಶಾಲೆಗೆ ಬಿಡಲು ಹೋಗಿದ್ದರು. ಅವರು ಹಿಂತಿರುಗಿ ಬರುವಾಗ, ಅಜಮ್‌ಗಢ-ಜೌನ್‌ಪುರ ರಸ್ತೆಯ ಶಾಸ್ತ್ರಿ ಸೇತುವೆಯ ಬಳಿ ಚೈನೀಸ್ ಗಾಳಿಪಟದ ದಾರ (ಮಾಂಜಾ) ಅವರ ಕತ್ತಿಗೆ ಸಿಕ್ಕಿ ಹಾಕಿಕೊಂಡಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಅವರು ಈ ಮಾಂಜಾವನ್ನು ತೆಗೆದು ಹಾಕಲು ಬೈಕ್‌ಗೆ ಬ್ರೇಕ್ ಹಾಕಿದ್ದಾರೆ. ಆದರೆ ಬೈಕ್ ನಿಯಂತ್ರಣ ತಪ್ಪಿದ್ದು ಅವರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಈ ಮಾಂಜಾ ಅವರ ಕತ್ತನ್ನು ಸೀಳಿದ್ದು, ಅವರು ರಕ್ತ ಸೋರುತ್ತಾ ರಸ್ತೆಗೆ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಜನ ಅವರ ಸಹಾಯಕ್ಕೆ ಧಾವಿಸಿದ್ದಾರೆ.. ಕೆಲವರು ಅವರ ಕತ್ತಿಗೆ ಕರವಸ್ತ್ರ ಕಟ್ಟುವ ಮೂಲಕ ರಕ್ತಸ್ರಾವವನ್ನು ನಿಲ್ಲಿಸಲು ಪ್ರಯತ್ನಿಸಿದರು, ಆದರೆ ತುಂಬಾ ರಕ್ತ ಹರಿಯುತ್ತಲೇ ಇತ್ತು.

ಇದನ್ನೂ ಓದಿ: ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ

ಜನರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಅವರನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಗಾಯಕ್ಕೆ ಹೊಲಿಗೆ ಹಾಕಲು ಪ್ರಯತ್ನಿಸಿದರು, ಆದರೆ ನಿರಂತರ ರಕ್ತಸ್ರಾವದಿಂದಾಗಿ ಸಂದೀಪ್ ಸ್ಥಿತಿ ಹದಗೆಟ್ಟಿದ್ದು, ಬೆಳಗ್ಗೆ 9:30 ಕ್ಕೆಲ್ಲಾ ಅವರು ನಿಧನರಾಗಿದ್ದಾರೆ.