ಅನಂತ್ ಅಂಬಾನಿ ಧಾರ್ಮಿಕ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ತನ್ನ 30ನೇ ಹುಟ್ಟು ಹಬ್ಬಕ್ಕೆ ಅನಂತ್ ಅಂಬಾನಿ ಶ್ರೀಕೃಷ್ಣನ ದರ್ಶನ ಪಡೆಯಲು ದ್ವಾರಕಾಗೆ ಪಾದಯಾತ್ರೆ ಆರಂಭಿಸಿದ್ದಾರೆ.
ದ್ವಾರಕ(ಮಾ.31) ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಶ್ರೀರಾಮ ಹಾಗೂ ಶ್ರೀಕೃಷ್ಣನ ಭಕ್ತ. ಹಲವು ಬಾರಿ ಅನಂತ್ ಅಂಬಾನಿ ತಮ್ಮ ಭಕ್ತಿಯನ್ನು ತೋರ್ಪಡಿಸಿದ್ದಾರೆ. ಶ್ರೀಮಂತ ಉದ್ಯಮಿ ಪುತ್ರ ಅನಂತ್ ಅಂಬಾನಿ ತಮ್ಮ 30ನೇ ವರ್ಷದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಧಾರ್ಮಿಕವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಶ್ರೀಕೃಷ್ಣನ ದ್ವಾರಕಾ ನಗರಿಗೆ ಪಾದಯಾತ್ರೆ ಮೂಲಕ ತೆರಳಿದ್ದಾರೆ. ಇದು ಹಾಗಂತ ಅನಂತ್ ಅಂಬಾನಿ ದ್ವಾರಕ ಹತ್ತಿರದಿಂಂದ ಕೈಗೊಂಡ ಪಾದಯಾತ್ರೆ ಇದಲ್ಲ, ಬರೋಬ್ಬರಿ 12 ರಿಂದ 13 ದಿನದ ಪಾದಯಾತ್ರೆ ಇದು. ತಮ್ಮ ಹುಟ್ಟು ಹಬ್ಬಕ್ಕೆ ಶ್ರೀಕೃಷ್ಣನ ದರ್ಶನವನ್ನು ಪದಯಾತ್ರೆ ಮೂಲಕ ಮಾಡಲು ಅನಂತ್ ಅಂಬಾನಿ ನಿರ್ಧರಿಸಿದ್ದಾರೆ. ಯುವ ಉದ್ಯಮಿಯ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜಾಮ್‌ನಗರದಿಂದ ದ್ವಾರಕಾಗೆ ಪಾದಯಾತ್ರೆ
ಅನಂತ್ ಅಂಬಾನಿ ಗುಜರಾತ್‌ನ ಜಾಮನಗರದಿಂದ ದ್ವಾರಕಾಗೆ ಪಾದಯಾತ್ರೆ ಆರಂಭಿಸಿದ್ದಾರೆ. ಜಾಮ್‌ನಗರದಲ್ಲಿರುವ ರಿಲಯನ್ಸ್ ಇಂಡಸ್ಟ್ರಿ ಟೌನ್‌ಶಿಪ್‌ನಿಂದ ಮಾರ್ಚ್ 27 ರಂದು ಅನಂತ್ ಅಂಬಾನಿ ಪಾದಯಾತ್ರೆ ಆರಂಭಿಸಿದ್ದಾರೆ. ಅನಂತ್ ಅಂಬಾನಿ ಆರೋಗ್ಯ, ತೂಕವನ್ನು ಗಮನದಲ್ಲಿಟ್ಟುಕೊಂಡು ದಿನಕ್ಕೆ ಇಂತಿಷ್ಟೇ ಕಿಲೋಮೀಟರ್ ಪಾದಯಾತ್ರೆ ಮಾಡುವಂತೆ ಸೂಚಿಸಿದ್ದಾರೆ. ಆದರೆ ಆನಂತ್ ಅಂಬಾನಿ ಉತ್ಸಾಹ ಹೆಚ್ಚಿದೆ. ಈಗಾಗಲೇ 30 ಕಿಲೋಮೀಟರ್‌ಗೂ ಅಧಿಕ ಪಾದಯಾತ್ರೆ ಮಾಡಿದ್ದಾರೆ.
ಎಪ್ರಿಲ್ 10 ರಂದು ಹುಟ್ಟುಹಬ್ಬ
ಅನಂತ್ ಅಂಬಾನಿ ಪಾದಯಾತ್ರೆ ಮೂಲಕ ದ್ವಾರಕ ಶ್ರೀಕೃಷ್ಣನ ಮಂದಿರ ತಲುಪಲು 12 ರಿಂದ 13 ದಿನ ಬೇಕಾಗಲಿದೆ. ಎಪ್ರಿಲ್ 8 ರಂದು ಅನಂತ್ ಅಂಬಾನಿ ದ್ವಾರಕ ತಲುಪಲಿದ್ದಾರೆ. ಎಪ್ರಿಲ್ 10ರಂದು ಅನಂತ್ ಅಂಬಾನಿ ತಮ್ಮ 30ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಎಪ್ರಿಲ್ 8ರ ವೇಳೆಗೆ ಅನಂತ್ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್ ದ್ವಾರಕ ತಲುಪಲಿದ್ದರೆ. ಬಳಿಕ ಇಬ್ಬರು ಜೊತೆಯಾಗಿ ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ.
ಎಲ್ಲಾ ದಾಖಲೆ ಮುರಿದ ಅನಂತ್ ಅಂಬಾನಿ, ವಿಶ್ವದ ಅತೀ ದುಬಾರಿ ವಾಚ್ ಖರೀದಿ!
ಝೆಡ್ ಪ್ಲಸ್ ಭದ್ರತೆ
ಅನಂತ್ ಅಂಬಾನಿ ಪ್ರತಿ ದಿನ 10 ರಿಂದ 15 ಕಿಲೋಮೀಟರ್ ನಡೆಯುತ್ತಿದ್ದಾರೆ. ಅನಂತ್ ಅಂಬಾನಿ ಪಾದಯಾತ್ರೆಯಲ್ಲಿ ಕೆಲ ವಿಶೇಷತೆಗಳಿವೆ. ಅನಂತ್ ಅಂಬಾನಿಗೆ ಝೆಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದೆ. ಜಾಮ್‌ನಗರದಿಂದ ದ್ವಾರಕ ಮಾರ್ಗ ಮಧ್ಯೆ, ಅದರಲ್ಲೂ ಪ್ರಮುಖವಾಗಿ ಅನಂತ್ ಅಂಬಾನಿ ಪ್ರತಿ ದಿನ ಪಾದಯಾತ್ರೆ ಅಂತ್ಯಗೊಳಿಸುವ ಸ್ಥಳಗಳಲ್ಲಿ ಯಾವುದೇ ಉತ್ತಮ ಹೊಟೆಲ್‌ಗಳಿಲ್ಲ. ಜೊತೆಗೆ ಸುರಕ್ಷತಾ ಕಾರಣದಿಂದ ಪ್ರತಿ ದಿನದ ಪಾದಯಾತ್ರೆ ಅಂತ್ಯಗೊಂಡ ಬಳಿಕ ಅನಂತ್ ಅಂಬಾನಿ ವಾಹನ ಮೂಲಕ ಜಾಮ್‌ನಗರದ ರಿಲಯನ್ಸ್ ಟೌನ್‌ಶಿಪ್‌ಗೆ ಮರಳುತ್ತಾರೆ. ಬಳಿಕ ಮುಂದಿನ ದಿನ ಎಲ್ಲಿ ಪಾದಯಾತ್ರೆ ಅಂತ್ಯಗೊಳಿಸಿದ ಜಾಗದಿಂದ ಮತ್ತೆ ಪಾದಯಾತ್ರೆ ಆರಂಭಿಸುತ್ತಿದ್ದಾರೆ.
ಪಾದಯಾತ್ರೆ ವೇಳೆ ಅನಂತ್ ಅಂಬಾನಿ ಅತೀವ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಾರೆ. ಜೈ ದ್ವಾರಕಾದೀಶ್ ಎಂದು ಘೋಷಣೆ ಕೂಗುತ್ತಾ ಅಂಬಾನಿ ತೆರಳುತ್ತಿದ್ದಾರೆ. ಅಂಬಾನಿ ಜೊತೆ ಕೆಲ ಆತ್ಮೀಯರು ಹೆಜ್ಜೆಹಾಕುತ್ತಿದ್ದಾರೆ. ಪಾದಯಾತ್ರೆ ನಡುವೆ ಹಲವು ಭಕ್ತಾದಿಗಳನ್ನು ಅನಂತ್ ಅಂಬಾನಿ ಬೇಟಿಯಾಗಿದ್ದಾರೆ. ಇದೇ ವೇಳೆ ಹಲವರು ಅನಂತ್ ಅಂಬಾನಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ವಿಶೇಷ ಅಂದರೆ ಅಂಬಾನಿ ಕುಟುಂಬದ ವ್ಯಕ್ತಿಯೊಬ್ಬರು ಪಾದಯಾತ್ರೆ ಮಾಡುತ್ತಿರುವುದು ಇದೇ ಮೊದಲು. ಈ ಸಾಹಸಕ್ಕೆ ಇತರ ಉದ್ಯಮಿಗಳು ಇಳಿದಂತಿಲ್ಲ.
ಅನಂತ್ ಅಂಬಾನಿ ದ್ವಾರಕಾದೀಶ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಶ್ರೀಕೃಷ್ಣನ ಭಕ್ತನಾಗಿರುವ ಅನಂತ್ ಅಂಬಾನಿ ಇತ್ತೀಚೆಗೆ ಮಹಾಕುಂಭ ಮೇಳಕ್ಕೆ ತೆರಳಿ ಪುಣ್ಯಸ್ನಾನ ಮಾಡಿದ್ದರು. ಇನ್ನು ದೇವಸ್ಥಾನಗಳಿಗೆ ಬೇಟಿ ನೀಡುತ್ತಾರೆ, ಪ್ರತಿ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ.
ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ ಅನಂತ್ ಅಂಬಾನಿ!
