ಡಿಸೈನರ್ ಎಂದು ಹೇಳಿಕೊಂಡು ಬಂದ ಮಹಿಳೆ ತನ್ನ ತಂದೆ ಎದುರಿಸುತ್ತಿರುವ ಕ್ರಿಮಿನಲ್ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು 1 ಕೋಟಿ ರೂ. ಲಂಚ ನೀಡುವುದಾಗಿ ಹೇಳಿದ್ರು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಪತ್ನಿ ಹಾಗೂ ಬ್ಯಾಂಕರ್‌ ಆಗಿರುವ ಅಮೃತಾ ಫಡ್ನವೀಸ್‌ ಹೇಳಿದ್ದಾರೆ.

ಮುಂಬೈ (ಮಾರ್ಚ್‌ 16, 2023): ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ಮುಂಬೈನಲ್ಲಿ ಡಿಸೈನರ್ ವಿರುದ್ಧ ಬೆದರಿಕೆ ಮತ್ತು ಪಿತೂರಿ ಆರೋಪಗಳನ್ನು ಒಳಗೊಂಡ ದೂರು ದಾಖಲಿಸಿದ್ದಾರೆ. ಫೆಬ್ರವರಿ 20 ರಂದು ಸಲ್ಲಿಸಿದ ಎಫ್‌ಐಆರ್‌ ಅಡಿಯಲ್ಲಿ ಅಮೃತಾ ಫಡ್ನವಿಸ್ ಅವರು "ಅನಿಕ್ಷಾ" ಎಂಬ ಮಹಿಳೆ ಮತ್ತು ಆಕೆಯ ತಂದೆಯ ಹೆಸರನ್ನು ದೂರಿನಲ್ಲಿ ದಾಖಲಿಸಿದ್ದಾರೆ. 

ಡಿಸೈನರ್ ಎಂದು ಹೇಳಿಕೊಂಡು ಬಂದ ಮಹಿಳೆ ತನ್ನ ತಂದೆ ಎದುರಿಸುತ್ತಿರುವ ಕ್ರಿಮಿನಲ್ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು 1 ಕೋಟಿ ರೂ. ಲಂಚ ನೀಡುವುದಾಗಿ ಹೇಳಿದ್ರು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಪತ್ನಿ ಹಾಗೂ ಬ್ಯಾಂಕರ್‌ ಆಗಿರುವ ಅಮೃತಾ ಫಡ್ನವೀಸ್‌ ಹೇಳಿದ್ದಾರೆ. 2021 ರ ನವೆಂಬರ್‌ ತಿಂಗಳಲ್ಲೇ ಆ ಮಹಿಳೆ ನನ್ನನ್ನು ಮೊದಲ ಬಾರಿ ಸಂಪರ್ಕಿಸಿದ್ದರು ಎಂದೂ ಅಮೃತಾ ಫಡ್ನವೀಸ್‌ ಹೇಳಿದ್ದಾರೆ. 

ಇದನ್ನು ಓದಿ: ನವ ಭಾರತದ 'ರಾಷ್ಟ್ರಪಿತ' ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಧಾನಿಯನ್ನು ವ್ಯಂಗ್ಯವಾಡಿದ ನಿತೀಶ್‌

ಅಲ್ಲದೆ, ಫೆಬ್ರವರಿ 18 ಮತ್ತು 19 ರಂದು ಮಹಿಳೆ ತನ್ನ ವಿಡಿಯೋ ಕ್ಲಿಪ್‌ಗಳು, ಧ್ವನಿ ಟಿಪ್ಪಣಿಗಳು ಮತ್ತು ಸಂದೇಶಗಳನ್ನು ಅಪರಿಚಿತ ಸಂಖ್ಯೆಯಿಂದ ಕಳುಹಿಸಿದ್ದಾಳೆ ಎಂದೂ ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಈ ಸಂಬಂಧ ಮುಂಬೈ ಪೊಲೀಸರು ಮಹಿಳೆ ಮತ್ತು ಆಕೆಯ ತಂದೆ ವಿರುದ್ಧ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. 

 "ಬಟ್ಟೆಗಳು, ಆಭರಣಗಳು ಮತ್ತು ಪಾದರಕ್ಷೆಗಳ ಡಿಸೈನರ್" ಎಂದು ಆ ಮಹಿಳೆ ಹೇಳಿಕೊಂಡಿದ್ದಳು ಎಂದೂ ಅಮೃತಾ ಫಡ್ನವೀಸ್‌ ಪೊಲೀಸರಿಗೆ ತಿಳಿಸಿದ್ದಾರೆ. ಮೊದಲು, ಅವರು ವಿನ್ಯಾಸಗೊಳಿಸಿದ ಉತ್ಪನ್ನಗಳನ್ನು ಸಾರ್ವಜನಿಕ ಸಮಾರಂಭಗಳಲ್ಲಿ ಧರಿಸಲು ನನ್ನನ್ನು ವಿನಂತಿಸಿದರು. ಇದರಿಂದ ಅವರ ಬಟ್ಟೆ, ಆಭರಣಗಳು ಮತ್ತು ಪಾದರಕ್ಷೆಗಳನ್ನು ಪ್ರಚಾರ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದರು. ಬಳಿಕ, ಇದಕ್ಕೆ ನಾನು ಒಪ್ಪಿಗೆ ಸೂಚಿಸಿದ್ದೆ. 

ಇದನ್ನೂ ಓದಿ: ಪ್ರಧಾನಿ ಮೋದಿ ರಾಷ್ಟ್ರಪಿತ; ದೇಶದಲ್ಲಿ ಇಬ್ಬರು ರಾಷ್ಟ್ರಪಿತರು ಎಂದ ದೇವೇಂದ್ರ ಫಡ್ನವೀಸ್‌ ಪತ್ನಿ ಅಮೃತಾ

ಅವರ ಮೊದಲ ಮೀಟಿಂಗ್‌ನಲ್ಲಿ, ಮಹಿಳೆ ತನ್ನ ತಾಯಿಯನ್ನು ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದಳು ಎಂದು ಎಫ್‌ಐಆರ್ ಹೇಳುತ್ತದೆ.
ನಂತರ, ಮಹಿಳೆ ಆಗಾಗ್ಗೆ ಡಿಸೈನರ್ ಬಟ್ಟೆಗಳು ಮತ್ತು ಆಭರಣಗಳನ್ನು ಅಮೃತಾ ಫಡ್ನವಿಸ್ ಅವರ ಸಿಬ್ಬಂದಿಗೆ ಹಸ್ತಾಂತರಿಸುತ್ತಿದ್ದರು ಮತ್ತು ಅವುಗಳನ್ನು ಧರಿಸುವಂತೆ ಕೇಳಿಕೊಳ್ಳುತ್ತಿದ್ದರು ಎಂದೂ ಆರೋಪಿಸಲಾಗಿದೆ. 

“ಒಮ್ಮೆ, ಅವಳು ಬಂದು ಕೆಲವು ವಿನ್ಯಾಸಕ ಬಟ್ಟೆಗಳು ಮತ್ತು ಆಭರಣಗಳನ್ನು ನಮ್ಮ ಸಿಬ್ಬಂದಿಯೊಬ್ಬರಿಗೆ ಹಸ್ತಾಂತರಿಸಿದರು ಮತ್ತು ಯಾವುದಾದರೂ ಸಾರ್ವಜನಿಕ ಸಮಾರಂಭದಲ್ಲಿ ಅದನ್ನು ಧರಿಸಲು ನನ್ನನ್ನು ವಿನಂತಿಸಿದರು. ನಾನು ಆ ಉಡುಪನ್ನು ಧರಿಸಿದ್ದೆನೋ ಇಲ್ಲವೋ ನನಗೆ ನೆನಪಿಲ್ಲ. ನನ್ನ ಸಿಬ್ಬಂದಿಯ ಮೂಲಕ ಆಕೆಗೆ ವಸ್ತುಗಳನ್ನು ಹಿಂತಿರುಗಿಸಲಾಗಿದೆ ಅಥವಾ ದಾನ ಮಾಡಲಾಗಿದೆ” ಎಂದೂ ಅಮೃತಾ ಫಡ್ನವಿಸ್ ಪೊಲೀಸರಿಗೆ ತಿಳಿಸಿದ್ದಾರೆ.

ನಂತರ, ಒಂದು ಸಭೆಯಲ್ಲಿ, ತನ್ನ ತಂದೆಯು ವಿವಿಧ ರಾಜಕೀಯ ಪಕ್ಷಗಳ ನಾಯಕರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು ಮತ್ತು ನಂತರ ನನಗೆ ನೀಡುವಂತೆ ಸೂಚಿಸಿ (ಸಿಬ್ಬಂದಿಗೆ ಒಬ್ಬರಿಗೆ) ಒಂದು ಲಕೋಟೆ ನೀಡಿದರು ಎಂದು ಅನೀಕ್ಷಾ ಹೇಳಿದ್ದರು. ನಾನು ಅದನ್ನು ತೆರೆದಾಗ, ಕೈಬರಹದ ಟಿಪ್ಪಣಿ ಇತ್ತು. ಆದರೆ ನನಗೆ ವಿಷಯ ಅರ್ಥವಾಗದ ಕಾರಣ, ನಾನು ಕಾಗದವನ್ನು ಪಕ್ಕಕ್ಕೆ ಇರಿಸಿದೆ ಎಂದೂ ಎಫ್‌ಐಆರ್ ಹೇಳುತ್ತದೆ.

ಬಳಿಕ, ಮಹಿಳೆ ಒಮ್ಮೆ ತನ್ನ ಅಂಗರಕ್ಷಕನಿಗೆ ಸುಳ್ಳು ಹೇಳಿ ತನ್ನ ಕಾರಿನಲ್ಲಿ ಕುಳಿತುಕೊಂಡಿದ್ದಾಳೆ. ಈ ವೇಳೆ ತನ್ನ ತಂದೆ ಬುಕ್ಕಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು., ಬುಕ್ಕಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸುವ ಮೂಲಕ ಹಣ ಸಂಪಾದಿಸಬಹುದು ಅಥವಾ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಅವರಿಂದ ಹಣ ಪಡೆಯಬಹುದು" ಎಂದು ಮಹಿಳೆ ಹೇಳಿದ್ದ ಬಗ್ಗೆಯೂ ಅಮೃತಾ ಫಡ್ನವೀಸ್‌ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.