Andhra police: ಆಂಧ್ರ ಪೊಲೀಸ್ ಪೇದೆಯ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
ಅನಂತಪುರ(ನ.27): ಪೊಲೀಸರೆಂದರೆ ಜನರಿಗೆ ಗೌರವಕ್ಕಿಂತ ಜಾಸ್ತಿ ಭಯವೇ. ಜನ ಪೊಲೀಸರನ್ನು ನೋಡಿದ ಕೂಡಲೇ ಸ್ಥಳದಿಂದ ಕಾಲ್ಕಿಳಲು ಪ್ರಯತ್ನಿಸುತ್ತಾರೆ. ಇದಕ್ಕೆ ಕಾರಣ ಕೆಲವು ಪೊಲೀಸರ ದುರ್ವರ್ತನೆ. ಆದರೆ ಈಗ ಪೊಲೀಸರು ಹಾಗೂ ಪೊಲೀಸ್ ಠಾಣೆ ಮೊದಲಿನಂತಿಲ್ಲ. ಪೊಲೀಸರು ಕೂಡ ತಮಗೂ ಮನವೀಯತೆ ಇದೇ ಎಂಬುದನ್ನು ಹಲವು ಸಂದರ್ಭಗಳಲ್ಲಿ ತೋರಿಸಿಕೊಟ್ಟಿದ್ದಾರೆ.
ಪೊಲೀಸ್ ಪೇದೆಯೊಬ್ಬರು ಮಾನವೀಯತೆ ಮೆರೆದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಚಳಿಯಿಂದ ನಡುಗುತ್ತಿದ್ದ ನಿರ್ಗತಿಕ ಮಹಿಳೆಯೊಬ್ಬರಿಗೆ ಪೊಲೀಸ್ ಪೇದೆಯೊಬ್ಬರು ಹೊದಿಕೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಮಾರುತಿ ಪ್ರಸಾದ್ ಎಂಬುವವರೇ ಹೀಗೆ ಮಾನವೀಯತೆ ಮೆರೆದ ಪೊಲೀಸ್ ಪೇದೆ. ಇವರು ಅನಂತಪುರ(Anantapur) ಜಿಲ್ಲೆಯ ಗೂಟಿ ಪೊಲೀಸ್ ಠಾಣೆ(Gooty police station)ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ರಸ್ತೆ ಪಕ್ಕ ಬಿದ್ದಿದ್ದ ನಿರ್ಗತಿಕ ಮಹಿಳೆಯೊಬ್ಬರಿಗೆ ಸಹಾಯ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣ(social Media)ಗಳಲ್ಲಿ ವೈರಲ್ ಆಗಿದೆ. ಇವರ ಕಾರ್ಯಕ್ಕೆ ಆಂಧ್ರ ಪ್ರದೇಶ ಡಿಜಿಪಿ ಗೌತಮ್ ಸಾವಂಗ್(DGP Gautam Sawang) ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬಾಣಂತಿ ಮಹಿಳೆಗೆ ಸಹಾಯ: ಮಾನವೀಯತೆಗೆ ಸಾಕ್ಷಿಯಾದ ಬಳ್ಳಾರಿ ಪೋಲಿಸರು
ಪ್ರಸಾದ್ ಅವರು ನಗರವೊಂದರ ಸಮೀಪ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ನಿರ್ಗತಿಕ ಮಹಿಳೆಯೊಬ್ಬಳು ರಸ್ತೆ ಬದಿ ಬಿದ್ದುಕೊಂಡಿದ್ದು, ಚಳಿಯಿಂದ ನಡುಗುತ್ತಿದ್ದಳು. ಇದನ್ನು ನೋಡಿದ ಪೊಲೀಸ್ ಕಾನ್ಸ್ಟೇಬಲ್ ಮಾರುತಿ ಪ್ರಸಾದ್(Maruti prasad), ತಾವು ಸ್ವತಃ ಧರಿಸಿದ್ದ ವಿಂಟರ್ ಜಾಕೆಟ್(winter-jacket)ನ್ನು ಆಕೆಗೆ ನೀಡಿದ್ದಾರೆ. ಅಲ್ಲದೇ ಆಕೆಗೆ ಸ್ವಲ್ಪ ಹಣವನ್ನು ಕೂಡ ನೀಡಿ ಸಮೀಪದ ನಿರ್ಗತಿಕ ಕೇಂದ್ರಕ್ಕೆ ಆಕೆಯನ್ನು ಕಳುಹಿಸಿ ಕೊಟ್ಟಿದ್ದಾರೆ.
ಫಲ ಕೊಡ್ತು ಆಂಧ್ರ ಪೊಲೀಸರ ಕಾರ್ಯಾಚರಣೆ; ಕುಖ್ಯಾತ ಸೈನೈಡ್ ಕಿಲ್ಲರ್ ಅರೆಸ್ಟ್
ಇತ್ತೀಚೆಗಷ್ಟೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೃದ್ಧ ಮಹಿಳೆಯೊಬ್ಬರಿಗೆ ಆಂಧ್ರಪ್ರದೇಶ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಸ್ವತಃ ತಮ್ಮ ಕೈಯಿಂದಲೇ ಆಕೆಗೆ ಕೈ ತುತ್ತು ನೀಡಿ ಮಾನವೀಯತೆ ವ್ಯಕ್ತಪಡಿಸಿದ್ದರು. ಬಂಟುಮಿಲಿ(Bantumilli area) ಪ್ರದೇಶದಲ್ಲಿ ಪೆದ್ದಣ್ಣ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಶ್ರೀನಿವಾಸ್ ರಾವ್(Srinivasa Rao) ಈ ಜನ ಮೆಚ್ಚುವ ಕಾರ್ಯ ಮಾಡಿದರು. ಇವರ ಕಾರ್ಯವನ್ನು ಶ್ಲಾಘಿಸಿ ಆಂಧ್ರಪ್ರದೇಶ ಪೊಲೀಸ್ ನಿರ್ವಹಿಸುವ ಟ್ವಿಟ್ಟರ್ ಖಾತೆ(twitter account)ಯಲ್ಲಿ ಇವರ ಪೋಟೋವನ್ನು ಹಾಕಲಾಗಿತ್ತು.
ಒಟ್ಟಿನಲ್ಲಿ ಪೊಲೀಸರು ಈಗ ಮಾನವೀಯತೆಯ ಮೆರೆದು ಜನ ಮೆಚ್ಚುಗೆ ಗಳಿಸುತ್ತಿರುವುದು ಉತ್ತಮ ಬೆಳವಣಿಗೆ.