ಪದ್ಮ ಪ್ರಶಸ್ತಿಯನ್ನು ಏನ್ಮಾಡಿದ್ರು ಗೊತ್ತಾ ಈ 'ಒಂದು ರೂಪಾಯಿ ಡಾಕ್ಟರ್'?
ಪದ್ಮಶ್ರೀ ಪ್ರಶಸ್ತಿ ಘೋಷಣೆ| ಕೇವಲ 1 ರೂಪಾಯಿಗೆ ಬಡ ರೋಗಿಗಳಿಗೆ ಚಿಕಿತ್ಸೆ ನೀಡುವ ಡಾಕ್ಟರ್| ತಮಗೆ ಘೋಷಣೆಯಾದ ಪ್ರಶಸ್ತಿಯನ್ನು ಯಾರಿಗೆ ಅರ್ಪಿಸಿದ್ರು ಗೊತ್ತಾ?
ಕೋಲ್ಕತ್ತಾ[ಜ.27]: ಕೇವಲ 1 ರೂಪಾಯಿಗೆ ಬಡ ರೋಗಿಗಳಿಗೆ ಚಿಕಿತ್ಸೆ ನೀಡುವ ಡಾಕ್ಟರ್ ಎಂದೇ ಪ್ರಸಿದ್ಧರಾಗಿರುವ ಪಶ್ಚಿಮ ಬಂಗಾಳದ ಬೋಲ್ಪುರದ ವೈದ್ಯ ಡಾಕ್ಟರ್ ಸುಶೋವನ್ ಬ್ಯಾನರ್ಜಿ ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಮ್ಮ ಹೆಸರಿಗೆ ಪದ್ಮ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಸುಶೋವನ್ ಇದನ್ನು ಬೇರೆಯವರಿಗೆ ಸಮರ್ಪಿಸಿದ್ದಾರೆ. ಯಾರಿಗೆ ಮುಂದಿದೆ ವಿವರ.
ಈ ಬಾರಿಯೂ ತೆರೆಮರೆ ಸಾಧಕರಿಗೆ ಗೌರವ!
ಈ ಬಾರಿ ಪಶ್ಚಿಮ ಬಂಗಾಳದಿಂದ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ನಾಲ್ವರು ಸಾಧಕರಲ್ಲಿ ಡಾಕ್ಟರ್ ಸುಶೋವನ್ ಕೂಡಾ ಒಬ್ಬರು. ಶನಿವಾರ ಈ ಸಂಬಂಧ ಪ್ರತಿಕ್ರಿಯಿಸುತ್ತಾ ಮಾತನಾಡಿದ ಡಾಕ್ಟರ್'ನಾನು 57 ವರ್ಷಗಳಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ಅವರಿಲ್ಲದಿದ್ದರೆ ಈ ಪದ್ಮಶ್ರೀ ಪ್ರಶಸ್ತಿ ಬರುತ್ತಿರಲಿಲ್ಲ. ಹೀಗಾಗಿ ಈ ಪ್ರಶಸ್ತಿಯನ್ನು ನಾನು ಅವರಿಗೆ ಸಲ್ಲಿಸುತ್ತೇನೆ' ಎಂದಿದ್ದಾರೆ
ಬ್ಯಾನರ್ಜಿ ಹೊರತುಪಡಿಸಿ ಪಶ್ಚಿಮ ಬಂಗಾಳದಲ್ಲಿ ಡಾ. ಅರುಣೋದಯ್ ಮಂಡಲ್, ಖಾಜಿ ಮಾಸೂಮ್ ಅಖ್ತರ್ ಹಾಗೂ ಮಣಿಲಾಲ್ ನಾಗ್ ರವರ ಹೆಸರೂ ಘೋಷಣೆಯಾಗಿದೆ.
ಪದ್ಮಶ್ರೀ ಪಡೆದ ಈ ಲಂಗರ್ ಬಾಬಾ ನಿಮಗೆ ಗೊತ್ತಾ?