Adoption Battle| 1 ವರ್ಷದ ಮಗುವಿಗಾಗಿ ಕೇರಳ- ಆಂಧ್ರ ಜಗಳ, DNA ಟೆಸ್ಟ್‌ವರೆಗೆ ತಲುಪಿದ ಕೇಸ್!
* ದತ್ತು ಮಗುವಿನಿಂದಾಗಿ ಎರಡು ರಾಜ್ಯಗಳ ನಡುವೆ ಮುನಿಸು
* ಹೆತ್ತವರ ಅನುಮತಿ ಇಲ್ಲದೇ ಮಗು ದತ್ತು ಕೊಟ್ಟ ಸಂಸ್ಥೆ
* ಡಿಎನ್‌ಎ ಟೆಸ್ಟ್‌ವರೆಗೆ ತಲುಪಿದ ಪ್ರಕರಣ
ತಿರುವನಂತಪುರಂ(ನ.22): ಇತ್ತೀಚೆಗಷ್ಟೇ ಕೇರಳದಲ್ಲಿ (Kerala) ಮಗುವನ್ನು ಅಕ್ರಮವಾಗಿ ದತ್ತು (Child Adoption) ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಈ ಮಗುವನ್ನು ಆಂಧ್ರಪ್ರದೇಶದ (Andhra Pradesh) ದಂಪತಿ ದತ್ತು ಪಡೆದು ಒಂದು ವರ್ಷದಿಂದ ಆರೈಕೆ ಮಾಡುತ್ತಿದ್ದರು. ಅದೇ ಸಮಯದಲ್ಲಿ, ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯ (KSCCW) ಅಧಿಕಾರಿಗಳು ಇದೀಗ ಈ ಮಗುವನ್ನು ದಂಪತಿಯಿಂದ ವಾಪಸ್ ಪಡೆದು ತಮ್ಮೊಂದಿಗೆ ಮಗುವನ್ನು ಕೇರಳಕ್ಕೆ ಕರೆತಂದಿದ್ದಾರೆ. ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ (Kerala State Council for Child Welfare) ಅಧಿಕಾರಿಗಳು ತಡರಾತ್ರಿ ಆಂಧ್ರಪ್ರದೇಶ ತಲುಪಿ ಮಗುವನ್ನು ರಾಜ್ಯಕ್ಕೆ ಕರೆತಂದಿದ್ದಾರೆ. ಈ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ (Child welfare Committee) ಮಕ್ಕಳ ಆರೈಕೆ ಸಂಸ್ಥೆಗೆ ಹಸ್ತಾಂತರಿಸಿದೆ.
ಏನಿದು ಪ್ರಕರಣ?
ಆಂಧ್ರಪ್ರದೇಶದ ದಂಪತಿ ಒಂದು ವರ್ಷದ ಗಂಡು ಮಗುವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈ ಮಗು ಅನುಪಮಾ ಎಸ್ ಚಂದ್ರನ್ (Anupama S Chandran) ಅವರದ್ದು ಎಂಬ ಸಂದೇಶವಿತ್ತು. ಅನುಪಮಾ ಎಸ್ ಚಂದ್ರನ್ ಪ್ರಕಾರ, ಆಕೆಯ ಪೋಷಕರು ಹುಟ್ಟಿದ ಕೂಡಲೇ ಮಗುವನ್ನು ಅವಳಿಂದ ಬೇರ್ಪಡಿಸಿದರು ಮತ್ತು ಅವಳನ್ನು ಅಪಹರಿಸಿದ್ದರೆನ್ನಲಾಗಿದೆ. ಹೆತ್ತವರ ಒಪ್ಪಿಗೆ ಇಲ್ಲದೇ ಒಂದು ವರ್ಷದ ಹಿಂದೆ ಕೆಎಸ್‌ಸಿಸಿಡಬ್ಲ್ಯು (KSCCW) ಮೂಲಕ ಮಗುವನ್ನು ದತ್ತು ಕೊಡಲಾಗಿತ್ತು. ಈ ಮಗು ಆಂಧ್ರಪ್ರದೇಶದ ದಂಪತಿಯ ಆರೈಕೆಯಲ್ಲಿತ್ತು.
ಧರಣಿ ನಡೆಸುತ್ತಿದ್ದಾರೆ ಅನುಪಮಾ
ಅನುಪಮಾ ಎಸ್ ಚಂದ್ರನ್ ಮತ್ತು ಅವರ ಸಂಗಾತಿ ಅಜಿತ್ (Ajith) ತಮ್ಮ ಮಗುವನ್ನು ಹಿಂತಿರುಗಿಸುವಂತೆ ಒತ್ತಾಯಿಸಿ ಕೆಎಸ್‌ಸಿಸಿಡಬ್ಲ್ಯೂ(KSCCW)ಕಚೇರಿಯ ಎದುರು ಕೆಲವು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಅದೇ ಸಮಯದಲ್ಲಿ, ಮಕ್ಕಳ ಕಲ್ಯಾಣ ಆಯೋಗವು ನವೆಂಬರ್ 18 ರಂದು ಆದೇಶವನ್ನು ಹೊರಡಿಸಿ, ಮಗುವನ್ನು ಮರಳಿ ರಾಜ್ಯಕ್ಕೆ ಕರೆತರಲು KSCCW ಗೆ ನಿರ್ದೇಶನ ನೀಡಿದೆ.
ಆದೇಶದ ನಂತರ ಕೆಎಸ್‌ಸಿಸಿಡಬ್ಲ್ಯು ಅಧಿಕಾರಿಗಳ ನೇತೃತ್ವದ ತಂಡ ಆಂಧ್ರಪ್ರದೇಶಕ್ಕೆ ತೆರಳಿ ದಂಪತಿಯಿಂದ ಮಗುವನ್ನು ಶನಿವಾರ ವಾಪಸ್ ಪಡೆದಿದೆ. ಭಾನುವಾರ ರಾತ್ರಿ ಮಗುವಿನೊಂದಿಗೆ ತಂಡವು ತಿರುವನಂತಪುರಂ ವಿಮಾನ ನಿಲ್ದಾಣ ತಲುಪಿದೆ. CWC ಯ ನಿರ್ದೇಶನದಂತೆ ಮಗುವನ್ನು ಮಕ್ಕಳ ಆರೈಕೆ ಸಂಸ್ಥೆಗೆ ನಿಯೋಜಿಸಲಾಗಿದೆ. CWC ಯ ಆದೇಶದ ಪ್ರಕಾರ, ಮಗುವಿನ ಜೈವಿಕ ಪೋಷಕರನ್ನು ಕಂಡುಹಿಡಿಯಲು DNA ಪರೀಕ್ಷೆಯ ಸಹಾಯವನ್ನು ತೆಗೆದುಕೊಳ್ಳಲಾಗುತ್ತದೆ.
ಮಕ್ಕಳಿಗೆ ಬರೆದುಕೊಟ್ಟ ಆಸ್ತಿ ವಾಪಸ್ ಪಡೆದುಕೊಳ್ಳುವ ಹಕ್ಕು ವೃದ್ಧರಿಗಿದೆ
ವಯಸ್ಸಾದ ತಂದೆ, ತಾಯಿ ಮತ್ತು ಅತ್ತೆ, ಮಾವಂದಿರ (Parents) ಯೋಗ ಕ್ಷೇಮ ನೋಡದ ಮಕ್ಕಳಿಗೆ (children) ಬರೆದುಕೊಟ್ಟ ಆಸ್ತಿಯನ್ನು (property) ವಾಪಸ್ ಪಡೆದುಕೊಳ್ಳುವ ಹಕ್ಕು ಆ ವೃದ್ಧರಿಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ (judge Sujatha madivalappa sambrani ) ಹೇಳಿದರು.
ಪಟ್ಟಣದ ಸಮೀಪದ ಅಂಕನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾನೂನು ಹರಿವು - ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಒಬ್ಬ ವ್ಯಕ್ತಿ ತಂದೆ (Father), ತಾಯಿಗೆ (Mother) ವಯಸ್ಸಾದ ಮೇಲೆ ಅವರ ಪೋಷಣೆ ಮಾಡುವುದು ಪ್ರತಿ ಒಬ್ಬ ಮಕ್ಕಳ ಕರ್ತವ್ಯ. ಆದರೆ ಕೆಲವು ಮಕ್ಕಳು ಅವರ ಆಸ್ತಿ ಹಣ ಎಲ್ಲವನ್ನು ಬಳಸಿಕೊಂಡು ಅವರ ಕ್ಷೇಮತೆಯನ್ನು ನೋಡದೆ ಬೇರೆ ಕಳುಹಿಸಿ ಒಪ್ಪತ್ತಿನ ಉಟಕ್ಕೂ (Food) ಗತಿ ಇಲ್ಲದಂತೆ ಮಾಡಿರುವ ಘಟನೆಗಳಿವೆ. ಅದು ಬದಲಾವಣೆ ಆಗಬೇಕು ಏಕೆಂದರೆ ಅವರು ಕೊಟ್ಟಿರುವ ಆಸ್ತಿಯನ್ನು ಮತ್ತೆ ಅವರೇ ಪಡೆದುಕೊಳ್ಳುವ ಅವಕಾಶ ಉಚಿತ ಕಾನೂನಿನಡಿ ಇದೆ ಎಂದು ತಿಳಿಸಿದರು.