Asianet Suvarna News Asianet Suvarna News

ಅಧಿಕಾರದ 'ಅಮಲು' ನಿಮಗೂ ತಟ್ಟಿತಲ್ಲ..! ಕೇಜ್ರಿವಾಲ್‌ ಸರ್ಕಾರದ ಮದ್ಯನೀತಿಯ ಬಗ್ಗೆ ಅಣ್ಣಾ ಹಜಾರೆ ಭಾವುಕ ಪತ್ರ!

2012 ಸೆಪ್ಟೆಂಬರ್‌ 18 ರಂದು ಅಂದರೆ, 10 ವರ್ಷಗಳ ಹಿಂದೆ ಅಣ್ಣಾ ಟೀಮ್‌ ದೆಹಲಿಯಲ್ಲಿ ಸಭೆ ಸೇರಿದ್ದಾಗ, ಆ ವೇಳೆ ತಾವು ರಾಜಕಾರಣದ ಕಡೆಗೆ ಹೋಗುವ ಮಾತನ್ನು ಆಡಿದ್ದೀರಿ. ಆದರೆ, ರಾಜಕೀಯ ಪಕ್ಷ ಮಾಡುವುದು ಎಂದಿಗೂ ನಮ್ಮ ಚಳವಳಿಯ ಉದ್ದೇಶವಾಗಿರಲಿಲ್ಲ. ತಮ್ಮ ತಂಡದ ಸದಸ್ಯರಾದವರಿಗೂ ಕೂಡ ಅಧಿಕಾರದ 'ಅಮಲು' ತಟ್ಟಿತಲ್ಲ ಎನ್ನುವುದೇ ಬೇಸರದ ವಿಚಾರ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಅಣ್ಣಾ ಹಜಾರೆ ಭಾವುಕ ಪತ್ರ ಬರೆದಿದ್ದಾರೆ.

Anna Hazare candid letter to Delhi CM Arvind Kejriwal on new liquor policy AAP san
Author
First Published Aug 30, 2022, 2:22 PM IST

ನವದೆಹಲಿ (ಆ.30): ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಅಣ್ಣಾ ಹಜಾರೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅಣ್ಣಾ ಮದ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಅದರ ಸಲಹೆಗಳನ್ನು ನೀಡಿದ್ದಾರೆ. ತಮ್ಮ ಎರಡು ಪುಟಗಳ ಭಾವುಕ ಪತ್ರದಲ್ಲಿ ಅಣ್ಣಾ ಹಜಾರೆ ತಮ್ಮ ಚಳುವಳಿ, ಅಂದಿನ ಅರವಿಂದ್‌ ಕೇಜ್ರಿವಾಲ್‌ ಅವರಲ್ಲಿದ್ದ ರಾಜಕೀಯ ಉದ್ದೇಶಗಳು, ಆಪ್‌ ಪಕ್ಷ ಇವೆಲ್ಲವುಗಳು ಬಗ್ಗೆ ಮಾತನಾಡಿದ್ದಾರೆ. ಟೀಮ್‌ ಅಣ್ಣಾದ ಆದರ್ಶವನ್ನು ಸಂಪೂರ್ಣವಾಗಿ ಮರೆತಿದ್ದೀರಿ. ಇಡೀ ಅಬಕಾರಿ ನೀತಿಯನ್ನು ಸಂಪೂರ್ಣವಾಗಿ ಬದಲಾಯಿಸಿ ಎನ್ನುವ ಮೂಲಕ ಗುರು, ಶಿಷ್ಯನನ್ನು ಸಂಪೂರ್ಣವಾಗಿ ಜಾಡಿಸಿದ್ದಾರೆ. ಸ್ವತಃ ಅರವಿಂದ್‌ ಕೇಜ್ರಿವಾಲ್‌ ಅವರು ಬರೆದ "ಸ್ವರಾಜ್ಯ' ಎನ್ನುವ ಪುಸ್ತಕದ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪ ಮಾಡಿರುವ ಅಣ್ಣಾ ಹಜಾರೆ, ನಿಮ್ಮ ಮೇಲೆ ಅಪಾರ ನಿರೀಕ್ಷೆ ಇತ್ತು. ರಾಜಕೀಯಕ್ಕೆ ಹೋಗಿ ಒಂದು ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಎಲ್ಲಾ ಆದರ್ಶ ಸಿದ್ಧಾಂತವನ್ನು ಮರೆತು ಹೋಗಿದ್ದೀರಿ. ಮದ್ಯದಲ್ಲಿ ಹೇಗೆ ಅಮಲು ಬರುವಂಥ ಅಂಶ ಇರುತ್ತದೆಯೋ ಅದೇ ರೀತಿ, ಅಧಿಕಾರದ ಅಮಲು ನಿಮಗೆ ತಟ್ಟಿರುವಂಥೆ ಕಾಣುತ್ತಿದೆ. ನೀವೂ ಈಗ ಅಂಥ ಅಧಿಕಾರದ ಅಮಲಿನಲ್ಲಿದ್ದೀರಿ ಎಂದು ಅಣ್ಣಾ ಹಜಾರೆ ಬರೆದಿದ್ದಾರೆ.

ದೆಹಲಿಯ ಅಬಕಾರಿ ನೀತಿಯನ್ನು ಟೀಕಿಸಿ ಅಣ್ಣಾ ಹಜಾರೆ ಅವರು ಪತ್ರದಲ್ಲಿ ಬರೆದಿದ್ದು, “ರಾಜಕೀಯಕ್ಕೆ ಹೋಗಿ ಮುಖ್ಯಮಂತ್ರಿಯಾದ ನಂತರ ನೀವು ಆದರ್ಶ ಸಿದ್ಧಾಂತವನ್ನು ಮರೆತಂತೆ ತೋರುತ್ತಿದೆ, ಅದಕ್ಕಾಗಿಯೇ ದೆಹಲಿ ರಾಜ್ಯದಲ್ಲಿ ನಿಮ್ಮ ಸರ್ಕಾರ ಹೊಸ ಮದ್ಯ ನೀತಿಯನ್ನು ರೂಪಿಸಿದೆ. ಇದರಿಂದ ಮದ್ಯ ಮಾರಾಟ ಮತ್ತು ಮದ್ಯಪಾನಕ್ಕೆ ಉತ್ತೇಜನ ನೀಡಬಹುದು.ರಸ್ತೆಯಲ್ಲಿ ಮದ್ಯದಂಗಡಿ ತೆರೆಯಬಹುದು.ಇದರಿಂದ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡಬಹುದು.ಇದು ಸಾರ್ವಜನಿಕರ ಹಿತಾಸಕ್ತಿಯಲ್ಲಿ ಇರುವ ಯೋಜನೆಯಲ್ಲ' ಎಂದು ಹೇಳಿದ್ದಾರೆ. 'ಐತಿಹಾಸಿಕ ಚಳವಳಿಯ ಸೋಲಿನಿಂದ ರೂಪುಗೊಂಡ ಪಕ್ಷವೊಂದು ಈಗ ದೇಶದಲ್ಲಿ ಉಳಿದ ರಾಜಕೀಯ ಪಕ್ಷಗಳ ಹಾದಿಯಲ್ಲಿಯೇ ಸಾಗುತ್ತಿದೆ. ಇದು ಬಹಳ ಬೇಸರದ ವಿಚಾರ ಎಂದು ಬರೆದಿದ್ದಾರೆ.


"ಈ ರೀತಿಯ ಸಾರ್ವಜನಿಕ ಶಿಕ್ಷಣವು ಜನಜಾಗೃತಿಯ ಕೆಲಸವಾಗಿದ್ದರೆ, ದೇಶದಲ್ಲಿ ಇಂತಹ ತಪ್ಪು ಮದ್ಯಪಾನ ನೀತಿಯನ್ನು ಎಲ್ಲಿಯೂ ಮಾಡುತ್ತಿರಲಿಲ್ಲ, ಸರ್ಕಾರವು ಯಾವ ಪಕ್ಷಕ್ಕೆ ಸೇರಿದ್ದರೂ, ಸಾವರ್ಜನಿಕ ಹಿತಾಸಕ್ತಿಯಲ್ಲಿ ಕೆಲಸ ಮಾಡಿ ಎಂದು ಹೇಳಲು ಸಮಾನ ಮನಸ್ಕರ ತಂಡವೊಂದು ಇದ್ದಿದ್ದರೆ ಇಂಥ ಸ್ಥಿತಿಗಳು ಆಗುತ್ತಿರಲಿಲ್ಲ.ಖಂಡಿತವಾಗಿ ಇಂದು ದೇಶದ ಪರಿಸ್ಥಿತಿ ಬೇರೆಯಾಗುತ್ತಿತ್ತು ಮತ್ತು ಬಡವರಿಗೆ ಪ್ರಯೋಜನವಾಗುತ್ತಿತ್ತು. ಆದರೆ ದುರದೃಷ್ಟವಶಾತ್ ಅದು ಆಗಲಿಲ್ಲ ಎಂದಿದ್ದಾರೆ. 

ರೈತರ ಬೆಂಬಲಿಸಿ ನಡೆಸಲು ಉದ್ದೇಶಿಸಿದ್ದ ಉಪವಾಸ ಸತ್ಯಗ್ರಹ ಕೈಬಿಟ್ಟ ಅಣ್ಣ ಹಜಾರೆ!

ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಐತಿಹಾಸಿಕ ಮತ್ತು ಲೋಕಾಯುಕ್ತ ಚಳವಳಿ ನಡೆದಿತ್ತು ಎಂದು ಅಣ್ಣಾ ಹಜಾರೆ ಹೇಳಿದರು. ಅದರಲ್ಲಿ ಲಕ್ಷಾಂತರ ಜನ ಬಂದಿದ್ದರು. ಆಗ ಲೋಕಾಯುಕ್ತದ ಅಗತ್ಯದ ಬಗ್ಗೆ ವೇದಿಕೆಯಿಂದ ದೊಡ್ಡ ದೊಡ್ಡ ಭಾಷಣಗಳನ್ನು ಮಾಡಿದ್ದೀರಿ. ಆದರ್ಶ ರಾಜಕೀಯ ಮತ್ತು ಸುವ್ಯವಸ್ಥೆಯ ಬಗ್ಗೆ ಆಲೋಚನೆಗಳನ್ನು ಹೊಂದಿದ್ದರು. ಆದರೆ ದೆಹಲಿ ಸಿಎಂ ಆದ ನಂತರ ಲೋಕಪಾಲ ಮತ್ತು ಲೋಕಾಯುಕ್ತ ಕಾನೂನನ್ನು ಮರೆತಿದ್ದೀರಿ. ನಿಮ್ಮ ಸರ್ಕಾರ ಮಹಿಳೆಯರ ಮೇಲೆ ಪರಿಣಾಮ ಬೀರುವ, ಜನರ ಜೀವನ ಹಾಳು ಮಾಡುವ ಮದ್ಯ ನೀತಿ ಮಾಡಿದೆ. ನಿಮ್ಮ ಮಾತುಗಳು ಮತ್ತು ಕ್ರಿಯೆಗಳ ನಡುವೆ ವ್ಯತ್ಯಾಸವಿದೆ ಎಂದು ಇದು ತೋರಿಸುತ್ತದೆ.

ಕೇಂದ್ರ ಸರ್ಕಾರದಿಂದ ಲೋಕಪಾಲ್ ಗೆ ಅಸ್ತು: ಹಜಾರೆಗೆ ಹಜಾರ್ ಸಲಾಂ!

ಹೊಸ ಅಬಕಾರಿ ನೀತಿಯ ಬಗ್ಗೆ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವು ವಿರೋಧ ಪಕ್ಷಗಳಿಂದ ಸಾಲು ಸಾಲು ಆರೋಪಗಳು ಎದುರಿಸುತ್ತಿದೆ. ಪಕ್ಷದ ನಿಕಟವರ್ತಿಗಳಿಗೆ ಈ ನೀತಿಯಿಂದ ಲಾಭವಾಗಿದೆ ಎಂದು ಆರೋಪಿಸಲಾಗಿದೆ. ಇದಲ್ಲದೇ ಈ ನೀತಿಯ ಮೂಲಕ ಹಗರಣ ನಡೆದಿದೆ ಎಂದು ಬಿಜೆಪಿ ಕಿಡಿಕಾರಿದೆ. ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುತ್ತಿದ್ದು, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ 15 ಮಂದಿ ಮತ್ತು ಸರ್ಕಾರದ ಪ್ರಮುಖರನ್ನು ಆರೋಪಿ ಸ್ಥಾನದಲ್ಲಿ ಇರಿಸಲಾಗಿದೆ.

Follow Us:
Download App:
  • android
  • ios