ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಇದೀಗ ಪತ್ನಿ ರಾಧಿಕಾ ಜೊತೆ ಹರಿದ್ವಾರದಲ್ಲಿ ಗಂಗಾ ಪೂಜೆ ನೆರವೇರಿಸಿದ್ದಾರೆ. ಭಕ್ತಿಯಿಂದ ಪೂಜೆ ನೆರವೇರಿಸಿದ ಅನಂತ್ ಅಂಬಾನಿ ರುದ್ರಾಕ್ಷಿ ಮಾಲೆಯನ್ನು ಗೌರವವಾಗಿ ನೀಡಲಾಗಿದೆ.
ಹರಿದ್ವಾರ(ಮೇ.04) ಮುಕೇಶ್ ಅಂಬಾನಿ ಇಬ್ಬರು ಪುತ್ರರ ಪೈಕಿ ಅನಂತ್ ಅಂಬಾನಿ ದೇವರಲ್ಲಿ ಅತೀವ ಭಕ್ತಿ. ಇತ್ತೀಚೆಗೆ ಅನಂತ್ ಅಂಬಾನಿ ಜಾಮ್‌ನಗರದಿಂದ ದ್ವಾರಕಾ ದರ್ಶನ ಮಾಡಲು ಬರೋಬ್ಬರಿ 170 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದರು. ಎಪ್ರಿಲ್ ತಿಂಗಳಲ್ಲಿ ಪಾದಯಾತ್ರೆ ಮಾಡಿದ್ದರೆ, ಇದೀಗ ಅನಂತ್ ಅಂಬಾನಿ ಉತ್ತರಖಂಡದ ಹರಿದ್ವಾರದ ಹರ್ ಕಿ ಪೌರಿಯಲ್ಲಿ ಗಂಗೂ ಪೂಜೆ ನೆರವೇರಿಸಿದ್ದಾರೆ.ಪತ್ನಿ ರಾಧಿಕಾ ಮರ್ಚೆಂಟ್ ಜೊತೆ ಅನಂತ್ ಅಂಬಾನಿ ಗಂಗಾ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಅರ್ಚಕರ ಮಾರ್ಗದರ್ಶನದಂತೆ ಗಂಗೂ ಪೂಜೆ ನೆರವೇರಿಸಿದ್ದಾರೆ.
ಅಂಬಾನಿ ದಂಪತಿಯಿಂದ ಗಂಗಾ ಆರತಿ ಪೂಜೆ
ಗಂಗಾ ವಿಶೇಷ ಪೂಜೆಗೆ ಅನಂತ್ ಅಂಬಾನಿ, ಪತ್ನಿ ರಾಧಿಕಾ ಮರ್ಚೆಂಟ್ ಹಾಗೂ ಕೆಲ ಆಪ್ತರು ಭಾಗಿಯಾಗಿದ್ದರು. ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಬಳಿಕ ಹರ್ ಕಿ ಪೌರಿಯಲ್ಲಿ ಗಂಗಾ ಪೂಜೆಯಲ್ಲಿ ಪಾಲ್ಗೊಂಡರು. ಪವಿತ್ರ ಸ್ನಾದ ಬಳಿಕ ಗಂಗಾ ಆರತಿಯಲ್ಲಿ ಪಾಲ್ಗೊಂಡ ಅಂಬಾನಿ ದಂತಿ ಗಂಗೂ ಪೂಜೆ, ಕ್ಷೀರಾಭಿಷೇಕ ಪೂಜೆ ನಡೆಸಿದ್ದಾರೆ. ಇಬ್ಬರು ಜೊತೆಯಾಗಿ ಹರ್ ಕಿ ಪೌರಿಯಲ್ಲಿ ಪೂಜೆ ನಡೆಸಿದ್ದಾರೆ. ದೇವಸ್ಥಾನದ ಅರ್ಚಕರು ಮಾರ್ಗದರ್ಶನ ನೀಡಿದ್ದಾರೆ.
ಪಾದಯಾತ್ರೆ ನಡುವೆ ಮಹಿಳೆ ಕೊಟ್ಟ 101 ರೂ ಕಾಣಿಕೆ ಸ್ವೀಕರಿಸಿದ ಅನಂತ್ ಅಂಬಾನಿ
ದರ್ಶನ ಪಡೆದ ಸಂತಸ ವ್ಯಕ್ತಪಡಿಸಿದ ಅಂಬಾನಿ
ಹರ್ ಕಿ ಪೌರಿಯಲ್ಲಿ ಭಾರತದ ಶ್ರೀಮಂತ ಉದ್ಯಮಿಯ ಪುತ್ರ ಅನಂತ್ ಅಂಬಾನಿ ಹಾಗೂ ದಂಪತಿಯನ್ನು ನೋಡಿ ಇತರ ಭಕ್ತರು ಪುಳಕಿತರಾಗಿದ್ದಾರೆ. ಜನ ಸಾಮಾನ್ಯರಂತೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪೂಜೆ ಸಲ್ಲಿಸುತ್ತಿರುವ ದೃಶ್ಯ ಹಲವರನ್ನು ಅಚ್ಚರಿಗೊಳಿಸಿತ್ತು. ಇತ್ತ ಅಂಬಾನಿಗೆ ಕುಟುಂಬಕ್ಕೆ ಭದ್ರತೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಹರಿದ್ವಾರಕ್ಕೆ ಆಗಮಿಸಿದ ಅನಂತ್ ಅಂಬಾನಿ ದಂಪತಿಯ್ನು ಗಂಗಾ ಸಭೆಯ ಅಧ್ಯಕ್ಷ ನಿತಿನ್ ಗೌತಮ್ ಸಾಗತಿಸಿದ್ದರು. ಪೂಜೆ, ದೇವರ ದರ್ಶನದ ಬಳಿಕ ಗಂಗಾ ಸಂಭಾಗೆ ಆಗಮಿಸಿದ ಅನಂತ್ ಅಂಬಾನಿ, ಸಂದರ್ಶಕರ ಪುಸ್ತಕದಲ್ಲಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ಸನಾತನ ಧರ್ಮದ ಮೇಲೆ ಅತೀವ ನಂಬಿಕೆ-ಗೌರವ
ಅನಂತ್ ಅಂಬಾನಿ ದಂಪತಿ ದೇವರ ದರ್ಶನ, ಪೂಜೆ ನಡೆಸಿ ಹಿಂತಿರುಗ್ಗಿದ್ದಾರೆ. ಈ ಕುರಿತು ಮಾತಾಡಿದ ಗಂಗಾ ಸಭಾ ಅಧ್ಯಕ್ಷ ನಿತಿನ್ ಗೌತಮ್, ಗಂಗಾ ಮಾತೆಯನ್ನು ಅಂಬಾನಿ ದಂಪತಿ ಪೂಜಿಸಿದ್ದಾರೆ. ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗಂಗಾ ಮಾತೆ ಅನಂತ್ ಅಂಬಾನಿ ಕುಟುಂಕ್ಕೆ ಆಶೀರ್ವಾದ ಮಾಡಲಿ. ಅನಂತ್ ಅಂಬಾನಿ ಮುಂದಿನ ದಿನಗಳಲ್ಲಿ ಭಾರತದ ಹಾಗೂ ವಿಶ್ವದ ನಂಬರ್ 1 ಉದ್ಯಮಿಯಾಗಲಿದೆ ಎಂದು ಹಾರೈಸಿದ್ದಾರೆ. ಅನಂತ್ ಅಂಬಾನಿ ಶ್ರೀಮಂತ ಕುಟುಂಬದ ಕುಡಿ. ಹಲವು ಉದ್ಯಮಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆದರೆ ಸನಾತನ ಧರ್ಮದ ಮೇಲೆ ಅಪಾರ ಗೌರವ ಹಾಗೂ ನಂಬಿಕೆ ಇಟ್ಟುಕೊಂಡಿದ್ದಾರೆ. ಸನಾತನ ಧರ್ಮದ ಸಂಪ್ರದಾಯ, ಪರಂಪರೆಯನ್ನು ಅರಿತುಕೊಂಡಿದ್ದಾರೆ. ಇದು ಹೆಮ್ಮೆ ಏನಿಸುತ್ತಿದೆ ಎಂದು ನಿತಿನ್ ಗೌತಮ್ ಹೇಳಿದ್ದಾರೆ.ಇದೇ ಮೊದಲ ಬಾರಿಗೆ ಅಂಬಾನಿ ಕುಟುಂಬ ಹರಿದ್ವಾರಕ್ಕೆ ಆಗಮಿಸಿದೆ ಎಂದಿದ್ದಾರೆ.
ಪಾದಯಾತ್ರೆ ಮೂಲಕ ದ್ವಾರಕಾಗೆ ಅನಂತ್ ಅಂಬಾನಿ, ಹುಟ್ಟುಹಬ್ಬಕ್ಕೆ ಶ್ರೀಕೃಷ್ಣನ ದರ್ಶನ


