ಜೂ.9ಕ್ಕೆ ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ, ಮೋದಿ ಭಾಗಿ!

ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟಿಡಿಪಿ ಇದೀಗ ಸರ್ಕಾರ ರಚನೆ ತಯಾರಿ ನಡೆಸಿದೆ. ಜೂನ್ 9ಕ್ಕೆ ಚಂದ್ರಬಾಬು ನಾಯ್ದು ಆಂಧ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ. 
 

Andhra Pradesh Assembly Election result TDP Chandra Chandrababu Naidu take oath as CM on June 9th ckm

ವಿಶಾಖಪಟ್ಟಣಂ(ಜೂನ್ 04) ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ದು ಫೀನಿಕ್ಸ್‌ನಂತೆ ಎದ್ದಿದ್ದಾರೆ. ಜೈಲುವಾಸದಿಂದ ರಾಜಕೀಯ ಮುಗಿದೇ ಹೋಯ್ತು ಎಂದುಕೊಡವರಿಗೆ ತಕ್ಕ ಉತ್ತರ ನೀಡಿದ್ದಲ್ಲದೆ, ಎನ್‌ಡಿಎ ಸರ್ಕಾರ ರಚನೆಗೂ ಟಿಡಿಪಿ ಬೆಂಬಲ ಅತ್ಯಗತ್ಯವಾಗಿದೆ.  ಕಿಂಗ್ ಮೇಕರ್ ಪಟ್ಟದಲ್ಲಿರುವ ಚಂದ್ರಬಾಬು ನಾಯ್ಡು ಇದೀಗ ಜೂನ್ 9 ರಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟದಲ್ಲಿರುವ ಟಿಡಿಪಿ ಸೆಳೆಯಲು ಇಂಡಿಯಾ ಮೈತ್ರಿ ಭಾರಿ ಕಸರತ್ತು ನಡೆಸುತ್ತಿದೆ. ಇದರ ನಡುವೆ ನಾಯ್ಡು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಪಾಲ್ಗೊಳ್ಳುವ ಭರವಸೆ ನೀಡಿದ್ದು, ಎನ್‌ಡಿಎ ಮೈತ್ರಿ ಗಟ್ಟಿಗೊಳಿಸುವ ಪ್ರಯತ್ನ ಮಾಡಿದ್ದಾರೆ.

ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಪಕ್ಷ 158 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅಧಿಕಾರರೂಡ ಜಗನ್ ಮೋಹನ್ ರೆಡ್ಡಿವೈಎಸ್ಆರ್ ಕಾಂಗ್ರೆಸ್ ನೆಲಕಚ್ಚಿದೆ. 178 ಸ್ಥಾನಗಳ ಪೈಕಿ ಅಭೂತಪೂರ್ವ ಗೆಲುವು ಕಂಡಿರುವ ಟಿಡಿಪಿ ಯಾವುದೇ ಅಡೆ ತಡೆ  ಇಲ್ಲದೆ ಸರ್ಕಾರ ರಚಿಸಲಿದೆ.

ಅತ್ತೂ ಕರೆದರೂ ಆಪ್ ಕೈಹಿಡಿಯದ ಮತದಾರ, ದೆಹಲಿಯ 7 ಸ್ಥಾನದಲ್ಲಿ ಬಿಜೆಪಿ ಮುನ್ನಡೆ!

74 ವರ್ಷದ ಚಂದ್ರಬಾಬು ನಾಯ್ಡು ನಾಲ್ಕನೇ ಬಾರಿಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆಂಧ್ರ ಪ್ರದೇಶ ತೆಲಂಗಾಣ ವಿಭಜನೆಗೂ ಮೊದಲು 1995ರಿಂದ 2004ರ ವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. 2019ರಲ್ಲಿ ಜಗನ್ ಮೋಹನ್ ರೆಡ್ಡಿಯ ವೈಎಸ್ಆರ್ ಕಾಂಗ್ರೆಸ್ ವಿರುದ್ದ ಹೀನಾ ಸೋಲು ಕಂಡಿತ್ತು. ಬಳಿಕ ಜಗನ್ ಸರ್ಕಾರದಲ್ಲಿ ಚಂದ್ರಬಾಬು ನಾಯ್ಡು ಜೈಲು ಸೇರಿದ್ದರು. ಈ ವೇಳೆ ಚಂದ್ರಬಾಬು ನಾಯ್ಡು ರಾಜಕೀಯ ಕರಿಯರ್ ಅಂತ್ಯಗೊಂಡಿದೆ ಎಂದವರೇ ಹೆಚ್ಚು. ಆದರೆ ಮತ್ತೆ ಅಭೂತಪೂರ್ವ ಗೆಲುವಿನೊಂದಿಗೆ ನಾಯ್ಡು ಅಧಿಕಾರಕ್ಕೇರಿದ್ದಾರೆ.

ಇನ್ನು ಲೋಕಸಭಾ ಚುನಾವಣೆಯಲ್ಲಿ 35 ಕ್ಷೇತ್ರಗಳ ಬೈಕಿ 16 ಕ್ಷೇತ್ರದಲ್ಲಿ ಟಿಡಿಪಿ ಮುನ್ನಡೆ ಕಾಯ್ದುಕೊಂಡಿದೆ. ಉತ್ತರ ಭಾರತದಲ್ಲಿ ಬಿಜೆಪಿಗೆ ತೀವ್ರ ಪೆಟ್ಟು ಬಿದ್ದಿದೆ. ಆದರೆ ದಕ್ಷಿಣ ಭಾರತದಲ್ಲಿ ಎನ್‌ಡಿಎಗೆ ಜನರು ಓಲವು ತೋರಿದ್ದಾರೆ.  ಇತ್ತ ಚಂದ್ರಬಾಬು ನಾಯ್ಡುವನ್ನು ಸೆಳೆಯಲು ಇಂಡಿಯಾ ಒಕ್ಕೂಟ ಪ್ರಯತ್ನ ಮಾಡುತ್ತಿದೆ ಅನ್ನೋ ವರದಿಗಳು ಬಹಿರಂಗವಾಗಿದೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಇಂಡಿಯಾ ಒಕ್ಕೂಟ ಆಫರ್ ನೀಡಿದೆ ಅನ್ನೋ ಮಾಹಿತಿಗಳು ಲಭ್ಯವಾಗಿದೆ. ಅತ್ತ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಸೆಳೆಯಲೂ ಪ್ರಯತ್ನಗಳು ನಡೆಯುತ್ತಿದೆ. ಹೀಗಾಗಿ  ಅಂತಿಮ ಹಂತದವರೆಗೂ ತೀರ್ಪು ಹಾಗೂ ಸರ್ಕಾರ ರಚನೆ ಹಲವು ತಿರುವು ಪಡೆಯುವ ಸಾಧ್ಯತೆ ಇದೆ.

ರಾಮಜನ್ಮ ಭೂಮಿ ಆಯೋಧ್ಯೆಯಲ್ಲೇ ಬಿಜೆಪಿಗೆ ಹಿನ್ನಡೆ, ಇಂಡಿಯಾ ಮೈತ್ರಿಗೆ ಅಭೂತಪೂರ್ವ ಮುನ್ನಡೆ!
 

Latest Videos
Follow Us:
Download App:
  • android
  • ios