ರೈತರ ಬೆಂಬಲಿಸಿ ನಡೆಸಲು ಉದ್ದೇಶಿಸಿದ್ದ ಉಪವಾಸ ಸತ್ಯಗ್ರಹ ಕೈಬಿಟ್ಟ ಅಣ್ಣ ಹಜಾರೆ!

ಕೃಷಿ ಕಾಯ್ದೆ ವಿರೋಧಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದರು. ಆದರೆ ಮಹಾರಾಷ್ಟ್ರ ಮಾಜಿ ಸಿಎಂ ಅಣ್ಣಾ ಹಜಾರೆ ಭೇಟಿ ಮಾಡಿದ ಬೆನ್ನಲ್ಲೇ ಸತ್ಯಾಗ್ರಹ ಕೈಬಿಟ್ಟಿದ್ದಾರೆ.

Anna Hazare cancelled his planned fast against three central agricultural laws ckm

ಮಹಾರಾಷ್ಟ್ರ(ಜ.29):  ರೈತರ ವಿವಿಧ ಬೇಡಿಕೆಗಳನ್ನು ಬೆಂಬಲಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನಡೆಸಲು ಉದ್ದೇಶಿಸಿದ್ದ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ.  ಈ ಕುರಿತು ಅಣ್ಣಾ ಹಜಾರೆ ಕಚೇರಿ ಸ್ಪಷ್ಟಪಡಿಸಿದೆ ಎಂದು ANI ವರದಿ ಮಾಡಿದೆ

ರೈತರ ಬೇಡಿಕೆ ಈಡೇರದಿದ್ದರೆ ಜನ ಆಂದೋಲನ; ಕೇಂದ್ರಕ್ಕೆ ಅಣ್ಣಾ ಹಜಾರೆ ಎಚ್ಚರಿಕೆ!.

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಲ ಅಣ್ಣಾ ಹಜಾರೆ ಜನವರಿ 30 ರಿಂದ ಅನಿರ್ದಿಷ್ಟಾವದಿ ಉಪವಾಸ ಸತ್ಯಗ್ರಹ ನಡೆಸಲು ನಿರ್ಧರಿಸಿದ್ದರು. ಅಣ್ಣ ಹದಾರೆ ತಮ್ಮ ನಿರ್ಧಾರ ಪ್ರಕಟಿಸಿದ ಬಳಿಕ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅಣ್ಣಾ ಹಜಾರೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

 

ಮಹಾರಾಷ್ಟ್ರದ ರಾಲೇಗಣ ಸಿದ್ದಿಗೆ ಭೇಟಿ ನೀಡಿದ ದೇವೇಂದ್ರ ಫಡ್ನವಿಸ್, ಅಣ್ಣ ಹಜಾರೆ ಜೊತೆ ಮಾತುಕತೆ ನಡೆಸಿದ್ದಾರೆ. ಸತ್ಯಾಗ್ರಹ ನಡೆಸದಂತೆ ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸಿರುವ ಅಣ್ಣ ಹಜಾರೆ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ

Latest Videos
Follow Us:
Download App:
  • android
  • ios