ಅತ್ತೂ ಕರೆದರೂ ಆಪ್ ಕೈಹಿಡಿಯದ ಮತದಾರ, ದೆಹಲಿಯ 7 ಸ್ಥಾನದಲ್ಲಿ ಬಿಜೆಪಿ ಮುನ್ನಡೆ!
ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಹೊರಬಂದು ಪ್ರಚಾರ ಮಾಡಿದರೂ ಮತದಾರರು ಆಪ್ ಕೈಹಿಡಿದಿಲ್ಲ. ದೆಹಲಿಯ ಎಲ್ಲಾ 7 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಬಹುತೇಕ ಗೆಲುವು ಖಚಿತವಾಗಿದೆ.
ನವದೆಹಲಿ(ಜೂನ್ 04) ಲೋಕಸಭಾ ಚುನಾವಣೆ ತೀರ್ಪು ಹಲವು ಅಚ್ಚರಿಗೆ ಕಾರಣವಾಗಿದೆ. ಮತಗಟ್ಟೆ ಸಮೀಕ್ಷೆಗಳು ಉಲ್ಟಾ ಆಗಿದೆ. ಬಿಜೆಪಿ ನಿರೀಕ್ಷೆಗಳು ತಲೆಕೆಳಗಾಗಿದೆ. ಎನ್‌ಡಿಎ 400 ಗಡಿ ದಾಡುವ ಕನಸು ನುಚ್ಚು ನೂರಾಗಿದೆ. ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯಲು ವಿಫಲವಾಗಿದೆ. ಇದರ ನಡುವೆ ದೆಹಲಿಯಲ್ಲಿ ಬಿಜೆಪಿಗೆ ಆಶಾದಾಯಕ ಫಲಿತಾಂಶ ಬರುತ್ತಿದೆ. ಅರವಿಂದ್ ಕೇದ್ರಿವಾಲ್ ಜೈಲಿನಿಂದ ಹೊರಬಂದು ಪ್ರಚಾರ ಮಾಡಿದರೂ, ಆಪ್ ನಾಯಕರು ಅನುಕಂಪದ ಆಧಾರದಲ್ಲಿ ಮತ ಕೇಳಿದರೂ ಪ್ರಯೋಜನವಾಗಿಲ್ಲ. ದೆಹಲಿಯ 7 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ದೆಹಲಿಯ ಒಟ್ಟು 7 ಸ್ಥಾನದಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಗೆಲುವಿನ ಸನಿಹದಲ್ಲಿರುವ ಬಿಜೆಪಿ ಇದೀಗ ಅಧಿಕೃತ ಗೆಲುವು ಘೋಷಣೆಗೆ ಕಾಯುತ್ತಿದೆ. ದೆಹಲಿಯ ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರವೀಣ್ ಖಾಂದೆಲ್‌ವಾಲ್ ಆರಂಭಿಕ ಸುತ್ತುಗಳ ಮತ ಎಣಿಕೆಯಲ್ಲಿ ಹಿನ್ನಡೆ ಅನುಭವಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಜೈ ಪ್ರಕಾಶ್ ವಿರುದ್ದ ಭಾರಿ ಹಿನ್ನಡೆ ಅನುಭವಿಸಿದ್ದರು. ಆದರೆ ಅಂತಿಮ ಸುತ್ತುಗಳ ಹೊತ್ತಿಗೆ ಪ್ರವೀಣ್ ಭಾರಿ ಮುನ್ನಡೆ ಕಾಯ್ದುಕೊಂಡು ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ.
ರಾಮಜನ್ಮ ಭೂಮಿ ಆಯೋಧ್ಯೆಯಲ್ಲೇ ಬಿಜೆಪಿಗೆ ಹಿನ್ನಡೆ, ಇಂಡಿಯಾ ಮೈತ್ರಿಗೆ ...
ನಾರ್ತ್ ಈಸ್ಟ್ ಡೆಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕ ಮನೋಜ್ ತಿವಾರಿ ವಿರುದ್ದ ಕಾಂಗ್ರೆಸ್ ಕನ್ಹಯ್ಯ ಕುಮಾರ್ ಕಣಕ್ಕಿಳಿಸಿತ್ತು. ಆದರೆ ಮನೋಜ್ ತಿವಾರಿ ಬರೋಬ್ಬರಿ 1 ಲಕ್ಷ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ವೆಸ್ಟ್ ಡೆಲ್ಲಿ ಅಭ್ಯರ್ಥಿ ಕಮಲಜೀತ್ ಸೆಹ್ರಾವತ್ 1,23,119 ಮತಗಳನ್ನು ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇತ್ತ ಪ್ರತಿಸ್ಪರ್ಧಿ ಆಪ್ ಅಭ್ಯರ್ಥಿ ಮಹಾಬಲ ಮಿಶ್ರಾ ಸೋಲಿನತ್ತ ಮುಖಮಾಡಿದ್ದಾರೆ.
ಬಿಜೆಪಿ ನಾರ್ತ್ ವೆಸ್ಟ್ ಅಭ್ಯರ್ತಿ ಯೋಗೇಂರ್ ಚಂದೋಲಿಯಾ 1,56056 ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಉದಿತ್ ರಾಜ್ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಈಸ್ಟ್ ಡೆಲ್ಲಿಯ ಆಪ್ ಅಭ್ಯರ್ಥಿ ಕುಲ್ದೀಪ್ ಕುಮಾರ್ ಹಿನ್ನಡೆ ಅನುಭಲಿಸಿದ್ದಾರೆ. ಬಿಜೆಪಿಯ ಹರ್ಷ ಮಲ್ಹೋತ್ರ ವಿರುದ್ದ 34,189 ಮತಗಳ ಹಿನ್ನಡೆ ಅನುಭವಿಸಿದ್ದಾರೆ.
ಬಿಜೆಪಿಗೆ ಕೇರಳದಲ್ಲಿ ಗುಡ್ ನ್ಯೂಸ್, ಸುರೇಶ್ ಗೋಪಿಗೆ ಗೆಲುವು ಬಹುತೇಕ ...
ದಕ್ಷಿಣ ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಮ್‌ವೀರ್ ಸಿಂಗ್ ಬಿಧೂರಿ 90 ಸಾವಿರ ಮತಗಳ ಅಂತರ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇತ್ತ ಪ್ರಬಲ ಸ್ಪರ್ಧೆ ಒಡ್ಡಿದ ಆಪ್ ಅಭ್ಯರ್ಥಿ ಶೈ ರಾಮ್ ಪಹಲ್ವಾನ್ ಸೋಲಿನತ್ತ ಮುಖಮಾಡಿದ್ದಾರೆ. ಸುಷ್ಮಾ ಸ್ವರಾಜ್ ಪುತ್ರಿ, ಬಿಜೆಯ ನವ ದೆಹಲಿ ಕ್ಷೇತ್ರದ ಅಭ್ಯರ್ತಿ ಬನ್ಸುರಿ ಸ್ವರಾಜ್ 47 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.