ಭಾರತದಲ್ಲಿ ಕೊರೋನಾ ಅಟ್ಟಹಾಸಕ್ಕೆ ಮೊದಲ ವೈದ್ಯ ಬಲಿ!
ದಿನೇ ದಿನೇ ಹೆಚ್ಚುತ್ತಿದೆ ಕೊರೋನಾ ಅಟ್ಟಹಾಸ| ಕೊರೋನಾ ತಾಂಡವಕ್ಕೆ ದೇಶದಲ್ಲಿ ಮೊದಲ ವೈದ್ಯ ಬಲಿ| ನಾಲ್ಕು ದಿನದ ಹಿಂದೆ ಸೋಂಕು ತಗುಲಿರುವುದು ದೃಢವಾಗಿತ್ತು
ಇಂದೋರ್(ಏ.09): ಭಾರತದಲ್ಲಿ ದಿನಗಳೆದಂತೆ ಉಲ್ಭಣಗೊಳ್ಳುತ್ತಿರುವ ಕೊರೋನಾ ವೈರಸ್‌ಗೆ 62 ವರ್ಷದ ವೈದ್ಯನೊಬ್ಬ ಬಲಿಯಾಗಿದ್ದಾರೆ. ಇವರು ದೇಶದಲ್ಲಿ ಡೆಡ್ಲಿ ಕೊರೋನಾಗೆ ಬಲಿಯಾದ ಮೊದಲ ವೈದ್ಯರಾಗಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ನ ವೈದ್ಯನಿಗೆ ವಾರದ ಹಿಂದಷ್ಟೇ ಇವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿತ್ತು. ಬಳಿಕ ಇವರಿಗೆ ಶ್ರೀ ಅರವಿಂದೋ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಇಂದು, ಗುರುವಾಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮೂಲಕ ಈ ವೈದ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇನ್ನು ಮೃತಪಟ್ಟ ವೈದ್ಯ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರಲಿಲ್ಲ ಎಂದೂ ತಿಳಿದು ಬಂದಿದೆ. ಬಡವರ ಪರ ತೀವ್ರ ಕಾಳಜಿ ಹೊಂದಿದ್ದ ಈ ವೈದ್ಯ, ಚಿಕಿತ್ಸೆಗೆ ಹಣವಿಲ್ಲದವರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದರೆಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ.
ಇನ್ನು ವೈದ್ಯರ ಸಾವಿನಿಂದ ಇಂದೋರ್ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೇರಿದ್ದು, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದ ಇಂದೋರ್, ಭೋಪಾಲ್ ಹಾಗೂ ಉಜ್ಜಯನಿಯನ್ನು ಕೊರೋನಾ ವೈರಸ್ ಹಾಟ್‌ಸ್ಪಾಟ್ ಜಿಲ್ಲೆಗಳಾಗಿ ಘೋಷಿಸುವಂತೆ ಆದೇಶಿಸಿದ್ದಾರೆ.