ಚಲಿಸುತ್ತಿರುವ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಅನ್ನೋ ವದಂತಿಯಿಂದ ಹಲವರು ರೈಲಿನಿಂದ ಜಿಗಿದಿದ್ದಾರೆ. ದುರಂತ ಎಂದರೆ ಪಕ್ಕದ ಟ್ರಾಕ್‌ನಲ್ಲಿ ಬಂದ ರೈಲು ಹರಿದು ನಾಲ್ವರು ಮೃತಪಟ್ಟರೆ, ಹಲವರು ಗಾಯಗೊಂಡ ಘಟನೆ ನಡೆದಿದೆ.

ಇಂದೋರ್ (ಜೂ.14) ಚಲಿಸುತ್ತಿರುವ ಖಜರಾಹೋ ಉದಯಪುರ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವಂದತಿಯಿಂದ ಹರಡಿದೆ. ಪರಿಣಾಮ ಆತಂಕದಿಂದ ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ. ಜೀವ ಉಳಿಸಿಕೊಳ್ಳಲು ರೈಲು ನಿಲ್ಲುತ್ತಿದ್ದಂತೆ ರೈಲಿನಿಂದ ಜಿಗಿದಿದ್ದಾರೆ. ಆದರೆ ಪಕ್ಕದ ರೈಲು ಹಳಿಯಲ್ಲಿ ಬೇರೆ ಪ್ರಯಾಣಿಕರ ರೈಲು ಆಗಮಿಸಿದ ಪರಿಣಾಮ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದರೆ, ಹಲವರು ಗಾಯಗೊಂಡ ಘಟನೆ ಮಧ್ಯಪ್ರದೇಶದ ಮೊರಿನಾ ಜಿಲ್ಲೆಯ ಹೀತಾಂಪುರ ರೈಲು ನಿಲ್ದಾಣದ ಬಳಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಘಟನೆ?

ರೈಲು ಸಂಖ್ಯೆ 19665 ಖಜರಾಹೋ-ಉದಯಪುರ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರ ಹೊತ್ತು ಮಧ್ಯಪ್ರದೇಶದ ಮೊರಿನಾ ಜಿಲ್ಲೆಯ ಹಳಿಗಳಲ್ಲಿ ವೇಗವಾಗಿ ಸಾಗುತ್ತಿತ್ತು. ಈ ವೇಳೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಅನ್ನೋ ವದಂತಿ ಹಬ್ಬಿತ್ತು. ವದಂತಿ ತೀವ್ರಗೊಳ್ಳುತ್ತಿದ್ದಂತೆ ಪ್ರಯಾಣಕರಲ್ಲಿ ಆತಂಕ ಹೆಚ್ಚಾಗಿತ್ತು. ಚೀರಾಟಗಳು ಕೇಳಿಸತೊಡಗಿದೆ. ಇದರಿಂದ ಮತ್ತಷ್ಟು ಗಾಬರಿಗೊಂಡ ಕೆಲ ಪ್ರಯಾಣಿಕರು ತುರ್ತು ನಿಲುಗಡೆಗೆ ಚೈನ್ ಎಳೆದಿದ್ದಾರೆ. ಹೀಗಾಗಿ ಹೀತಾಂಪುರ ಹಾಗೂ ಧೋಲ್ಪುರ ರೈಲು ನಿಲ್ದಾಣದ ನಡುವೆ ರೈಲು ನಿಂತಿದೆ.

ಪ್ರಯಾಣಿಕರ ಮೇಲೆ ಹರಿದ ರೈಲು

ರೈಲು ನಿಲ್ಲುತ್ತಿದ್ದಂತೆ ಆತಂಕಗೊಂಡಿದ್ದ ಪ್ರಯಾಣಿಕರು ರೈಲಿನಿಂದ ಜಿಗಿದಿದ್ದಾರೆ. ಕೆಲ ಪ್ರಯಾಣಿಕರು ಹೇಗೋ ರೈಲು ಹಳಿಯಿಂದ ಪಕ್ಕಕ್ಕೆ ತೆರಳಿದ್ದಾರೆ. ಆದರೆ ಮತ್ತೆ ಕೆಲವರು ಪಕ್ಕದ ರೈಲು ಹಳಿಗೆ ಜಿಗಿದು ಪ್ರಾಣ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಇದೇ ವೇಳೆ ರೈಲು ಸಂಖ್ಯೆ 20424 ಫಿರೋಜ್‌ಪುರ್ ಸಿಯೋನಿ ಎಕ್ಸ್‌ಪ್ರೆಸ್ ರೈಲು ಆಗಮಿಸಿದೆ. ಕೆಲ ಪ್ರಯಾಣಿಕರು ಹೊರಗಡೆ ಜಿಗಿಯುತ್ತಿದ್ದಂತೆ ರೈಲು ಆಗಮಿಸಿದೆ. ಪರಿಣಮಾಮ ಕೆಲ ಪ್ರಯಾಣಿಕರ ಮೇಲೆ ರೈಲು ಸಾಗಿದೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ ಸದ್ಯ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಕೆಲ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೇ ಪ್ರೊಟೆಕ್ಷನ್ ಫೋರ್ಸ್, ರೈಲ್ವೇ ಪೊಲೀಸ್ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಯಾವುದೇ ಬೆಂಕಿ ಇಲ್ಲ. ವದಂತಿಗೆ ಕಿವಿಗೊಡಬೇಡಿ. ಯಾರೂ ಕೂಡ ರೈಲಿನಿಂದ ಇಳಿಯದಂತೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸುವ ಕಾರ್ಯಾಚರಣೆ ನಡೆಸಿದ್ದಾರೆ.

ತನಿಖೆಗೆ ಆದೇಶಿಸಿದ ನಾರ್ತ್ ಸೆಂಟ್ರಲ್ ರೈಲ್ವೇ

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಾರ್ತ್ ಸೆಂಟ್ರಲ್ ರೈಲ್ವೇ ತನಿಖೆಗೆ ಆದೇಶಿಸಿದೆ. ವದಂತಿಯಿಂದ ರೈಲು ನಿಲ್ಲಿಸಲಾಗಿದೆ. ತುರ್ತಾಗಿ ರೈಲು ನಿಂತಿದೆ. ಎಲ್ಲೂ ಕೂಡ ಬೆಂಕಿ ಇರಲಿಲ್ಲ. ಅದರೂ ಪ್ರಯಾಣಿಕರು ರೈಲಿನಿಂದ ಇಳಿದಿದ್ದಾರೆ. ಇದರಿಂದ ಮತ್ತೊಂದು ರೈಲು ಪ್ರಯಾಣಿಕರ ಮೇಲೆ ಹರಿದಿದೆ. ರೈಲಿನಿಂದ ಇಳಿದು ನಿಯಮ ಉಲ್ಲಂಘಿಸಿದ್ದಾರೆ. ಇತ್ತ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಈ ಘಟನೆ ಕುರಿತು ಸಂಪೂರ್ಣ ತನಿಖೆಗೆ ಆದೇಶ ನೀಡಲಾಗಿದೆ.