ಮದುವೆ ವೇಳೆ ಮೂರ್ಛೆ ಹೋದ ವರ ಮೂರ್ಛೆ ಹೋದ ಪರಿಣಾಮ ಹಾರಿದ ವಿಗ್‌ ಬೋಳು ತಲೆ ನೋಡಿ ಮದುವೆಗೆ ನಿರಾಕರಿಸಿದ ವಧು

ಉನ್ನಾವೋ: ಮದುವೆ ಗಂಡಿನ ತಲೆಯಲ್ಲಿ ಕೂದಲಿಲ್ಲ ಎಂದು ವಧು (Bride) ಮದುವೆ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಉನ್ನಾವೋದಲ್ಲಿ (Unnao) ನಡೆದಿದೆ. ಭಾರತದಲ್ಲಿ ಕೆಲವು ಮದುವೆಗಳಲ್ಲಿ ನಡೆಯುಬ ಸೀನ್‌ಗಳು ಯಾವ ಸಿನಿಮಾಗಳಿಗೂ ಕಡಿಮೆ ಇರುವುದಿಲ್ಲ. ಮದುವೆಯಲ್ಲಿ ತಮಗೆ ಬೇಕಾದ ಆಹಾರ ತಯಾರಿಸಲಿಲ್ಲ, ವರದಕ್ಷಿಣೆ ಹಣ ಇನ್ನು ತಲುಪಿಲ್ಲ. ದಿಬ್ಬಣ ಸಮಯಕ್ಕೆ ಸರಿಯಾಗಿ ಆಗಮಿಸಿಲ್ಲ ಮುಂತಾದ ಹಲವಾರು ಕಾರಣಕ್ಕೆ ಮದುವೆ ನಿಂತ ಘಟನೆಗಳನ್ನು ನೀವು ಈಗಾಗಲೇ ಕೇಳಿರಬಹುದು. ಈಗ ಇಲ್ಲಿ ವಧು ವರ ಬಾಂಡ್ಲಿಯಾಗಿದ್ದಾನೆ ಆತನ ತಲೆಯಲ್ಲಿ ಕೂದಲಿಲ್ಲ ಎಂದು ತಿಳಿದು ಮದುವೆ ನಿರಾಕರಿಸಿದ್ದಾಳೆ. 

Add Asianetnews Kannada as a Preferred SourcegooglePreferred

ಇಲ್ಲಿ ವರ ತನ್ನ ಬೋಳು ತಲೆಯನ್ನು ವಿಗ್‌ನಿಂದ ಮುಚ್ಚಿದ್ದ, ಇದು ಮದುವೆ ಸಮಯದಲ್ಲಿ ವಧುವಿಗೆ ತಿಳಿದಿದ್ದು ಸಿಟ್ಟುಗೊಂಡ ಆಕೆ ಮದುವೆ ನಿರಾಕರಿಸಿದ್ದಾಳೆ. ಈ ಘಟನೆಯು ಖಂಡಿತವಾಗಿಯೂ ನಿಮಗೆ ಆಯುಷ್ಮಾನ್ ಖುರಾನಾ ಅವರ 2019 ರ ಚಲನಚಿತ್ರ 'ಬಾಲಾ'ವನ್ನು ನೆನಪಿಸುತ್ತದೆ. ಈ ಸಿನಿಮಾದ ಕತೆಯೂ ಹೀಗೆ ಇದ್ದು, ಅಕಾಲಿಕ ಬೋಳು ತಲೆಯಿಂದ ಬಳಲಿದ್ದ ಆತ ಮದುವೆಯಾಗುವ ಹುಡುಗಿಯಿಂದ ಆ ವಿಚಾರವನ್ನು ಮರೆಮಾಚುವ ಕತೆಯನ್ನು ಹೊಂದಿದೆ. 

ವರ ವಿಗ್‌ ಧರಿಸಿದ್ದು ತಿಳಿದು ಮಂಟಪದಲ್ಲೇ ಮೂರ್ಛೆ ಹೋದ ವಧು... ಮದುವೆ ರದ್ದು

ಈ ಉನ್ನಾವೋ (Unnao) ಘಟನೆಯಲ್ಲಿಯೂ ಮದುವೆಯ ಅರ್ಧದಷ್ಟು ಸಂಪ್ರದಾಯಗಳು ಮುಗಿದು ಇನ್ನೇನು ಅಂತಿಮ ವಿಧಿಯಷ್ಟೇ ಬಾಕಿ ಇತ್ತು. ಈ ವೇಳೆ ವರ ಮೂರ್ಛೆ ತಪ್ಪಿ ಬಿದ್ದಿದ್ದು, ಇದರಿಂದ ವರ ಧರಿಸಿದ್ದ ವಿಗ್ ನೆಲಕ್ಕೆ ಬಿದ್ದಿದೆ. ಪರಿಣಾಮ ವರನ ತಲೆಯಲ್ಲಿ ಕೂದಲೇ ಇಲ್ಲ ಎಂಬುದು ಎಲ್ಲರಿಗೂ ತಿಳಿದು ಹೋಗಿದ್ದು, ಇದು ಮದುವೆಯ ಸನ್ನಿವೇಶವನ್ನೇ ಕ್ಷಣದಲ್ಲಿ ಬದಲಾಯಿಸಿದೆ. ಇತ್ತ ವಧುವಿನ ಕುಟುಂಬದವರಿಂದ ವರನ ಈ ಬೋಳು ತಲೆಯನ್ನು ವಿಗ್‌ (wig) ಧರಿಸುವ ಮೂಲಕ ಮುಚ್ಚಿಡಲಾಗಿತ್ತು. 

ಹೀಗಾಗಿ ವರನ ಬೋಳು ತಲೆಯನ್ನು ಮದುವೆ ಮಂಟಪದಲ್ಲಿ ನೋಡಿದ ವಧು ಮದುವೆಯಾಗಲು ನಿರಾಕರಿಸಿದಳು. ಅನೇಕರು ಅವಳನ್ನು ಮನವೊಲಿಸಲು ಮತ್ತು ಮದುವೆಗಯಾಗುವಂತೆ ಮನವೊಲಿಸಲು ಮುಂದಾದರು ಆದರೆ ವಧು ತನ್ನ ನಿಲುವಿನಲ್ಲಿ ದೃಢವಾಗಿ ಉಳಿದು ಮದುವೆಯನ್ನು ರದ್ದುಗೊಳಿಸಿದಳು. ಈ ವಿಷಯ ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿ ಪೊಲೀಸರು ಮಧ್ಯಪ್ರವೇಶಿಸಿ ಸಂಧಾನ ಮಾಡಲು ಯತ್ನಿಸಿದರು ವಧು ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ. ನಂತರ ಪೊಲೀಸರೇ ಪಂಚಾಯತಿ ನಡೆಸಿದ್ದಾರೆ. ಮದುವೆಗೆ 5.66 ಲಕ್ಷ ಖರ್ಚು ಮಾಡಿದ್ದೇವೆ ಎಂದು ವಧುವಿನ ಮನೆಯವರು ತಿಳಿಸಿದ್ದಾರೆ. ನಂತರ ವರನ ಕಡೆಯವರು ಅವರ ಬೇಡಿಕೆಗೆ ಸಮ್ಮತಿಸಿ ವಧುವಿನ ತಂದೆಗೆ (Father) ಹಣವನ್ನು ಹಿಂದಿರುಗಿಸಿದ್ದಾರೆ.

ಮಟನ್ ಊಟವಿಲ್ಲವೆಂದು ಮದುವೆ ಮುರಿದು, ಬೇರೊಬ್ಬಾಕೆಗೆ ತಾಳಿ ಕಟ್ಟಿದ 'ಮದುಮಗ'!

ಪರಿಣಾಮ ವರ (Groom) ಹಾಗೂ ಆತನ ಸಂಬಂಧಿಗಳು ವಧು ಇಲ್ಲದೇ ತಮ್ಮೂರಿಗೆ ತೆರಳುವಂತಾಯಿತು. ವಧುವಿನ ಚಿಕ್ಕಪ್ಪ ಮಾತನಾಡಿ, ವರನ ಮನೆಯವರು ಬೋಳು ಎಂಬ ವಿಷಯವನ್ನು ಮುಚ್ಚಿಡಬಾರದಿತ್ತು. ಆಗ ನಾವು ವಧುವನ್ನು ಮಾನಸಿಕವಾಗಿ ಸಿದ್ಧಪಡಿಸಬಹುದಿತ್ತು ಮತ್ತು ಅವಳು ಆಘಾತಕ್ಕೊಳಗಾಗುತ್ತಿರಲಿಲ್ಲ. ಮದುವೆಯು ಸುಳ್ಳಿನ ಮೇಲೆ ಉಳಿಯುತ್ತದೆ ಎಂದು ನಾವು ನಿರೀಕ್ಷಿಸಬಾರದು ಎಂದು ಹೇಳಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಧು ತಾನು ಮದುವೆಗೆ ಸಿದ್ಧವಾಗಿಲ್ಲ ಮತ್ತು ಎರಡು ಪಕ್ಷಗಳ ನಡುವೆ ರಾಜಿ ಮಾಡಿಕೊಳ್ಳಲಾಗಿದೆ ಎಂದು ಪರಿಯಾರ್ ಪೊಲೀಸ್ ಔಟ್-ಪೋಸ್ಟ್ ಉಸ್ತುವಾರಿ ರಾಮ್‌ಜೀತ್ ಯಾದವ್ (Ramjeet Yadav) ಸುದ್ದಿಗಾರರಿಗೆ ತಿಳಿಸಿದ್ದಾರೆ.