* ಊಟಕ್ಕೆ ಮಟನ್ ಇಲ್ಲವೆಂದು ಮದುವೆ ರದ್ದು* ಮದುವೆ ನಿಗಧಿಯಾಗಿದ್ದ ಯುವತಿಯನ್ನು ಬಿಟ್ಟು, ಬೇರೊಬ್ಬಾಕೆಗೆ ತಾಳಿ ಕಟ್ಟಿದ ಯುವಕ* ಮದುವೆಗೂ ಮೊದಲೇ ಮಟನ್ ಬೇಕೆಂದು ಹೇಳಿದ್ದ ಮದುಮಗ

ಭುವನೇಶ್ವರ(ಜೂ.29): ಮದು​ವೆಯ ಊಟಕ್ಕೆ ಮಟನ್‌ ಮಾಡಿಲ್ಲ ಎಂಬ ಕಾರ​ಣಕ್ಕೆ ಜಗಳ ತೆಗೆದು ಮದು​ವೆ​ಯನ್ನೇ ರದ್ದು​ಪ​ಡಿ​ಸಿದ್ದ ವರ​ನೊಬ್ಬ, ಮನೆಗೆ ತೆರ​ಳುವ ಮುನ್ನ ಇನ್ನೊಬ್ಬ ಮಹಿಳೆಯ ಜೊತೆ ಮದುವೆ ಆಗಿ​ರುವ ವಿಚಿತ್ರ ಘಟ​ನೆ​ಯೊಂದು ನಡೆ​ದಿದೆ. 

ಜೈಪು​ರದ ಕಿಯೋ​ಝರ್‌ ಜಿಲ್ಲೆಯ ನಿವಾ​ಸಿ​ಯಾದ ಪಾತ್ರ ಎಂಬಾತ ನಿಶ್ಚ​ಯ​ದಂತೆ ಸುಕಿಂದಾ ಗ್ರಾಮದ ಯುವ​ತಿ​ಯನ್ನು ಮದುವೆ ಆಗ​ಬೇ​ಕಿತ್ತು. ಮಧ್ಯಾಹ್ನದ ವೇಳೆ​ಗೆ ಮದುವೆ ದಿಬ್ಬಣ ಆಗ​ಮಿ​ಸಿ​ದ್ದ​ರಿಂದ ಗಂಡಿನ ಮನೆ​ಯ​ವ​ರನ್ನು ನೇರ​ವಾ​ಗಿ ಊಟಕ್ಕೆ ಕರೆ​ದೊ​ಯ್ಯ​ಲಾ​ಗಿತ್ತು. ಆದರೆ, ಊಟಕ್ಕೆ ಮಟನ್‌ ಅನ್ನು ಮಾಡದೇ ಇದ್ದಿ​ದ್ದಕ್ಕೆ ಜಗಳ ತೆಗೆದ ವರ ಮದು​ವೆ​ಯ​ನ್ನು ರದ್ದು​ಗೊ​ಳಿ​ಸಿದ್ದಾನೆ.

ಬಿರಿಯಾನಿ ಊಟದ ನಂತರ ಕೈ ತೊಳಿತಾ ಇರ್ಲಿಲ್ವಂತೆ ಅಣ್ಣಾವ್ರು! ಯಾಕಂತೆ ಗೊತ್ತಾ?

ಮೂಲಗಳ ಪ್ರಕಾರ ಮದುವೆಗೂ ಮುನ್ನ ನಡೆದ ವರನ ಕಡೆಯವರಿಗೆ ಮದುವೆ ನಡೆಯುವ ಗ್ರಾಮದಲ್ಲಿ ಔತಣಕೂಟ ಆಯೋಜನೆ ಮಾಡಲಾಗಿತ್ತು. ಈ ಔತಣಕೂಟದಲ್ಲಿ ಮಟನ್ ಅಡುಗೆ ಮಾಡಿಸುವಂತೆ ವರನ ಕಡೆಯವರು ಕೇಳಿದ್ದರು. ಆದರೆ ವಧುವಿನ ಕಡೆಯವರು ಮಟನ್ ಅಡುಗೆ ಮಾಡಿಸಿರಲಿಲ್ಲ. ಇದೇ ಕಾರಣಕ್ಕೆ ಆಕ್ರೋಶಗೊಂಡ ರಾಮಕಾಂತ್ ಪತ್ರಾ ವಧುವಿನ ಸಂಬಂಧಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ. ವಧುವಿನ ಕುಟುಂಬ ಸದಸ್ಯರು ಮನವಿ ಮಾಡಿದರೂ, ಆತ ಸಮಾಧಾನಗೊಳ್ಳಲಿಲ್ಲ. ಅಲ್ಲದೆ ಮದುವೆಯನ್ನೇ ಮುರಿದುಕೊಂಡು, ಹೋಗಿದ್ದಾನೆ. 

ನಾನ್‌ವೆಜ್‌ ಪ್ರಿಯರೇ ಎಚ್ಚರ: ಕುರಿ ಮಾಂಸದೊಂದಿಗೆ ಮಿಕ್ಸ್‌ ಆಗ್ತಿದೆ ದನದ ಮಾಂಸ..!

ಬಳಿಕ ಆತ ತನ್ನ ಸಂಬಂಧಿ​ಕರ ಮನೆಗೆ ತೆರ​ಳಿ ಅಲ್ಲಿಯೇ ಉಳಿ​ದು​ಕೊಂಡಿದ್ದ. ಸಂಬಂಧಿಕರ ಮಾತಿನಂತೆ ತಮ್ಕಾ ಪೊಲೀಸ್ ವ್ಯಾಪ್ತಿಯಲ್ಲಿ ಫುಲಾಜರಾ ಪ್ರದೇಶದ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂದು ಹೇಳಲಾಗಿದೆ.