ಅಯ್ಯೋ ಫುಲ್ ಸೆಖೆ ಗುರು... ನ್ಯಾಚುರಲ್ ಸ್ವಿಮ್ಮಿಂಗ್ ಫುಲ್‌ನಲ್ಲಿ ಚಿಲ್ ಮಾಡ್ತಿರುವ ಟೈಗರು.!
ಹುಲಿಯೊಂದು ನೈಸರ್ಗಿಕ ನಿರ್ಮಿತ ಸ್ವಿಮ್ಮಿಂಗ್‌ಫೂಲ್‌ನಲ್ಲಿ ಎಂಜಾಯ್ ಮಾಡ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಾರಿಯ ಬೇಸಿಗೆಯ ಸೆಖೆ ಎಲ್ಲರನ್ನು ಹೈರಾಣಾಗುವಂತೆ ಮಾಡಿದೆ. ಪ್ರಾಣಿ ಪಕ್ಷಿಗಳು ಕೂಡ ಬಿಸಿಲ ತಾಪದಿಂದ ತತ್ತರಿಸಿ ಹೋಗಿದ್ದು, ತಂಪು ಜಾಗಕ್ಕಾಗಿ ಹನಿ ನೀರಿಗಾಗಿ ಪರದಾಡುತ್ತಿವೆ. ಹೀಗಿರುವಾಗ ಹುಲಿಯೊಂದು ನೈಸರ್ಗಿಕ ನಿರ್ಮಿತ ಸ್ವಿಮ್ಮಿಂಗ್‌ಫೂಲ್‌ನಲ್ಲಿ ಎಂಜಾಯ್ ಮಾಡ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಂಪಾದ ನೀರಿನಲ್ಲಿ ಹುಲಿ ಚಿಲ್ ಮಾಡ್ತಾ ವಿರಮಿಸುತ್ತಿರುವ ವೀಡಿಯೋವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ವೀಡಿಯೋವನ್ನು 30 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ವೀಡಿಯೋ ಇದಾಗಿದ್ದು, ಕಾಡಿನ ನಡುವಿನ ಬಂಡೆಯೊಂದರ ಮಧ್ಯೆ ಇರುವ ನೈಸರ್ಗಿಕ ನೀರಿನ ಮೂಲವೊಂದರಲ್ಲಿ ಹುಲಿಯೊಂದು ವಿರಮಿಸುತ್ತ ಬೇಸಿಗೆಯ ದಾಹವನ್ನು ತಣಿಸಿಕೊಳ್ಳುತ್ತಿದೆ. ತನ್ನ ಮುಂಭಾಗದ ಎರಡು ಕಾಲುಗಳ ಹಾಗೂ ತಲೆಯನ್ನು ಮಾತ್ರ ಹೊರಗಿಟ್ಟು ದೇಹದ ಉಳಿದ ಭಾಗಗಳನ್ನು ನೀರಿನಲ್ಲಿ ಮುಳುಗಿಸಿ ಹುಲಿ ಚಿಲ್ ಮಾಡುತ್ತಿದ್ದು, ಈ ಅಪರೂಪದ ವೀಡಿಯೋ ಸಖತ್ ವೈರಲ್ ಆಗಿದೆ.
ಅಮ್ಮನಿಗಾಗಿ ಅಲೆದಾಡುತ್ತಿದ್ದ ಪುಟಾಣಿ ಮರಿಯಾನೆ: ಮತ್ತೆ ತಾಯಿ ಮಡಿಲು ಸೇರಿಸಿದ ಅರಣ್ಯ ಸಿಬ್ಬಂದಿ
48 ಸೆಕೆಂಡ್‌ಗಳ ವೀಡಿಯೋದ ಇದಾಗಿದ್ದು, ವೀಡಿಯೋ ಪೋಸ್ಟ್ ಮಾಡಿದ ಸುಪ್ರಿಯಾ ಸಾಹು ಮಧುಮಲೈನ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಬೇಸಿಗೆಯ ಸೆಖೆಯಿಂದ ಬಿಡುವು ಪಡೆದುಕೊಳ್ಳುತ್ತಿದೆ ಎಂದು ಬರೆದುಕೊಂಡಿದ್ದಾರೆ. ಈ ಅಪರೂಪದ ವೀಡಿಯೋ ನೋಡಿದ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈಭಯುತವಾದ ಪ್ರಾಣಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹುಲಿಗಳಿಗೆ ಹೇಳಿ ಮಾಡಿಸಿದ ಜಾಗ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂತರ ರಾಯಲ್ ಲುಕ್ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅತೀ ಅಪರೂಪದ ದೃಶ್ಯ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಈ ಪೋಸ್ಟ್ ಮಾಡಿರುವ ಸುಪ್ರಿಯಾ ಸಾಹು ಅವರು ತಮಿಳುನಾಡು ಸರ್ಕಾರದ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯಗಳು, ಇದರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದು, ಆಗಾಗ ಪರಿಸರದ ಬೆರಗುಗೊಳಿಸುವ ಇಂತಹ ಅಪರೂಪದ ಫೋಟೋ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.
Viral Video: ಸೀರೆ ಉಟ್ಟು ಹರಿವ ನೀರಿಗೆ ಡೈವ್, ವೈರಲ್ ಆಯ್ತು ನಾರಿಯರ ಸಾಹಸ