Asianet Suvarna News Asianet Suvarna News

ಕೇಂದ್ರ ಸರ್ಕಾರದಿಂದ ಲೋಕಪಾಲ್ ಗೆ ಅಸ್ತು: ಹಜಾರೆಗೆ ಹಜಾರ್ ಸಲಾಂ!

ಮೋದಿ ಸರ್ಕಾರದಿಂದ ಐತಿಹಾಸಿಕ ನಿರ್ಧಾರ| ನಾಲ್ವರ ಸದಸ್ಯ ನೇತೃತ್ವದ ಲೋಕಪಾಲ್  ತಂಡ ರಚಿಸಿದ ಸರ್ಕಾರ| ನಾಳೆ ಸರ್ಕಾರದಿಂದ ಅಧಿಕೃತ ಘೋಷಣೆ ಸಾಧ್ಯತೆ| ನ್ಯಾ. ಪಿನಾಕಿ ಚಂದ್ರಘೋಷ್ ನೇತೃತ್ವದ ಲೋಕಪಾಲ್| ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ಪಿನಾಕಿ ಚಂದ್ರಘೋಷ್| ಸಾಮಾಜಿಕ ಹೋರಾಟಗಾರ ಅಣ್ಣ ಹಜಾರೆ ಹೋರಾಟಕ್ಕೆ ಸಂದ ಜಯ|

Union government To Appoint Justice Pinaki Chandra Ghose as  India First Lokpal
Author
Bengaluru, First Published Mar 17, 2019, 2:20 PM IST

ನವದೆಹಲಿ(ಮಾ.17): ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಲೋಕಪಾಲ್ ಗೆ ಅಸ್ತು ಎಂದಿದೆ. ನ್ಯಾ. ಪಿನಾಕಿ ಚಂದ್ರಘೋಷ್ ನೇತೃತ್ವದ ನಾಲ್ವರು ಸದಸ್ಯರ ಲೋಕಪಾಲ್ ತಂಡವನ್ನು ರಚಿಸಲಾಗಿದೆ.

ಈ ಕುರಿತು ಕೇಂದ್ರ ಸರ್ಕಾರ ನಾಳೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದ್ದು, ನ್ಯಾ. ಪಿನಾಕಿ ಚಂದ್ರಘೋಷ್ ನೇತೃತ್ವದ ಲೋಕಪಾಲ್ ಕಾರ್ಯೋನ್ಮುಖವಾಗಲಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ಪಿನಾಕಿ ಚಂದ್ರಘೋಷ್ ನೇತೃತ್ವದಲ್ಲಿ ಲೋಕಪಾಲ್ ತಂಡ ರಚಿಸಲಾಗಿದೆ.

ಇನ್ನು ಲೋಕಪಾಲ್ ಗೆ ಆಗ್ರಹಿಸಿ ಕಳೆದ ಹಲವು ವ‍ರ್ಷಗಳಿಂದ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಇದು ನ್ಯಾಯಕ್ಕೆ ಸಂದ ಜಯ ಎಂದು ಅಣ್ಣಾ ಹಜಾರೆ ಪ್ರತಿಕ್ರಿಯಿಸಿದ್ದಾರೆ.

Follow Us:
Download App:
  • android
  • ios