Asianet Suvarna News Asianet Suvarna News

ನಾಯಿಗೇಕೆ ಆಂಧ್ರ ಸಿಎಂ ಮೇಲೆ ಸಿಟ್ಟು: ಜಗನ್ ಪೋಸ್ಟರ್ ಹರಿದು ಹಾಕಿದ ನಾಯಿ ವಿರುದ್ಧ ಕೇಸ್‌

ನಾಯಿಯೊಂದು ರಾಜಕೀಯ ಪಕ್ಷವೊಂದರ ಪೋಸ್ಟರ್ ಹರಿದು ಹಾಕಿದ್ದು, ಈಗ ಆ ನಾಯಿಯ ವಿರುದ್ಧ ಕೇಸು ದಾಖಲಾಗಿದೆ. ಆಂಧ್ರಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 

Andhra Opposition Leader dasari udayasri sarcastically filed complaint against dog for tearing Andhra CM poster akb
Author
First Published Apr 14, 2023, 10:07 AM IST

ವಿಶಾಖಪಟ್ಟಣ/ ಅಮರಾವತಿ:  ಸಾಮಾನ್ಯವಾಗಿ ಒಂದು ಪಕ್ಷದ ಕಾರ್ಯಕರ್ತರು ಇನ್ನೊಂದು ಪಕ್ಷದ ಬ್ಯಾನರ್ ಪೋಸ್ಟರ್‌ಗಳನ್ನು ಹರಿದು ಹಾಕಿ ದ್ವೇಷ ಸಾರುವುದನ್ನು ನೀವು ಕಂಡಿರಬಹುದು ಕೇಳಿರಬಹುದು. ಆದರೆ ರಾಜಕೀಯಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ನಾಯಿಯೊಂದು ರಾಜಕೀಯ ಪಕ್ಷವೊಂದರ ಪೋಸ್ಟರ್ ಹರಿದು ಹಾಕಿದ್ದು, ಈಗ ಆ ನಾಯಿಯ ವಿರುದ್ಧ ಕೇಸು ದಾಖಲಾಗಿದೆ. ಆಂಧ್ರಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 

ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ( Andhra cm Jagan mohan reddy) ಅವರ ಪೋಸ್ಟರ್‌ವೊಂದನ್ನು ಹರಿದು ಹಾಕಿದ ಕಾರಣಕ್ಕೆ ಪೊಲೀಸರು ನಾಯಿಯೊಂದರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡಾದಲ್ಲಿ ಈ ಘಟನೆ ನಡೆದಿದೆ. ನಾಯಿಯೊಂದು ಮುಖ್ಯಮಂತ್ರಿ ಇರುವ ಪೋಸ್ಟರ್‌ ಅನ್ನು ಹರಿದು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್‌ ಆಗಿದೆ. 

510 ಕೋಟಿ ಆಸ್ತಿಯೊಂದಿಗೆ ಆಂಧ್ರದ ಜಗನ್ ದೇಶದ ಅತ್ಯಂತ ಶ್ರೀಮಂತ ಸಿಎಂ: ದೀದೀ ಆಸ್ತಿ ಎಷ್ಟು?

ಆದರೆ ಈ ವಿಚಾರವನ್ನೇ ಸಿಎಂ ಜಗನ್‌  ವ್ಯಂಗ್ಯವಾಡಲು ಬಳಸಿಕೊಂಡು ವಿಪಕ್ಷ ನಾಯಕಿ ದಾಸರಿ ಉದಯಶ್ರೀ (Dasari Udayasri) ಅವರು ನಾಯಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ನಮ್ಮ ಮುಖ್ಯಮಂತ್ರಿಗೆ ಅವಮಾನ ಮಾಡಿರುವ ಈ ನಾಯಿಯನ್ನು ಬಂಧಿಸಿ ಈ ಕೃತ್ಯದ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ವ್ಯಂಗ್ಯ ಮಾಡಿದ್ದಾರೆ. ರಾಜ್ಯದಲ್ಲಿ 151 ಶಾಸಕ ಸ್ಥಾನವನ್ನು ಹೊಂದಿರುವ ಪಕ್ಷವೊಂದರ ನಾಯಕ ಹಾಗೂ ಸಿಎಂ ಅನ್ನು ನಾಯಿಯೊಂದು (Dog)  ಅವಮಾನಿಸಿರುವುದರಿಂದ ರಾಜ್ಯದ 6 ಕೋಟಿ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಹೀಗಾಗಿ ನಾವು ನಮ್ಮ ಪ್ರೀತಿಯ ಸಿಎಂ ಅನ್ನು ಅವಮಾನಿಸಿದ ನಾಯಿಯನ್ನು ಬಂಧಿಸುವಂತೆ ಪೊಲೀಸರಿಗೆ ಮನವಿ ಮಾಡುತ್ತೇವೆ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. 

ಇದಕ್ಕೂ ಮೊದಲು ಜಗ್ಗಣ್ಣ ಮಾ ಭವಿಷ್ಯತು( ಜಗ್ಗಣ್ಣ ನಮ್ಮ ಭವಿಷ್ಯ) ಎಂದು ಬರೆದಿದ್ದ, ಜಗನ್ ಮೋಹನ್ ರೆಡ್ಡಿ ಫೋಟೋವಿದ್ದ ಪೋಸ್ಟರ್‌ವೊಂದನ್ನು ನಾಯಿ ಹರಿದು ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಟಿಡಿಪಿಯ ಹಲವು ನಾಯಕರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಖುಷಿ ಪಟ್ಟಿದ್ದರು. 

ಚುನಾವಣೆ ಹೊಸ್ತಿಲಲ್ಲಿ 3000 ದೇಗುಲ ನಿರ್ಮಾಣಕ್ಕೆ ಮುಂದಾದ ಜಗನ್

 

 

Follow Us:
Download App:
  • android
  • ios