Asianet Suvarna News Asianet Suvarna News

Farm Laws Withdrawn: ಅಷ್ಟಕ್ಕೂ ಮೋದಿ ಹಿಂಪಡೆದ ಕೃಷಿ ಕಾಯ್ದೆಯಲ್ಲಿ ಏನಿತ್ತು? ರೈತರಲ್ಲಿ ಆತಂಕ ಯಾಕಿತ್ತು?

* ಮೂರು ಕೃಷಿ ಕಾಯ್ದೆ ವಾಪಸ್ ಪಡೆದ ಪ್ರಧಾನಿ ಮೋದಿ
* ಅಷ್ಟಕ್ಕೂ ಮೋದಿ ಹಿಂಪಡೆದ ಕೃಷಿ ಕಾಯ್ದೆಯಲ್ಲಿ ಏನಿತ್ತು?
* ಮೂರು ಕೃಷಿ ಕಾಯ್ದೆ ಬಗ್ಗೆ ರೈತರಲ್ಲಿ ಏಕೆ ಅಷ್ಟೊಂದು ಆತಂಕ ಇತ್ತು?

an explainer on Repealed Farm Laws and-why-farmers Warried about three bills rbj
Author
Bengaluru, First Published Nov 19, 2021, 4:04 PM IST
  • Facebook
  • Twitter
  • Whatsapp

ಬೆಂಗಳೂರು, (ನ.19): ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಒಂದು ವರ್ಷದ ಬಳಿಕ ಆ ಮೂರು ಕೃಷಿ ಮಸೂದೆಗಳನ್ನು  ವಾಪಸ್(Repealed Farm Laws) ಪಡೆದುಕೊಂಡಿರುವುದು ಭಾರೀ ಕುತೂಹಲ ಮೂಡಿಸಿದೆ. ಅಲ್ಲದೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮೋದಿ ಅವರ ಈ ನಿರ್ಧಾರದ ಉದ್ದೇಶವೇನು..? ಏಕಾಏಕಿಯಾಗಿ ಏಕೆ ಕೃಷಿ ಮಸೂದೆಗಳನ್ನ (Farm Laws) ವಾಪಸ್ ಪಡೆದುಕೊಂಡ್ರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. 

ವಿಪಕ್ಷ ಮತ್ತು ರೈತ (Farmers) ಸಂಘಟನೆಗಳ  ಪ್ರತಿಭಟನೆಯ ನಡುವೆ ಲೋಕಸಭೆಯ ಮುಂಗಾರು ಅಧಿವೇಶನವು ಮೂರು ಕೃಷಿ ಕ್ಷೇತ್ರದ ಮಸೂದೆಗಳನ್ನು ಕೇಂದ್ರ ಸರ್ಕಾರ ಅಂಗೀಕರಿಸಿತ್ತು.  ಕಳೆದ ಸೆ.14ರಂದು ಕೃಷಿ ಮಸೂದೆ (farm bills 2020) ಲೋಕಸಭೆಯಲ್ಲಿ ಮಂಡನೆಯಾಗಿತ್ತು, 17ಕ್ಕೆ ಮಸೂದೆಗೆ ಅಂಗೀಕಾರ ಲಭಿಸಿತ್ತು. ಸೆ.20ಕ್ಕೆ ರಾಜ್ಯಸಭೆಯಲ್ಲಿಯೂ ಅಂಗೀಕಾರ ಲಭಿಸಿ, 27ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ (Ram Nath Kovind) ಮೂರು ಮಸೂದೆಗಳಿಗೂ ಅಂಕಿತ ಹಾಕಿದ್ದರು. ಆ ಮೂಲಕ ಈ ಮಸೂದೆಗಳು ಕಾಯ್ದೆಗಳಾಗಿ ಚಾಲ್ತಿಗೆ ಬಂದವು.

PM Address to Nation: ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಘೋಷಿಸಿದ ಪ್ರಧಾನಿ ಮೋದಿ

ಇಷ್ಟಕ್ಕೂ ‘ರೈತರ ಮರಣ ಶಾಸನ’ವೆಂದೇ ಬಿಂಬಿತವಾಗಿದ್ದ ಆ ಕೃಷಿ ಕಾಯ್ದೆ ಯಾವುದು..? ರೈತರಿಗೇಕೆ ಇಷ್ಟೊಂದು ಆತಂಕ ಇತ್ತು..? ಅಷ್ಟಕ್ಕೂ ಹಿಂಪೆಡೆದ ಕೃಷಿ ಕಾಯ್ದೆಯಲ್ಲಿ ಏನಿತ್ತು? ಎನ್ನುವ ಒಂದು ಸಂಕ್ಷಿಪ್ತ ವರದಿ ಈ ಕೆಳಗಿನಂತಿದೆ ನೋಡಿ.

ರಾಜ್ಯ/ಅಂತಾರಾಜ್ಯದಲ್ಲೂ ಮಾರಾಟಕ್ಕೆ ಅವಕಾಶ
ತಿದ್ದುಪಡಿ ನಂತರದಲ್ಲಿ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಪ್ರಾಂಗಣದಲ್ಲಿ ಅಥವಾ ರಾಜ್ಯದ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಮಾರಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿತ್ತು. ಅಂತರ್‌ ಜಿಲ್ಲೆ ಮತ್ತು ರಾಜ್ಯಗಳಲ್ಲಿ ರೈತರು ನಿರ್ಧರಿಸಿದ ಬೆಲೆಗೆ ಮಾರಾಟ ಮಾಡಲು ಅವಕಾಶವನ್ನು ಮಾಡಿಕೊಡಲಾಗಿತ್ತು.

ಇದ್ದಲ್ಲಿಗೇ ಬಂದು ಖರೀದಿ
ರೈತ ಬಾಂಧವರು ಯಾವುದೇ ವ್ಯಾಪಾರಿಗಳಿಗೆ, ಯಾವುದೇ ಮಾರುಕಟ್ಟೆಗಳಲ್ಲಿ ಬೆಳೆಯನ್ನು ಮಾರಾಟ ಮಾಡಬಹುದು. ಇದಲ್ಲದೆ, ಬೇರೆ ರಾಜ್ಯಗಳಿಗೂ ತೆರಳಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶವನ್ನ ಕಲ್ಪಿಸಲಾಗಿತ್ತು.  ಇಲ್ಲವೇ ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಇಲ್ಲವೇ ಹೊಲಗಳಿಗೇ ಬಂದು ಬೆಳೆಗಳನ್ನು ಖರೀದಿ ಮಾಡಬಹುದಾಗಿತ್ತು.

ಹೆಚ್ಚಲಿದೆ ಸ್ಪರ್ಧೆ, ಬೆಲೆ ಏರಲಿದೆ
ಯಾರಿಗೆ ಬೇಕಾದರೂ ಎಲ್ಲಿ ಬೇಕಾದರೂ ಬೆಳೆಯನ್ನು ಮಾರಾಟ ಮಾಡುವ ಹಕ್ಕನ್ನು ರೈತರಿಗೆ ನೀಡಿರುವ ಪರಿಣಾಮ ರೈತನಿಗೆ ಹೆಚ್ಚಿನ ಅವಕಾಶಗಳು ಸಿಗುವುದರೊಂದಿಗೆ ವ್ಯಾಪಾರಿಗಳ ಮಧ್ಯೆ ಸ್ಪರ್ಧೆ ಏರ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಒಬ್ಬರಿಗೇ ಮಾರಾಟ ಮಾಡಬೇಕೆಂಬ ನಿಬಂಧನೆಗಳಿಲ್ಲದೆ, ಹೆಚ್ಚು ಬೆಲೆ ಕೊಟ್ಟು ಕೊಂಡುಕೊಳ್ಳುವವರಿಗೆ ಮಾರಾಟ ಮಾಡಿ ರೈತರು ಅಧಿಕ ಲಾಭವನ್ನು ಗಳಿಸಬಹುದು.

ಮುಕ್ತ ಮಾರುಕಟ್ಟೆ ಅವಕಾಶ
ರೈತ-ಮಾರಾಟಗಾರರಿಗೆ ಈಗಾಗಲೇ ಇರುವ ವಿವಿಧ ಮಾರುಕಟ್ಟೆಚಾನಲ್‌ಗಳಾದ ಮಾರುಕಟ್ಟೆಪ್ರಾಂಗಣ, ನೇರ ಖರೀದಿ ಕೇಂದ್ರ, ಖಾಸಗಿ ಮಾರುಕಟ್ಟೆಪ್ರಾಂಗಣ, ರೈತ-ಗ್ರಾಹಕ ಮಾರುಕಟ್ಟೆಪ್ರಾಂಗಣ ವೇರ್‌ಹೌಸ್‌ ಇತ್ಯಾದಿಗಳೊಂದಿಗೆ ಈಗ ಮತ್ತೊಂದು ಉತ್ತಮ ಬದಲಿ ಸೌಕರ್ಯ ಲಭ್ಯವಿರುವಂತಾಗಿದ್ದು, ಮುಕ್ತ ಮಾರುಕಟ್ಟೆ ಅವಕಾಶ ಇತ್ತು.

ದಂಡ ಹಾಗೂ ಶಿಕ್ಷೆ ಇಲ್ಲ
ಕೇಂದ್ರ ಸರ್ಕಾರದ ಕಾಯ್ದೆ ಪೂರ್ವದಲ್ಲಿ ಇದ್ದ ರಾಜ್ಯ ಸರ್ಕಾರದ ಎಪಿಎಂಸಿ ಕಾಯ್ದೆಯಡಿ ಉತ್ಪನ್ನಗಳ ವ್ಯಾಪಾರ ನಿಯಂತ್ರಣ ರಾಜ್ಯ ವ್ಯಾಪ್ತಿ ಇತ್ತು. ಅದರನ್ವಯ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣದಲ್ಲಿಯೇ ಮಾರುವುದು ಅನಿವಾರ್ಯವಿತ್ತು. ಪ್ರಾಂಗಣದ ಹೊರಗೆ ಯಾವುದೇ ವ್ಯಾಪಾರಿ ಖರೀದಿಸಿದಲ್ಲಿ ದಂಡ ಮತ್ತು ಕಾರಾಗೃಹ ವಾಸದ ಶಿಕ್ಷೆಗೆ ಗುರಿಯಾಗಬೇಕಿತ್ತು. ಪ್ರಸ್ತುತ ತಿದ್ದುಪಡಿಯಲ್ಲಿ ದಂಡ ಮತ್ತು ಶಿಕ್ಷೆ ವಿಧಿಸುವುದನ್ನು ಕೈಬಿಟ್ಟಿರುವುದರಿಂದ ವ್ಯಾಪಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು.

ರೈತರ ಆತಂಕ ಏನಿತ್ತು?
* ಹೊಸ ಕೃಷಿ ಕಾಯ್ದೆಗಳ ಸದ್ಯ ಜಾರಿಯಲ್ಲಿರುವ ಕನಿಷ್ಠ ಬೆಂಬಲ ಬೆಲ ವ್ಯವಸ್ಥೆಯನ್ನು ಕಿತ್ತು ಹಾಕುತ್ತವೆ.
* ಸ್ವಾಮಿನಾಥನ್ ವರದಿ ಉಲ್ಲೇಖ ಇಲ್ಲ
* ಈ ಕಾಯ್ದೆಗಳ ನಿಯಮಗಳ ಅನ್ವಯ ಮುಂದೊಂದು ದಿನ ಕಾರ್ಪೋರೇಟ್ ಕಂಪನಿಗಳು ರೈತರ ಮೇಲೆ ಸರ್ವಾಧಿಯಾಗುತ್ತವೆ.
* ರೈತ ತಾನು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವುದಿಲ್ಲ.
* ಸಾಲ ನೀಡುತ್ತಿರುವ ಕಮಿಷನ್ ಏಜೆಂಟ್‌ಗಳು ಸಹ ಮರೆಯಾಗುತ್ತಾರೆ ಎಂಬುದು ರೈತರ ಆತಂಕವಾಗಿತ್ತು.

ಸರ್ಕಾರ ಹೇಳಿದ್ದೇನು?
* ಕೃಷಿಯಲ್ಲಿ ಸುಧಾರಣೆ ತರುವ ದೃಷ್ಟಿಯಿಂದ ಈ ಮೂರು ಕಾಯ್ದೆಗಳು ಅತ್ಯಂತ ಪ್ರಮುಖವಾಗಿವೆ .
* ಮದ್ಯವರ್ತಿಗಳ ಕಾಟ ಕೊನೆಗಾಣಿಸಲು ತಮ್ಮ ಉತ್ಪನ್ನ ದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತದೆ.
* APMCಗಳಲ್ಲಿ ಮಾತ್ರ ರೈತರ ಉತ್ಪನ್ನ ಮಾರಾಟ ಮಾಡುವ ವ್ಯವಸ್ಥೆ ಇತ್ತು. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಎಪಿಎಂಸಿಯ ಹೊರಗಡೆಯೂ ದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡಲು ಅವಕಾಶ ಸಿಗುತ್ತದೆ.

Follow Us:
Download App:
  • android
  • ios