Asianet Suvarna News Asianet Suvarna News

Norovirus:ಕೊರೋನಾ ನಡುವೆ ಕೇರಳದಲ್ಲಿ ನೋರೋವೈರಸ್ ಪ್ರಕರಣ ದೃಢ; ಹೊಸ ಮಾರ್ಗಸೂಚಿ ಪ್ರಕಟ!

  • ಕೇರಳದಲ್ಲಿ ನೋರೋವೈರಸ್ ಪ್ರಕರಣ ಖಚಿತಪಡಿಸಿ ಆರೋಗ್ಯ ಸಚಿವೆ
  • ವಯನಾಡಿನಲ್ಲಿ ನೋರೋವೈರಸ್ ಪ್ರಕರಣ ಪತ್ತೆ, ಎಚ್ಚರಿಕೆ ವಹಿಸಲು ಸೂಚನೆ
  • ನೋರೋವೈರಸ್ ಪ್ರಕರಣದಿಂದ ಹೊಸ ಮಾರ್ಗಸೂಚಿ ಪ್ರಕಟ
     
Animal borne disease Norovirus Confirmed In Kerala Health Minister asked people to be vigilant ckm
Author
Bengaluru, First Published Nov 12, 2021, 9:35 PM IST
  • Facebook
  • Twitter
  • Whatsapp

ವಯನಾಡ್(ನ.12): ಕೊರೋನಾ ವೈರಸ್‌ನಿಂದ(Coronavirus) ಭಾರತ ಇನ್ನು ಚೇತರಿಸಿಕೊಂಡಿಲ್ಲ. ಅದರಲ್ಲೂ ಕೇರಳದಲ್ಲಿ(Kerala) ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಮೊದಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಕೇರಳದ ವಯನಾಡಿನಲ್ಲಿ ನೋರೋವೈರಸ್(Noroviru) ಪತ್ತೆಯಾಗಿದೆ. ಈ ಕುರಿತು ಕೇರಳ ಆರೋಗ್ಯ ಇಲಾಖೆ(Health Ministry) ಸ್ಪಷ್ಟಪಡಿಸಿದ್ದು, ಹೊಸ ಮಾರ್ಗಸೂಚಿ(Guidelines) ಪ್ರಕಟಿಸಿದೆ.

ಕೇರಳದ ವಯನಾಡಿನಲ್ಲಿ ನೋರೋವೈರಸ್ ಪತ್ತೆಯಾಗಿರುವುದ ಖಚಿತವಾಗಿದೆ. ಇದರಿಂದ ಜನರು ಎಚ್ಚರಿಕೆ ವಹಿಸಬೇಕಾಗ ಅಗತ್ಯವಿದೆ. ಆದರೆ ಯಾರೂ ಆತಂಕ ಪಡಬೇಕಿಲ್ಲ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮನವಿ ಮಾಡಿದ್ದಾರೆ. ಇದೇ ವೇಳೆ ನೋರೋವೈರಸ್ ಹರಡದಂತೆ ತಡೆಯಲು ಮಾಡಬೇಕಾದ ಕ್ರಮಗಳು, ರೋಗದ ಕುರಿತು ಜಾಗೃತಿ ಮೂಡಸಲು ಪ್ರತಿ ಜಿಲ್ಲೆಗೆ ಸೂಚಿಸಿದ್ದಾರೆ. 

ನೋರೋವೈರಸ್ ಕಲುಷಿತ ನೀರು, ಆಹಾರ ಮೂಲಕ ಹರಡುವ ರೋಗವಾಗಿದೆ. ಪ್ರಮುಖವಾಗಿ ಪ್ರಾಣಿಗಳಿಂದ ಹರಡುವ ರೋಗವಾಗಿದೆ. ಇತ್ತೀಚೆಗೆ ಬ್ರಿಟನ್ ಸೇರಿದಂತೆ ಇತರ ಕೆಲ ರಾಷ್ಟ್ರಗಳಲ್ಲಿ ಈ ರೋಗ ಪತ್ತೆಯಾಗಿತ್ತು. ಇದೀಗ ಭಾರತದಲ್ಲಿ ಮೊದಲ ನೋರೋವೈರಸ್ ಕೇಸ್ ಕೇರಳದಲ್ಲಿ ಪತ್ತೆಯಾಗಿದೆ. ಭಾರತದಲ್ಲಿ ಕೊರೋನಾ ಮೊದಲ ಪ್ರಕರಣ ಕೂಡ ಕೇರಳದಲ್ಲಿ ಪತ್ತೆಯಾಗಿತ್ತು. ಇದೀಗ ಕೇರಳ ಮಾತ್ರವಲ್ಲ ಭಾರತೀಯರ ಆತಂಕ ಕೂಡ ಹೆಚ್ಚಾಗಿದೆ  

ವಿದೇಶಗಳಲ್ಲಿ ರೂಪಾಂತರಿ ವೈರಸ್‌ ಉಲ್ಬಣ: ಸೋಂಕು ಪತ್ತೆಗೆ BBMP ಹೊಸ ಪ್ಲಾನ್‌..!

ನೋರೋವೈರಸ್ ಜಠರ, ಕರಳು ಸೇರಿದಂತೆ ಹೊಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ನೋರೋವೈರಸ್ ಬಾಧಿತರಲ್ಲಿ ಕರುಳಿನ ಒಳಪದರದಲ್ಲಿ ಉರಿಯೂತ ಕಂಡುಬರುತ್ತದೆ. ಜೊತೆಗೆ ತೀವ್ರವಾದ ವಾಂತಿ ಹಾಗೂ ಅತಿಸಾರ ಲಕ್ಷಗಳು ಕಂಡಬರುತ್ತದೆ. ನೋರೋವೈರಸ್ ಆರೋಗ್ಯವಂತರಲ್ಲಿ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ ಮಕ್ಕಳು, ವಯಸ್ಕರು ಹಾಗೂ ಇತರ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ತೀವ್ರ ಪರಿಣಾಮ ಬೀರಲಿದೆ. 

ಪ್ರಾಣಿಗಳಿಂದ ಹರಡು ಈ ರೋಗ ಸೋಂಕಿತರ ನೇರ ಸಂಪರ್ಕದಿಂದ ಹರಡಲಿದೆ. ಸೋಂಕಿತ ವ್ಯಕ್ತಿಯ ವಾಂತಿ ಹಾಗೂ ಮಲ ವಿಸರ್ಜನೆಯಿಂದ ವೈರಸ್ ಅತೀ ವೇಗವಾಗಿ ಹರಡುತ್ತದೆ. ಈ ರೋಗದ ಸಾಮಾನ್ಯ ಲಕ್ಷಣ ಎಂದರೆ ವಾಂತಿ, ಅತಿಸಾರ, ತೀವ್ರ ಹೊಟ್ಟೆ ನೋವು, ವಾಕರಿಕೆ, ಜ್ವರ, ತಲೆನೋವು, ಮೈಕೈ ನೋವು ಕಾಣಿಸಿಕೊಳ್ಳಲಿದೆ. ಇದು ತೀವ್ರ ಅಸ್ವಸ್ಥತೆಯನ್ನು ತರಲಿದೆ.

Uttar Pradesh : ಝೀಕಾ ಪ್ರಕರಣಗಳು ದಿನದಿನವೂ ಭಾರೀ ಏರಿಕೆ

ನೋರೋವೈರಸ್ ಕುರಿತು ಜಾಗರೂಕರಾಗಿಬೇಕು ಎಂದು ಕೇರಳ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಈ ಮಾರ್ಗಸೂಚಿ ಪ್ರಕಾರ ಶುಚಿತ್ವ ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ. ಸುತ್ತಮುತ್ತಲಿನ ಪರಿಸರ ಶುಚಿತ್ವ ಕಾಪಾಡಿಕೊಳ್ಳಬೇಕು. ಇದರ ಜೊತೆಗೆ ವೈಯುಕ್ತಿ ಶುಚಿತ್ವಕ್ಕೂ ಪ್ರಾಮುಖ್ಯತೆ ನೀಡಬೇಕು. ವೈದ್ಯರ ಸೂಚನೆಯಿಂದ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಕೈಗಳನ್ನು ಸೋಪಿಲ್ಲಿ ಶುಚಿಯಾಗಿ ತೊಳೆಯಬೇಕು. ಇನ್ನು ಸಾಕು ಪ್ರಾಣಿಗಳಿರುವ ಮನೆಯಲ್ಲಿ, ಪ್ರಾಣಿಗಳನ್ನು ಸಾಕುತ್ತಿರುವವರು ಹೆಚ್ಚಿನ ಶುಚಿತ್ವ ಕಾಪಾಡಿಕೊಳ್ಳಬೇಕು. ಕುಡಿಯುವ ನೀರಿ ಮೂಲಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ. ತರಕಾರಿಳನ್ನು ಸರಿಯಾಗಿ ತೊಳೆದು ಬಳಕೆ ಮಾಡಬೇಕು. ಇನ್ನು ಮೀನು, ಮಾಂಸ ಸೇರಿದಂತೆ ಇತರ ಮಾಂಸಾಹಾರಗಳನ್ನು ಸರಿಯಾಗಿ ಬೇಯಿಸಿ ಸೇವಿಸಬೇಕು. 

ಸೂಕ್ತ ಚಿಕಿತ್ಸೆಯಿಂದ ಸೋಂಕಿತರನ್ನು ಅಪಾಯದಿಂದ ಪಾರುಮಾಡಬಹುದು. ಯಾರು ಆತಂಕ ಪಡುವ ಅಗತ್ಯವಿಲ್ಲ, ಆದರೆ ಎಚ್ಚರಿಕೆ ಅತೀ ಅಗತ್ಯವಾಗಿದೆ. ಹೀಗಾಗಿ ರೋಗ ಹರದಂಡೆ ಮಾಡಲು ನೋರೋವೈರಸ್ ಕುರಿತು ಮಾಹಿತಿಯನ್ನು ಎಲ್ಲರೂ ಪಡೆದಿರಬೇಕು. ಮುಂಜಾಗ್ರತ ಕ್ರಮಗಳ ಕುರಿತು ಸ್ಪಷ್ಟ ಅರಿವಿರಬೇಕು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ವಯಾನಾಡಿನ ಕಾಲೇಜು ವಿದ್ಯಾರ್ಥಿಗಳಲ್ಲಿ ನೋರೋವೈರಸ್ ಕಾಣಿಸಿಕೊಂಡಿರುವುದು ದೃಢಪಟ್ಟಿದೆ. 1968ರಲ್ಲಿ ಮೊದಲ ಬಾರಿಗೆ ಅಮೆರಿಕದಲ್ಲಿ ನೋರೋವೈರಸ್ ಕಾಣಿಸಿಕೊಂಡಿತ್ತು. ಆದರೆ 1932ರಲ್ಲಿ ನೋರೋವೈರಸ್ ಪತ್ತೆಯಾಗಿತ್ತು. 

Follow Us:
Download App:
  • android
  • ios